ಬಂಧುಗಳೇ, KFL ಜಾಲತಾಣದಲ್ಲಿ ಈಗಾಗಲೇ ಆಯ್ದ 5,800ಕೂ ಹೆಚ್ಚು ಗೀತೆಗಳ ಸಾಹಿತ್ಯ ಲಭ್ಯವಿದೆ. ನಿಮ್ಮ ನೆಚ್ಚಿನ ಗೀತೆಯ ಸಾಹಿತ್ಯ ಲಭ್ಯವಿಲ್ಲದಿದ್ದಲ್ಲಿ ನಮಗೆ Contact us ಸೆಕ್ಷನ್ ಮೂಲಕ ಮನವಿ ಮಾಡಿದಲ್ಲಿ ಸಾಹಿತ್ಯವನ್ನು ಸೇರಿಸಲಾಗುವದು ಅಥವಾ ನೀವು ಕೊಡ ಸಾಹಿತ್ಯವನ್ನು ನೀಡಬಹುದಾಗಿದೆ.

ಜೋಗುಳದ ಪದವ ಜೋ ಲಾಲಿ ಮುದವ
ಜಗದಲ್ಲಿ ಸೃಷ್ಟಿಸಿದಳಮ್ಮ ಅದ ಕೇಳಿ ಬೆರಗಾದ ಬ್ರಹ್ಮ
ಗರ್ಭದಲೆ ಸ್ವರ್ಗವನು ಕಟ್ಟಿರುವಳು
ನಗುವಲ್ಲೆ ನರಕವನು ಮೆಟ್ಟಿದವಳು
ಮಮತೆಯಲಿ ಮಂದಿರವ ಕಟ್ಟಿದವಳು
ದೇವರಿಗೆ ಸಂಕಟವ ತಣಿಸಿದವಳು
ನೆಲದಲ್ಲಿ ನಡೆದಾಡೊ ದೈವ ಕಣೊ
ಬದುಕನ್ನು ಬರೆವಂತ ಜೀವ ಕಣೊ
ಜೋಗುಳದ ಪದವ ಜೋ ಲಾಲಿ ಮುದವ
ಹೆಣ್ಣಾಗಿ ಜನಿಸಿ ತಾಯಾಗಿ ಹರಸಿ ಪ್ರೀತಿಗೆ ಗುರುವಾದಳು
ಜೀವವನು ಸುರಿಸಿ ಜೀವನವ ಕಲಿಸಿ ಗುರುವಿಗೆ ಗುರುವಾದಳು
ನೂರೆಂಟು ದೇವರನು ಪೂಜಿಸುವುದೇಕಯ್ಯ
ಕಲ್ಲಲಿ ಹುಡುಕುವುದು ವ್ಯರ್ಥನಯ್ಯ
ಹೆತ್ತೋಳ ಪಾದದಲಿ ಪ್ರತಿದೇವನಿಹನಯ್ಯ
ಕೈಮುಗಿದು ತಲೆಬಾಗು ಪುಣ್ಯನಯ್ಯ
ಆಕಾಶ ಭೂಮಿಗಳ ಬೆಲೆಕೊಟ್ಟರೂನು
ಮೂರೇಳು ಲೋಕಗಳ ಕೈಗಿಟ್ಟರೂನು
ಈ ತಾಯಿಯ ಋಣಕ್ಕೆ ಸರಿಸಾಟಿಯೇನು
ಹಣೆಬರಹ ಬರೆದೋನು ಆ ಬ್ರಹ್ಮನು
ಅದನಿಲ್ಲಿ ತಿದ್ದೋಳು ನಮ್ಮವ್ವನು
ಆ ಬ್ರಹ್ಮ ಶಿವನು ಕಂಡಿಲ್ಲವಯ್ಯ ಈ ತಾಯ ಸವಿಪ್ರೀತಿಯ
ಆ ವಿಷ್ಣು ಕೂಡ ತಿಳಿದಿಲ್ಲವಯ್ಯ ಹಡೆದವ್ವನ ಮಮತೆಯ
ಎದೆಹಾಲು ಮೂವರು ಕುಡಿದಿದ್ದರೆ ಅಮ್ಮನಿಗೆ ಸಾವನ್ನು ಕೊಡುತಿದ್ದರೆ
ಈ ತಾಯ ಮಡಿಲಲ್ಲಿ ಮಲಗಿದ್ದರೆ ಈ ಭೂಮಿಯ ಬಿಟ್ಟು ಇರುತಿದ್ದರೆ
ಆ ಸೂರ್ಯ ಜಗಕ್ಕೆಲ್ಲ ಬೆಳಕನ್ನು ಕೊಡುವ
ನಮ್ಮ ಬಾಳ ಕತ್ತಲೆಯ ಕಳೆವವಳು ಅವ್ವ
ನೂರಾರು ಸೂರ್ಯರಿಗೆ ಸರಿಸಮಳು ಅವ್ವ
ಕೈ ಹಿಡಿದು ದಾರಿಯ ತೋರಿದವಳು
ನಡುದಾರಿ ಮಧ್ಯೆದಲೆ ಮರೆಯಾದಳು