Ondooralli Lyrics

in Rudra Thandava

LYRIC

ಒಂದೂರಲ್ಲಿ ಒಬ್ಬ ಹುಡುಗ ಇದ್ದ
ಅವ್ನು ಮಿಡ್ಲಿ ಸ್ಕೂಲು ಮೇಡಂ ಹಿಂದೆ ಬಿದ್ದ
ಅವ್ಳ್ಗೆ ಹೇಳೋಕಂತ ಹೋದ ಪ್ರೀತಿ ಪಾಠ
ಅವ್ಳು ಎಡಗೈಯ್ಯಲ್ಲಿ ಮಾಡಿ ಹೋದ್ಲು ಟಾಟಾ
ಸಿಕ್ರೆ ಶಾದಿ ಭಾಗ್ಯ ಇಲ್ಲ ಬಾರ್‌ ಭಾಗ್ಯ
ಇದೇ ಮಗಾ ಲವ್ವು ಇದಕ್ಯಾಕೆ ಇಷ್ಟು ಡವ್ವು
ಹೆಣ್ಣು ಪ್ರೀತಿ ವೇಷ ಗಂಡು ದೇವದಾಸ
ಹಿಂಗೆ ಮಗಾ ಲವ್ವು ಲವ್ವಂದ್ರೆ ಸಾವು ನೋವು
ಗೆದ್ರೆ ಜಂಭೂಸವಾರಿ ಮಗಾ ಸೋತ್ರೆ ಬಂಬೂಸವಾರಿ
ಗೆದ್ರೆ ಜಂಭೂಸವಾರಿ ಮಗಾ ಸೋತ್ರೆ ಬಂಬೂಸವಾರಿ
 
||ಒಂದೂರಲ್ಲಿ ಒಬ್ಬ ಹುಡುಗ ಇದ್ದ
ಅವ್ನು ಮಿಡ್ಲಿ ಸ್ಕೂಲು ಮೇಡಂ ಹಿಂದೆ ಬಿದ್ದ
ಹೇಳೋಕಂತ ಹೋದ ಪ್ರೀತಿ ಪಾಠ
ಅವ್ಳು ಎಡಗೈಯ್ಯಲ್ಲಿ ಮಾಡಿ ಹೋದ್ಲು ಟಾಟಾ||
 
ಕಣ್ಣು ಹೊಡೆದು ಬಲೆ ಬೀಸಿ ಕಾಂಪೌಂಡತ್ರ ದಿನ ಕಾಯ್ಸಿ
ಒಂದು ಘಂಟೆಗೆ ಓಕೆ ಅಂದ್ಲು ಒಂದೂವರೆಗೆ ಬ್ಯಾಡ ಅಂದ್ಲು
ಹಿಂಗೆ ಮಗಾ ಹೆಣ್ಣು ಅವ್ಳ್‌ ಹಿಂದೆ ಬಿದ್ರೆ ಮಣ್ಣು
ಹುಡುಗರ ಪುಟ್ಟ ಹಾರ್ಟಿನಲಿ ತಾಜ್‌ ಮಹಲ್‌ ಗೋರಿ ಇದೆ
ಹುಡುಗೀರ ಕೆಟ್ಟ ಹಾರ್ಟಿನಲಿ ಹುಡುಗರ ಲವ್ವು ಮೋರಿ ಇದೆ
ಹುಡುಗೀರಂದ್ರೆ ಹುಷಾರು ಅವರ ಹಾರ್ಟು ಚೈನಾಬಜಾರು
ಹುಡುಗೀರಂದ್ರೆ ಹುಷಾರು ಅವರ ಹಾರ್ಟು ಚೈನಾಬಜಾರು
 
||ಒಂದೂರಲ್ಲಿ ಒಬ್ಬ ಹುಡುಗ ಇದ್ದ
ಅವ್ನು ಮಿಡ್ಲಿ ಸ್ಕೂಲು ಮೇಡಂ ಹಿಂದೆ ಬಿದ್ದ
ಹೇಳೋಕಂತ ಹೋದ ಪ್ರೀತಿ ಪಾಠ
ಅವ್ಳು ಎಡಗೈಯ್ಯಲ್ಲಿ ಮಾಡಿ ಹೋದ್ಲು ಟಾಟಾ||
 
ಒಂದೂರಲ್ಲಿ ಒಬ್ಬ ಹುಡುಗ ಇದ್ದ
ಅವ್ನು ಮಿಡ್ಲಿ ಸ್ಕೂಲು ಮೇಡಂ ಹಿಂದೆ ಬಿದ್ದ
ಅವ್ಳಿಗ್‌ ಹೇಳಿಕೊಟ್ಟ ಎಲ್ಲ  ಪ್ರೀತಿ ಪಾಠ
ಈಗ ಫಿಕ್ಸು ಆಯ್ತು ಅವ್ರ ಮದ್ವೆ ಊಟ
ಬಾನು ಭೂಮಿಯಾಣೆ ಪ್ರೀತಿ ಶಾಶ್ವತನೆ
ಪ್ರೀತಿಯಂದ್ರೆ ಪ್ರಾಣ ಪ್ರೀತ್ಸೋದೆ ಸಂವಿಧಾನ
ಗೆದ್ರೆ ಬೀಗರೂಟ ಬಿದ್ರೆ ಲೈಫು ಪಾಠ
ಪ್ರೀತಿಗೊಂದೆ ಆಸ್ತಿ ಅದು ಪ್ರಾಣ ನೀಡೊ ದೋಸ್ತಿ
ವೇದ ಸುಳ್ಳಾದರು ಮಗಾ ಪ್ರೀತಿ ಸುಳ್ಳಾಗದು
ವೇದ ಸುಳ್ಳಾದರು ಮಗಾ ಪ್ರೀತಿ ಸುಳ್ಳಾಗದು

Ondooralli song lyrics from Kannada Movie Rudra Thandava starring Girish Karnad, Chiranjeevi Sarja, Radhika Kumaraswamy, Lyrics penned by Puneeth Arya Sung by Puneeth Rajkumar, Music Composed by V Harikrishna, film is Directed by Guru Deshpande and film is released on 2015