ಕೆತ್ತಿಬಿಡಬೇಕು ಕನಸ್ಸುಗಳನ್ನು ಕಣ್ಣುಗಳ ಒಳಗೆ
ಕಣ್ತೆರೆದರು ಮುಚ್ಚಿದರು ಗುರಿ ಎಂದು ಬದಲಾಗದ ಹಾಗೆ
ಬಿತ್ತಿಬಿಡಬೇಕು ಛಲವ ಮನದ ಮಣ್ಣಿನೊಳಗೆ
ಬೆಳೆವ ಮರವು ಭುವಿಯ ಅಗೆದು
ಬೇರುಗಳ ಒಳಗಿಳಿಸುವ ಹಾಗೆ
ಕೆತ್ತಿಬಿಡಬೇಕು ಕನಸ್ಸುಗಳ ಕಣ್ಣುಗಳ ಒಳಗೆ
ಬಿತ್ತಿಬಿಡಬೇಕು ಛಲವ ಮನದ ಮಣ್ಣಿನ ಒಳಗೆ
ತೊಡರುಗಳು ಬರಲಿ ಸಾವಿರ
ತುತ್ತುಕೊಟ್ಟವಳ ಹರಕೆ ಇರುವುದು ಹತ್ತಿರ
ಅಳುಕದಿರು ಜಗವು ನಶ್ವರ
ರಾತ್ರಿಯಾದ ಮೇಲೆ ಹಗಲು ಬರುವುದು ನಿರಂತರ
ಬೆನ್ನು ಬಾಗಿಸಿ ಕಲಿಯುವುದ ಕಲಿತರೆ
ಬೆನ್ನ ತಟ್ಟುವ ಬೆಂಬಲದ ಹಸ್ತಗಳಿವೆ ಸಾವಿರ
||ಕೆತ್ತಿಬಿಡಬೇಕು ಕನಸ್ಸುಗಳ ಕಣ್ಣುಗಳ ಒಳಗೆ
ಬಿತ್ತಿಬಿಡಬೇಕು ಛಲವ ಮನದ ಮಣ್ಣಿನ ಒಳಗೆ||
ದಡವ ಸೇರಿದೆ ದೋಣಿಯು
ಅದರ ದುಡಿಮೆಯು ಅಪಾರ
ಕಾದ ಮಳೆಯ ಹನಿಯೊಂದು
ಚಿಪ್ಪು ಸೇರಿ ಮುತ್ತಾದ ಸಡಗರ
ನಿನನ ಗೆಲುವು ಬಯಸಿದ್ದ ಜೀವಗಳಿಗೆ
ಕಡಲಷ್ಟು ಖುಷಿ ಸಿಕ್ಕ ಹಿತಕರ
||ಕೆತ್ತಿಬಿಡಬೇಕು ಕನಸ್ಸುಗಳ ಕಣ್ಣುಗಳ ಒಳಗೆ
ಬಿತ್ತಿಬಿಡಬೇಕು ಛಲವ ಮನದ ಮಣ್ಣಿನ ಒಳಗೆ||
ಕೆತ್ತಿಬಿಡಬೇಕು ಕನಸ್ಸುಗಳನ್ನು ಕಣ್ಣುಗಳ ಒಳಗೆ
ಕಣ್ತೆರೆದರು ಮುಚ್ಚಿದರು ಗುರಿ ಎಂದು ಬದಲಾಗದ ಹಾಗೆ
ಬಿತ್ತಿಬಿಡಬೇಕು ಛಲವ ಮನದ ಮಣ್ಣಿನೊಳಗೆ
ಬೆಳೆವ ಮರವು ಭುವಿಯ ಅಗೆದು
ಬೇರುಗಳ ಒಳಗಿಳಿಸುವ ಹಾಗೆ
ಕೆತ್ತಿಬಿಡಬೇಕು ಕನಸ್ಸುಗಳ ಕಣ್ಣುಗಳ ಒಳಗೆ
ಬಿತ್ತಿಬಿಡಬೇಕು ಛಲವ ಮನದ ಮಣ್ಣಿನ ಒಳಗೆ
ತೊಡರುಗಳು ಬರಲಿ ಸಾವಿರ
ತುತ್ತುಕೊಟ್ಟವಳ ಹರಕೆ ಇರುವುದು ಹತ್ತಿರ
ಅಳುಕದಿರು ಜಗವು ನಶ್ವರ
ರಾತ್ರಿಯಾದ ಮೇಲೆ ಹಗಲು ಬರುವುದು ನಿರಂತರ
ಬೆನ್ನು ಬಾಗಿಸಿ ಕಲಿಯುವುದ ಕಲಿತರೆ
ಬೆನ್ನ ತಟ್ಟುವ ಬೆಂಬಲದ ಹಸ್ತಗಳಿವೆ ಸಾವಿರ
||ಕೆತ್ತಿಬಿಡಬೇಕು ಕನಸ್ಸುಗಳ ಕಣ್ಣುಗಳ ಒಳಗೆ
ಬಿತ್ತಿಬಿಡಬೇಕು ಛಲವ ಮನದ ಮಣ್ಣಿನ ಒಳಗೆ||
ದಡವ ಸೇರಿದೆ ದೋಣಿಯು
ಅದರ ದುಡಿಮೆಯು ಅಪಾರ
ಕಾದ ಮಳೆಯ ಹನಿಯೊಂದು
ಚಿಪ್ಪು ಸೇರಿ ಮುತ್ತಾದ ಸಡಗರ
ನಿನನ ಗೆಲುವು ಬಯಸಿದ್ದ ಜೀವಗಳಿಗೆ
ಕಡಲಷ್ಟು ಖುಷಿ ಸಿಕ್ಕ ಹಿತಕರ
||ಕೆತ್ತಿಬಿಡಬೇಕು ಕನಸ್ಸುಗಳ ಕಣ್ಣುಗಳ ಒಳಗೆ
ಬಿತ್ತಿಬಿಡಬೇಕು ಛಲವ ಮನದ ಮಣ್ಣಿನ ಒಳಗೆ||