-
ಶಿವ ಗಂಗಾವರ ಕ್ಷೇತ್ರದ ಮಹಿಮೆಯ ಆಲಿಸಿ ಕೇಳಯ್ಯ
ಅಯ್ಯ ಆಲಿಸಿ ಕೇಳಯ್ಯ ಅಯ್ಯ ನೋಡಿ ಮಣಿಯಯ್ಯ
ಶಿವ ಗಂಗಾವರ ಕ್ಷೇತ್ರದ ಮಹಿಮೆಯ ಆಲಿಸಿ ಕೇಳಯ್ಯ
ಅಯ್ಯ ಆಲಿಸಿ ಕೇಳಯ್ಯ ಅಯ್ಯ ನೋಡಿ ಮಣಿಯಯ್ಯ
ಕುಂಭ ಸಂಭವನ ಕರೆಗೊಲಿದು ಗಂಗಾಧರ ತಾ ನೆಲೆಸಿದ ಬಂದು
ಕುಂಭ ಸಂಭವನ ಕರೆಗೊಲಿದು ಗಂಗಾಧರ ತಾ ನೆಲೆಸಿದ ಬಂದು
ಗಂಗಾಧರನಿಲ್ಲಿ ನೆಲೆಸಿದ ಬಂದು
ನಂಬಿದವರ ಸಲಹುವೆನೆಂದು
||ಶಿವ ಗಂಗಾವರ ಕ್ಷೇತ್ರದ ಮಹಿಮೆಯ ಆಲಿಸಿ ಕೇಳಯ್ಯ
ಅಯ್ಯ ಆಲಿಸಿ ಕೇಳಯ್ಯ ಅಯ್ಯ ನೋಡಿ ಮಣಿಯಯ್ಯ||
ಪರಶಿವನ ಪರಿಣಯಕೆ ಮುರಹರ ಬ್ರಹ್ಮೇಂದ್ರ
ಸುರಸಮೂಹವುನೆದೆಗೆ ಪರಮ ಸಂಭ್ರಮದಿಂದ
ವರಮುನೀಂದ್ರರ ಅತುಳ ಆನಂದದಿಂದ ಮೆರೆವ
ಆ ಹಿಮಗಿರಿಯ ನೋಡೆ ನಯನಾನಂದ
ಹಿಮಗಿರಿಯ ನೋಡೆ ನಯನಾನಂದ ಆನಂದ
ಜಗವ ಪಾಲಿಪ ಜನನಿ ಗಿರಿಜೆಗೆ ಮಾಡಿದದು ಸಿಂಗಾರವ
ಮಾಡಿದದು ಸಿಂಗಾರವ
ಜಗವಂದಿತ ಚಂದ್ರಮೌಳಿಯು ಧರಿಸಿದನು ತಾ ಭಸ್ಮವ
ಧರಿಸಿದನು ತಾ ಭಸ್ಮವ
ಮುಗುದೆಯದು ನವವಧುಗೆ ಚೆಂದದಿ ಧರಿಸಿದರು ಬಾಸಿಂಗವ
ಧರಿಸಿದರು ಬಾಸಿಂಗವ
ಮೃಣನು ಮುಖದಲಿ ಕೊರಳ ಅಂದಕ್ಕೆ ಧರಿಸಿದನು ತಾ ಭುಜಗವ
ಧರಿಸಿದನು ತಾ ಭುಜಗವ
ನಡೆಗೆ ನಾಚುತ ಮದುವೆ ಮಂಟಪದೆಡೆಗೆ ನಡೆದಳು ಪರಶಿವೆ
ನಿರುತಲೋಕದ ನಲ್ಮೆಗೋಸುಗ ವರಿಸೆ ಬಂದನು ಪರಶಿವ
ವರಿಸೆ ಬಂದನು ಪರಶಿವ
ನಭದೆ ಸಾರಿತು ದೇವ ದುಂದುಬಿ ಪ್ರಣಯದ ಸಂದೇಶವ
ನಭದೆ ಸಾರಿತು ದೇವ ದುಂದುಬಿ ಪ್ರಣಯದ ಸಂದೇಶವ
ನಂಬಿ ಬೃಂಗಿಗಳು ಆಡಿದರು ಆನಂದದಿಂದಲಿ ನಾಟ್ಯವ
ಮುಕ್ಕೋಟಿ ದೇವತೆಗಳೆಲ್ಲ ಹಿಮಗಿರಿಯ ಸೇರೆ
ದಕ್ಷಿಣೋತ್ತರದ ಭೂಮಿ ಏರುಪೇರಾಗೆ
ಭೂಭಾರ ಸಮವಾಗಿ ಭಯನೀಗಲೆಂದು
ಭಯಹಾರಿ ತಾ ಅಗಸ್ತ್ಯನ ನೋಡಿ ಕರೆದು
ದಕ್ಷಿಣದುದ್ದಕ್ಕೂ ಜವದೆ ಹೋಗೆಂದ
ಮದುವೆ ನೋಡದೆ ಚಿಂತೆ ಮುಸುಕಿ ಕಾರಿರುಳಂತೆ
ನಡೆದ ಎಳೆಗರುವಂತೆ ದೇವನ ಅಣತಿಯಂತೆ
ದೇವನ ಅಣತಿಯಂತೆ
ನೊಂದ ಮುನಿ ಗಿರಿಶಿಖರವ ಏರಲು
ಕ್ಷಣದಲಿ ಭುಮಿ ಸರಿಸಮವಾಗಲು
ಕ್ಷಣದಲಿ ಭೂಮಿ ಸರಿಸಮವಾಗಲು
ಅಂದದೆ ಜಗವೆಲ್ಲ ಜಯಘೋಷ ಮಾಡೆ
ಚೆಂದದೆ ಸುರರೆಲ್ಲ ಮಂಗಳ ಪಾಡೆ
ಶಂಕರಗಿರಿಜೆಯ ಕರವನೆ ಪಿಡಿದ
ಶಂಕರಗಿರಿಜೆಯ ಕರವನೆ ಪಿಡಿದ
-
ಶಿವ ಗಂಗಾವರ ಕ್ಷೇತ್ರದ ಮಹಿಮೆಯ ಆಲಿಸಿ ಕೇಳಯ್ಯ
ಅಯ್ಯ ಆಲಿಸಿ ಕೇಳಯ್ಯ ಅಯ್ಯ ನೋಡಿ ಮಣಿಯಯ್ಯ
ಶಿವ ಗಂಗಾವರ ಕ್ಷೇತ್ರದ ಮಹಿಮೆಯ ಆಲಿಸಿ ಕೇಳಯ್ಯ
ಅಯ್ಯ ಆಲಿಸಿ ಕೇಳಯ್ಯ ಅಯ್ಯ ನೋಡಿ ಮಣಿಯಯ್ಯ
ಕುಂಭ ಸಂಭವನ ಕರೆಗೊಲಿದು ಗಂಗಾಧರ ತಾ ನೆಲೆಸಿದ ಬಂದು
ಕುಂಭ ಸಂಭವನ ಕರೆಗೊಲಿದು ಗಂಗಾಧರ ತಾ ನೆಲೆಸಿದ ಬಂದು
ಗಂಗಾಧರನಿಲ್ಲಿ ನೆಲೆಸಿದ ಬಂದು
ನಂಬಿದವರ ಸಲಹುವೆನೆಂದು
||ಶಿವ ಗಂಗಾವರ ಕ್ಷೇತ್ರದ ಮಹಿಮೆಯ ಆಲಿಸಿ ಕೇಳಯ್ಯ
ಅಯ್ಯ ಆಲಿಸಿ ಕೇಳಯ್ಯ ಅಯ್ಯ ನೋಡಿ ಮಣಿಯಯ್ಯ||
ಪರಶಿವನ ಪರಿಣಯಕೆ ಮುರಹರ ಬ್ರಹ್ಮೇಂದ್ರ
ಸುರಸಮೂಹವುನೆದೆಗೆ ಪರಮ ಸಂಭ್ರಮದಿಂದ
ವರಮುನೀಂದ್ರರ ಅತುಳ ಆನಂದದಿಂದ ಮೆರೆವ
ಆ ಹಿಮಗಿರಿಯ ನೋಡೆ ನಯನಾನಂದ
ಹಿಮಗಿರಿಯ ನೋಡೆ ನಯನಾನಂದ ಆನಂದ
ಜಗವ ಪಾಲಿಪ ಜನನಿ ಗಿರಿಜೆಗೆ ಮಾಡಿದದು ಸಿಂಗಾರವ
ಮಾಡಿದದು ಸಿಂಗಾರವ
ಜಗವಂದಿತ ಚಂದ್ರಮೌಳಿಯು ಧರಿಸಿದನು ತಾ ಭಸ್ಮವ
ಧರಿಸಿದನು ತಾ ಭಸ್ಮವ
ಮುಗುದೆಯದು ನವವಧುಗೆ ಚೆಂದದಿ ಧರಿಸಿದರು ಬಾಸಿಂಗವ
ಧರಿಸಿದರು ಬಾಸಿಂಗವ
ಮೃಣನು ಮುಖದಲಿ ಕೊರಳ ಅಂದಕ್ಕೆ ಧರಿಸಿದನು ತಾ ಭುಜಗವ
ಧರಿಸಿದನು ತಾ ಭುಜಗವ
ನಡೆಗೆ ನಾಚುತ ಮದುವೆ ಮಂಟಪದೆಡೆಗೆ ನಡೆದಳು ಪರಶಿವೆ
ನಿರುತಲೋಕದ ನಲ್ಮೆಗೋಸುಗ ವರಿಸೆ ಬಂದನು ಪರಶಿವ
ವರಿಸೆ ಬಂದನು ಪರಶಿವ
ನಭದೆ ಸಾರಿತು ದೇವ ದುಂದುಬಿ ಪ್ರಣಯದ ಸಂದೇಶವ
ನಭದೆ ಸಾರಿತು ದೇವ ದುಂದುಬಿ ಪ್ರಣಯದ ಸಂದೇಶವ
ನಂಬಿ ಬೃಂಗಿಗಳು ಆಡಿದರು ಆನಂದದಿಂದಲಿ ನಾಟ್ಯವ
ಮುಕ್ಕೋಟಿ ದೇವತೆಗಳೆಲ್ಲ ಹಿಮಗಿರಿಯ ಸೇರೆ
ದಕ್ಷಿಣೋತ್ತರದ ಭೂಮಿ ಏರುಪೇರಾಗೆ
ಭೂಭಾರ ಸಮವಾಗಿ ಭಯನೀಗಲೆಂದು
ಭಯಹಾರಿ ತಾ ಅಗಸ್ತ್ಯನ ನೋಡಿ ಕರೆದು
ದಕ್ಷಿಣದುದ್ದಕ್ಕೂ ಜವದೆ ಹೋಗೆಂದ
ಮದುವೆ ನೋಡದೆ ಚಿಂತೆ ಮುಸುಕಿ ಕಾರಿರುಳಂತೆ
ನಡೆದ ಎಳೆಗರುವಂತೆ ದೇವನ ಅಣತಿಯಂತೆ
ದೇವನ ಅಣತಿಯಂತೆ
ನೊಂದ ಮುನಿ ಗಿರಿಶಿಖರವ ಏರಲು
ಕ್ಷಣದಲಿ ಭುಮಿ ಸರಿಸಮವಾಗಲು
ಕ್ಷಣದಲಿ ಭೂಮಿ ಸರಿಸಮವಾಗಲು
ಅಂದದೆ ಜಗವೆಲ್ಲ ಜಯಘೋಷ ಮಾಡೆ
ಚೆಂದದೆ ಸುರರೆಲ್ಲ ಮಂಗಳ ಪಾಡೆ
ಶಂಕರಗಿರಿಜೆಯ ಕರವನೆ ಪಿಡಿದ
ಶಂಕರಗಿರಿಜೆಯ ಕರವನೆ ಪಿಡಿದ