ಮೆಹೆರುಬಾ ಮೆಹೆರುಬಾ
ನಿನ್ನ ದನಿಗಾಗಿ ನಿನ್ನ ಕರೆಗಾಗಿ
ನಿನ್ನ ಸಲುವಾಗಿ ಕಾಯುವೆ
ತೀರ ಬಳಿ ಬಂದ ನೀನು ನನಗೊಂದು
ಸೋಜಿಗದಂತೆ ಕಾಣುವೆ
ಒಂಟಿ ಇರುವಾಗ ಕುಂಟು ನೆಪ ತೋರಿ
ಬಂದ ಕನಸೆಲ್ಲ ನಿನ್ನದು
ನಾನು ಅನುರಾಗಿ ನೀನೇ ನನಗಾಗಿ
ಎನ್ನುವ ಭಾವನೆ ನನ್ನದು
ಕಣ್ಣಿನಲ್ಲೇನೆ ಹೊಮ್ಮಿದೆ
ಕೋಮಲ ಕೋರಿಕೆ
ಮುತ್ತಿನ ಅಂಕಿತ
ಬೇಕಲ್ಲ ಒಪ್ಪಂದಕೆ
||ನಿನ್ನ ದನಿಗಾಗಿ ನಿನ್ನ ಕರೆಗಾಗಿ
ನಿನ್ನ ಸಲುವಾಗಿ ಕಾಯುವೆ
ತೀರ ಬಳಿ ಬಂದ ನೀನು ನನಗೊಂದು
ಸೋಜಿಗದಂತೆ ಕಾಣುವೆ||
ಹೆದರುತ ಅರಳಿದೆ ನಾನಾ ಹಂಬಲ
ನಿನ್ನನೇ ತಲುಪಲು
ಮನಸಲಿ ಸವಿಗನಸಿನ ಸಾಲೇ ನಿಂತಿದೆ
ಅಂಗಡಿ ತೆರೆಯಲು
ಎಲ್ಲೇ ನಾ ಹೋದರೂ ಗಮನ ಇಲ್ಲೇ ಇದೆ
ಸನಿಹವೆ ನೀ ಬೇಕೆನ್ನುವ ಹಠವೂ ಹೆಚ್ಚಾಗಿದೆ
ಈಗ ಚಂದ್ರನ ಒಪ್ಪಿಗೆ ಬೇಕೇನು ಸಲ್ಲಾಪಕೆ
ನೆನಪಿನ ಬೀದಿಯ ಎಲ್ಲಾ ಗೋಡೆಗು
ನಿನ್ನದೆ ಮೊಗವಿದೆ
ಸಲಿಗೆಯ ತಕರಾರಿನ ಸಣ್ಣ ಕೋಪಕೂ
ಬೇರೆಯೆ ಸುಖವಿದೆ
ಇನ್ನೂ ಇಂಪಾಗಿದೆ ಕರೆವ ನಿನ್ನ ಸ್ವರ
ಹೃದಯದಲಿ ಎಂದೆಂದಿಗೂ ಇರಲಿ ಹಸ್ತಾಕ್ಷರ
ಬೇಗ ಮೂಡಲಿ ಮತ್ಸರ ಈ ಭೂಮಿ ಆಕಾಶಕೆ
||ನಿನ್ನ ದನಿಗಾಗಿ ನಿನ್ನ ಕರೆಗಾಗಿ
ನಿನ್ನ ಸಲುವಾಗಿ ಕಾಯುವೆ
ತೀರ ಬಳಿ ಬಂದ ನೀನು ನನಗೊಂದು
ಸೋಜಿಗದಂತೆ ಕಾಣುವೆ||
ಮೆಹೆರುಬಾ ಮೆಹೆರುಬಾ
ನಿನ್ನ ದನಿಗಾಗಿ ನಿನ್ನ ಕರೆಗಾಗಿ
ನಿನ್ನ ಸಲುವಾಗಿ ಕಾಯುವೆ
ತೀರ ಬಳಿ ಬಂದ ನೀನು ನನಗೊಂದು
ಸೋಜಿಗದಂತೆ ಕಾಣುವೆ
ಒಂಟಿ ಇರುವಾಗ ಕುಂಟು ನೆಪ ತೋರಿ
ಬಂದ ಕನಸೆಲ್ಲ ನಿನ್ನದು
ನಾನು ಅನುರಾಗಿ ನೀನೇ ನನಗಾಗಿ
ಎನ್ನುವ ಭಾವನೆ ನನ್ನದು
ಕಣ್ಣಿನಲ್ಲೇನೆ ಹೊಮ್ಮಿದೆ
ಕೋಮಲ ಕೋರಿಕೆ
ಮುತ್ತಿನ ಅಂಕಿತ
ಬೇಕಲ್ಲ ಒಪ್ಪಂದಕೆ
||ನಿನ್ನ ದನಿಗಾಗಿ ನಿನ್ನ ಕರೆಗಾಗಿ
ನಿನ್ನ ಸಲುವಾಗಿ ಕಾಯುವೆ
ತೀರ ಬಳಿ ಬಂದ ನೀನು ನನಗೊಂದು
ಸೋಜಿಗದಂತೆ ಕಾಣುವೆ||
ಹೆದರುತ ಅರಳಿದೆ ನಾನಾ ಹಂಬಲ
ನಿನ್ನನೇ ತಲುಪಲು
ಮನಸಲಿ ಸವಿಗನಸಿನ ಸಾಲೇ ನಿಂತಿದೆ
ಅಂಗಡಿ ತೆರೆಯಲು
ಎಲ್ಲೇ ನಾ ಹೋದರೂ ಗಮನ ಇಲ್ಲೇ ಇದೆ
ಸನಿಹವೆ ನೀ ಬೇಕೆನ್ನುವ ಹಠವೂ ಹೆಚ್ಚಾಗಿದೆ
ಈಗ ಚಂದ್ರನ ಒಪ್ಪಿಗೆ ಬೇಕೇನು ಸಲ್ಲಾಪಕೆ
ನೆನಪಿನ ಬೀದಿಯ ಎಲ್ಲಾ ಗೋಡೆಗು
ನಿನ್ನದೆ ಮೊಗವಿದೆ
ಸಲಿಗೆಯ ತಕರಾರಿನ ಸಣ್ಣ ಕೋಪಕೂ
ಬೇರೆಯೆ ಸುಖವಿದೆ
ಇನ್ನೂ ಇಂಪಾಗಿದೆ ಕರೆವ ನಿನ್ನ ಸ್ವರ
ಹೃದಯದಲಿ ಎಂದೆಂದಿಗೂ ಇರಲಿ ಹಸ್ತಾಕ್ಷರ
ಬೇಗ ಮೂಡಲಿ ಮತ್ಸರ ಈ ಭೂಮಿ ಆಕಾಶಕೆ
||ನಿನ್ನ ದನಿಗಾಗಿ ನಿನ್ನ ಕರೆಗಾಗಿ
ನಿನ್ನ ಸಲುವಾಗಿ ಕಾಯುವೆ
ತೀರ ಬಳಿ ಬಂದ ನೀನು ನನಗೊಂದು
ಸೋಜಿಗದಂತೆ ಕಾಣುವೆ||
Ninna Danigaagi song lyrics from Kannada Movie Savari 2 starring Srinagar Kitty, Karan Rao, Girish Karnad, Lyrics penned by Jayanth Kaikini Sung by Santhosh Venky, Supriya Lohith, Music Composed by Manikanth Kadri, film is Directed by Jacob Varghese and film is released on 2014