Sambhalisu Lyrics

ಸಂಭಾಳಿಸು Lyrics

in Raja Marthanda

in ರಾಜಮಾರ್ತಾಂಡ

LYRIC

ಸಂಭಾಳಿಸು ಗುಟ್ಟಾಗಿ ನೀ ಚೂರಾದರು ನನ್ನ ಸಂಭಾಳಿಸು
ಹಿಂಬಾಲಿಸು ಮುದ್ದಾಗಿ ನೀ ಇನ್ನಾದರು ನನ್ನ ಹಿಂಬಾಲಿಸು
ಇಲ್ಲೆಲ್ಲೊ ಬಳಿಯಲ್ಲೆ ನೀ ನಿಂತ ಹಾಗೆ ಭಾಸ
ಅನುರಾಗದ ಅನುವಾದಕೆ ಬಾಗಿ ನೆಲೆ ನೀಡುತ್ತ ಸಂದೇಶ
ಸಂಭಾಳಿಸು ಗುಟ್ಟಾಗಿ ನೀ ಚೂರಾದರು ನನ್ನ ಸಂಭಾಳಿಸು
 
ನಾನಂತು ಈಗ ತುಂಬಾನೆ ಪಾರದರ್ಶಕ
ನಿನ್ನಿಂದ ತಾನೆ ದಿನವೆಲ್ಲ ಬರಿ ಕೌತುಕ
ಮಾತಾಡುವ ಮನವು ಶರಣಾದಾಗ
ಇನ್ನೇತಕೆ ನನಗೆ ಈ ವಿನಿಯೋಗ
ಕಿಡಿಗೇಡಿ ಎದೆಯಲ್ಲಿ ನೀ ಸಾಗುವ ಪಯಣ
ಅಲೆಮಾರಿಯ ಎದೆಗೂಡಲಿ ನೀ ಕುಂತಂತೆ ನನ್ನಲ್ಲಿ ತಲ್ಲಣ
 
||ಸಂಭಾಳಿಸು ಗುಟ್ಟಾಗಿ ನೀ ಚೂರಾದರು ನನ್ನ ಸಂಭಾಳಿಸು||
 
ನನ್ನೆದೆಯ ತುಂಬ ನೀನೇನೆ ಸಾಂಕ್ರಾಮಿಕ
ನಾ ಓದಲೆಂದೆ ಮಡಿಸಿಟ್ಟ ಪ್ರೀತಿ ಪುಸ್ತಕ
ನಿನ್ನ ಪ್ರೀತಿಯೆ ನನಗೆ ಸಂಪಾದನೆ
ನೀ ನೀಡಲು ಒಲವ ಸಂಭಾವನೆ
ಇರುಳೆಲ್ಲ ಪರದಾಡಿ ಕನಸ್ಸಲ್ಲೆ ಮರೆಮಾಡಿ
ನಿನ್ನ ಮಾತಿನ ರುಜುವಾತಿಗೆ ನನ್ನ ಈ ಜೀವ ಅಣಿಮಾಡಿ ಕೂತಾಗ
 
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ