ಬೀಸಿ ಬರುವ ಗಾಳಿ ಮಾತ ಕುಸುಮಬಾಲೆ ಕೇಳೆ
ನಿನ್ನ ಮುದ್ದು ಕೈಲೆ ಉಂಟು ಅಂದವಾದ ನಾಳೆ
ರವಿ ಮೂಡುವಂತ ವೇಳೆ ಜಗವೊಂದು ಪಾಠಶಾಲೆ
ಶುರುವೀಗ ಪ್ರಾರ್ಥನೆ
ಬೆಳಕಿನ ಗುಟುಕನು ಮರಿಯೆ ಹೀರು ನೀ
ಗುರಿಯೆಡೆ ಗರಿಯನು ತೆರೆದು ಹಾರು ನೀ
ಮುಗ್ಧವಾದ ಖಾಲಿಹಾಳೆ ನಿನ್ನ ಭಾವ ಭೂಮಿಕೆ
ಗೀಚು ನೀನೆ ನೀಲಿ ನಕ್ಷೆ ನಿನ್ನ ಬಾಳ ಪಯಣಕೆ
ನೀಡುತ ಪ್ರಶ್ನೆಗೆ ಉತ್ತರ ನಿಲ್ಲು ನೀನು ತೀಪದಂತೆ
ಸುತ್ತಲು ಮುತ್ತಿದ ಕತ್ತಲು ದೂರ ಹೋಗುವಂತೆ
ಸರಿಸಾಟಿಯಾಗು ಎಲ್ಲರ ಜೊತೆ
ಬೆಳಕಿನ ಗುಟುಕನು ಮರಿಯೆ ಹೀರು ನೀ
ಗುರಿಯೆಡೆ ಗರಿಯನು ತೆರೆದು ಹಾರು ನೀ
ನಿನ್ನ ಜ್ಞಾನದ ದಾಹದಿಂದ ಮೂಡಿ ಬರಲಿ ನೆಮ್ಮದಿ
ಎಲ್ಲ ಹಸಿವು ನೀಗುವಂತ ಬಾಳಿಗೊಂದು ತಳಹದಿ
ಎಂತದೆ ಅಡ್ಡಿಯು ಬಂದರು ದಾಟಬಲ್ಲೆ ನೀನು ಧೀರೆ
ಕಾಗದದ ಹೂವಿನ ಸಾಲಲಿ ಕಾಡು ಹೂವೆ ನೀನೆ ಬೇರೆ
ಇಡು ಮುಂದೆ ಹೆಜ್ಜೆ ಹಿಂದೆ ನೋಡದೆ
ಬೆಳಕಿನ ಗುಟುಕನು ಮರಿಯೆ ಹೀರು ನೀ
ಗುರಿಯೆಡೆ ಗರಿಯನು ತೆರೆದು ಹಾರು ನೀ
ಬೀಸಿ ಬರುವ ಗಾಳಿ ಮಾತ ಕುಸುಮಬಾಲೆ ಕೇಳೆ
ನಿನ್ನ ಮುದ್ದು ಕೈಲೆ ಉಂಟು ಅಂದವಾದ ನಾಳೆ
ರವಿ ಮೂಡುವಂತ ವೇಳೆ ಜಗವೊಂದು ಪಾಠಶಾಲೆ
ಶುರುವೀಗ ಪ್ರಾರ್ಥನೆ
ಬೆಳಕಿನ ಗುಟುಕನು ಮರಿಯೆ ಹೀರು ನೀ
ಗುರಿಯೆಡೆ ಗರಿಯನು ತೆರೆದು ಹಾರು ನೀ
ಮುಗ್ಧವಾದ ಖಾಲಿಹಾಳೆ ನಿನ್ನ ಭಾವ ಭೂಮಿಕೆ
ಗೀಚು ನೀನೆ ನೀಲಿ ನಕ್ಷೆ ನಿನ್ನ ಬಾಳ ಪಯಣಕೆ
ನೀಡುತ ಪ್ರಶ್ನೆಗೆ ಉತ್ತರ ನಿಲ್ಲು ನೀನು ತೀಪದಂತೆ
ಸುತ್ತಲು ಮುತ್ತಿದ ಕತ್ತಲು ದೂರ ಹೋಗುವಂತೆ
ಸರಿಸಾಟಿಯಾಗು ಎಲ್ಲರ ಜೊತೆ
ಬೆಳಕಿನ ಗುಟುಕನು ಮರಿಯೆ ಹೀರು ನೀ
ಗುರಿಯೆಡೆ ಗರಿಯನು ತೆರೆದು ಹಾರು ನೀ
ನಿನ್ನ ಜ್ಞಾನದ ದಾಹದಿಂದ ಮೂಡಿ ಬರಲಿ ನೆಮ್ಮದಿ
ಎಲ್ಲ ಹಸಿವು ನೀಗುವಂತ ಬಾಳಿಗೊಂದು ತಳಹದಿ
ಎಂತದೆ ಅಡ್ಡಿಯು ಬಂದರು ದಾಟಬಲ್ಲೆ ನೀನು ಧೀರೆ
ಕಾಗದದ ಹೂವಿನ ಸಾಲಲಿ ಕಾಡು ಹೂವೆ ನೀನೆ ಬೇರೆ
ಇಡು ಮುಂದೆ ಹೆಜ್ಜೆ ಹಿಂದೆ ನೋಡದೆ
ಬೆಳಕಿನ ಗುಟುಕನು ಮರಿಯೆ ಹೀರು ನೀ
ಗುರಿಯೆಡೆ ಗರಿಯನು ತೆರೆದು ಹಾರು ನೀ
Beesi Baruva Gaali song lyrics from Kannada Movie Tanuja starring Rajesh Nataranga Saptha Pavoor B.S Yediyurappa Dr K Sudhakar Vishweshwar Bhat Chitkala Biradar Sandhya Arekere Sathish Purappemane Baby Shree Kailash Raghunandan S K Marvin Hakkidasari Rangegowda CM Shalini Shadakshari ,,, Lyrics penned by Jayanth Kaikini Sung by Parvez Ahmed, Music Composed by Praddyottan, film is Directed by Harish M D Halli and film is released on 2023