ಜಹಪನಾಹ್ ಜಹಪನಾಹ್ ಕರೆಯುವೆ ನಿನ್ನ ಪುನ ಪುನಃ
ಜಹಪನಾಹ್ ಜಹಪನಾಹ್ ಇರುವುದು ಹೇಗೆ ನಿನ್ನ ವಿನ
ಜಾದೂ ಮಾಡಿದೆ ಜಹಾಪನ ನಂದೆ ಸ್ಪರ್ಶ್ಕೆ ನಾನು ಫಿದಾ
ಜೀವದಿಂದನೆ ಸೀದ ಬಂತು ಭಾವನೆ ಎಲ್ಲವನ್ನು ಹೇಳೊದಕ್ಕೆ ಇಲ್ಲ ಪದ
ಊದು ಉಸಿರು ಜೀವ ಕೊಳಲಾಗುತ್ತಿದೆ
ಮೂಡಿ ಒಲವು ಮೊಡ ಮರೆಯಾಗುತ್ತಿದೆ
ನನ್ನೆಲ್ಲ ಮನದಾಸೆಯನ್ನು ಬಲ್ಲೆ ನೀನು
ಮುತ್ತಲ್ಲೆ ಪಿಸುಮಾತು ನೂರಾರು
ಓಲೈಸು ನೀ ಎಂದಿಗಿಂತ ಚೆಂದವಾಗಿ
ನಿನ್ನಂತೆ ಕಾಡೆ ಇಲ್ಲಿನ್ಯಾರು
ಮುದ್ದಾದ ಬಿರುಗಾಳಿ ತನುಮನದಲ್ಲಿ ನಲಿವನು ಕೆರಳಿಸಿ
ಬೆಚ್ಚನೆ ಖುಷಿ ನೀಡಿದೆ ಮಿನುಗುವ ಕಂಗಳ ಮಾತೆ ಬೇರೆ
ತೊರೆದೆನು ಎಲ್ಲ ವೇಷ ಮರೆತೆನು ಊರು
ಬರುವೆನು ಮೆಲ್ಲ ಹಿಂದೆ ಕೊಡದೆ ಪರಿಚಯ
ಕರಗಲು ಒಂದೇ ನಿನ್ನ ಕಿರುನಗೆ ಸಾಕು
ನೆನಪಿಗು ಕೂಡ ಈಗ ಪರಿಮಳ ಅತಿಶಯ
ಊದು ಉಸಿರು ಜೀವ ಕೊಳಲಾಗುತ್ತಿದೆ
ಮೂಡಿ ಒಲವು ಮೊಡ ಮರೆಯಾಗುತ್ತಿದೆ
ಇನ್ನೆಂದು ಇರಲಾರೆ ನಾನು ಒಂಟಿಯಾಗಿ
ಕಣ್ಣಲ್ಲೆ ಸೆರೆಯಾಗಿ ಈ ರೂಪ
ಹೇಳು ಏಕೆ ಸಿಕ್ಕಲ್ಲ ಇನ್ನು ಮುಂಚೆ
ಇಷ್ಟೆಲ್ಲ ಪಕೀದಿ ಸಲ್ಲಾಪ
ಬೇಕೆನು ರುಜುವಾತು ಪರಿಪರಿಯಾಗಿ ಹೆಸರನು ಕರೆಯುತ
ಜೀವವೆ ಕಸಿಯಾದರೆ ಹಸಿಬಿಸಿ ಮೌನದ ಮಾತೆ ಬೇರೆ
ಅಡಗಿರು ಇಲ್ಲೆ ನೀನು ಮನಸ್ಸಲಿ ಬಂದು
ಅರಸುತ ನಿನ್ನ ನಾನು ಜಗವನೆ ಅರಿವೆನು
ಬರುತಿದೆ ವರ್ಣ ಈಗ ಬಯಕೆಗೆ ತಾನೆ
ಮನವೆ ನೀ ಹೇಳು ಹೇಗೆ ತಡೆಯಲಿ ಒಲವನು
||ಜಹಪನಾಹ್ ಜಹಪನಾಹ್ ಕರೆಯುವೆ ನಿನ್ನ ಪುನ ಪುನಃ
ಜಹಪನಾಹ್ ಜಹಪನಾಹ್ ಇರುವುದು ಹೇಗೆ ನಿನ್ನ ವಿನ||