Enennale Thaayi Lyrics

in Phaniyamma

Video:

LYRIC

ಏನೆನ್ನಲೇ ತಾಯಿ ಏನೆನ್ನಲೇ….
ಏನೆನ್ನಲೇ ತಾಯಿ ಏನೆನ್ನಲೇ….
ಬದುಕಿನ ಈ ಪರಿಗೆ ಏನೆನ್ನಲೇ….
 
|| ಏನೆನ್ನಲೇ ತಾಯಿ ಏನೆನ್ನಲೇ….
ಬದುಕಿನ ಈ ಪರಿಗೆ ಏನೆನ್ನಲೇ….||
 
ಗುಡ್ಡದಂಚಿಗೆ ಬೆಳ್ಳಿ ಚೆಲ್ಲುವ ಚಂದಿರಗೆ
ಗುಡ್ಡದಂಚಿಗೆ ಬೆಳ್ಳಿ ಚೆಲ್ಲುವ ಚಂದಿರಗೆ
ಬಾನಲ್ಲಿ ಕಣ್ಣ ಹೊಡೆಯುವ ಚುಕ್ಕೆಗೆ
ಬಾನಲ್ಲಿ ಕಣ್ಣ ಹೊಡೆಯುವ ಚುಕ್ಕೆಗೆ
ಹೊಳೆಯ ನೀರಿನ ಹೊಳೆವ ತೆರೆಗಳ ನಗಿಸುವ
ಹೊಳೆಯ ನೀರಿನ ಹೊಳೆವ ತೆರೆಗಳ ನಗಿಸುವ
ಕಿರಣವ ಹೆಣೆಯುವ ಸೂರ್ಯನಿಗೆ…
ಕಿರಣವ ಹೆಣೆಯುವ ಸೂರ್ಯನಿಗೆ…
ಏನೆನ್ನಲೇ…ತಾಯಿ ಏನೆನ್ನಲೇ…
 
ಚಿಮ್ಮುವ ಹೂವಿನ ಘಮ್ಮನ ವಾಸನೆ
ಚಿಮ್ಮುವ ಹೂವಿನ ಘಮ್ಮನ ವಾಸನೆ
ಸುಮ್ಮನ ಸಡಗರಕ್ಕೇನೆನ್ನಲೇ…
ಸುಮ್ಮನ ಸಡಗರಕ್ಕೇನೆನ್ನಲೇ…
ಸುಡುಗಾಡದೊಳಗಡೆ ಹೂ ಬಿಡುವ ಮುಳ್ಳಿಗೆ
ಸುಡುಗಾಡದೊಳಗಡೆ ಹೂ ಬಿಡುವ ಮುಳ್ಳಿಗೆ
ಏನೆಂಬ ಹೆಸರಿಂದ ನಾ ಕರೆಯಲೇ…
ಏನೆಂಬ ಹೆಸರಿಂದ ನಾ ಕರೆಯಲೇ…
ಏನೆನ್ನಲೇ…ತಾಯಿ ಏನೆನ್ನಲೇ…
 
ಕಷ್ಟ ಸಾವಿರವಿರಲಿ ದುಃಖ ಸಾವಿರವಿರಲಿ
ಈ ಬದುಕು ನನಗಿರಲಿ ಓ ಶಿವನೇ…ಹೇ…
ಕಷ್ಟ ಸಾವಿರವಿರಲಿ ದುಃಖ ಸಾವಿರವಿರಲಿ
ಈ ಬದುಕು ನನಗಿರಲಿ ಓ ಶಿವನೇ……
ಸಾವಿರ ಮುಳ್ಳಿರಲಿ ಅದರಲ್ಲಿ ಹೊಂದಾರೆ
ಸಾವಿರ ಮುಳ್ಳಿರಲಿ ಅದರಲ್ಲಿ ಹೊಂದಾರೆ
ಅರಳಿದ ಹೂವಿರಲಿ ಓ ದೇವರೇ…
ಅರಳಿದ ಹೂವಿರಲಿ ಓ ದೇವರೇ…
ಏನೆನ್ನಲೇ…ತಾಯಿ ಏನೆನ್ನಲೇ…
 
|| ಏನೆನ್ನಲೇ ತಾಯಿ ಏನೆನ್ನಲೇ….
ಬದುಕಿನ ಈ ಪರಿಗೆ ಏನೆನ್ನಲೇ….
ಏನೆನ್ನಲೇ ತಾಯಿ ಏನೆನ್ನಲೇ….
ಬದುಕಿನ ಈ ಪರಿಗೆ ಏನೆನ್ನಲೇ….
ಏನೆನ್ನಲೇ ತಾಯಿ ಏನೆನ್ನಲೇ….
ಏನೆನ್ನಲೇ ತಾಯಿ ಏನೆನ್ನಲೇ….||

Enennale Thaayi song lyrics from Kannada Movie Phaniyamma starring L V Sharadha, Baby Prathima, Prathibha Kasaravalli, Lyrics penned by Chandrashekhara Kambara Sung by Jayachandran, Music Composed by B V Karanth, film is Directed by Prema Karanth and film is released on 1983