Kannalle Elli Thanaka Lyrics

in Sharp Shooter

LYRIC

ಕಣ್ಣಲ್ಲೆ ಎಲ್ಲಿ ತನಕ ಅಬ್ಬಬ್ಬ ಹೀಗೆ ಕಳ್ಳಾಟ ಆಡುವುದು
ಗಾಳಿಲಿ ಮುತ್ತನಿಡುವ ಈ ಮಕ್ಕಳಾಟ ಯಾವತ್ತು ಮುಗಿಯುವುದು
ಮುಂದುವರಿ ಸ್ವಲ್ಪ ಓ ಒಲವೆ ನಿನ್ನ ಜೊತೆ ಸದಾ ನಾ ಇರುವೆ
ಕಣ್ಣಲ್ಲೆ ಎಲ್ಲಿ ತನಕ ಅಬ್ಬಬ್ಬ ಹೀಗೆ ಕಳ್ಳಾಟ ಆಡುವುದು
 
ನಿಂತಿರುವೆ ತುದಿಗಾಲಲ್ಲಿ ಬಂಧಿಸು ಬಾ ನಿನ್ನ ತೋಳಲಿ
ಪ್ರಣಯದ ಪರಿಚಯ ಆಗಲಿ
ತಲ್ಲೀನ ನಾನು ನಿನ್ನಲ್ಲಿ ಉಳಿಗಾಲ ಈಗ ಇನ್ನೆಲ್ಲಿ
ಸಹಿಸೆನು ವಿರಹದ ಹಾವಳಿ
ಅದಲು ಬದಲು ಎರಡು ಹೃದಯ
ಮರೆತೆಹೋಯ್ತು ಹಾಳು ವಿನಯ
 
||ಕಣ್ಣಲ್ಲೆ ಎಲ್ಲಿ ತನಕ ಅಬ್ಬಬ್ಬ ಹೀಗೆ ಕಳ್ಳಾಟ ಆಡುವುದು||
 
ಹೆಚ್ಚಾಗಿ ನಿನ್ನ ಸಹವಾಸ ಕನಸ್ಸಲ್ಲೆ ಬಾಳೊ ಹವ್ಯಾಸ
ಪ್ರತಿಕ್ಷಣ ನಿನ್ನದೆ ಯೋಚನೆ
ನನ್ನಲ್ಲು ಇಂತ ವ್ಯತ್ಯಾಸ ನೆನಪಿಲ್ಲ ನನ್ನ ಇತಿಹಾಸ
ಒಲವಿದು ಬೆಳೆದಿರೊ ಸೂಚನೆ
ಬಿಡುವೆ ಕೊಡದು ಹುಚ್ಚು ಹರೆಯ
ಒಳಗು ಹೊರಗು ಪ್ರೀತಿ ವಿಷಯ
 
||ಕಣ್ಣಲ್ಲೆ ಎಲ್ಲಿ ತನಕ ಅಬ್ಬಬ್ಬ ಹೀಗೆ ಕಳ್ಳಾಟ ಆಡುವುದು
ಗಾಳಿಲಿ ಮುತ್ತನಿಡುವ ಈ ಮಕ್ಕಳಾಟ ಯಾವತ್ತು ಮುಗಿಯುವುದು||

Kannalle Elli Thanaka song lyrics from Kannada Movie Sharp Shooter starring Diganth, Sangeetha Chauhan, Lakshmi, Lyrics penned by Ghouse Peer Sung by Karthik, Shreya Ghoshal, Music Composed by Shiva Santhosh M S, film is Directed by Ghouse Peer and film is released on 2015