ಸೂತಕದ ಕಾರ್ಮೋಡ ಕಡು ಕಪ್ಪು ಕಾಗೆಯದು
ಕೆಂಪು ನೆರಳಿನ ಆತ್ಮ ಬಿಗಿದಪ್ಪಿಕೊಂಡಿಹುದು
ಇರುವಾಗ ಇದ್ದಂತ ಸವಿಯನ್ನು ಮರೆಯುವ
ಕರೆದಾಗ ಬರದಿದ್ದ ಸಾವನ್ನು ಹಳಿಯುವ
ಬದುಕಿದ್ದ ಕ್ಷಣದಲ್ಲಿ ಯಾವುದನ್ನು ಸಹಿಸದವ
ಸತ್ತಾಗ ಕಾಗೆಯಲಿ ಪಿತೃಗಳ ಹುಡುಕುವ
ಆಸೆಯನ್ನು ಬದಿಗೊಟ್ಟಿ ಸಾಧಿಸುವ ಛಲಬಿಟ್ಟ
ಕಾಮಾಂಧಕಾರದಲ್ಲಿ ಪ್ರಾಣವನ್ನೆ ಪಣಕ್ಕಿಟ್ಟ
ಪಡೆದ ಕರ್ಮಕ್ಕೆ ಕೊರಗಿ ಶಾಂತಿಯನು ಅರಸುವ
ವಿಧಿಯಾಡೊ ಆಟದಲ್ಲಿ ಬದುಕನ್ನೆ ಮುಗಿಸುವ
ಆಟ ಕೊನೆಗಾಣಿಸಲು ಷಡ್ಯಂತ್ರ ನಡೆಸುವ
ಬದುಕಿನಾಟದ ಮುಂದೆ ಬರಿದಾಗಿ ನಿಲ್ಲುವ
||ಸೂತಕದ ಕಾರ್ಮೋಡ ಕಡು ಕಪ್ಪು ಕಾಗೆಯದು
ಕೆಂಪು ನೆರಳಿನ ಆತ್ಮ ಬಿಗಿದಪ್ಪಿಕೊಂಡಿಹುದು||
ಸೂತಕದ ಕಾರ್ಮೋಡ ಕಡು ಕಪ್ಪು ಕಾಗೆಯದು
ಕೆಂಪು ನೆರಳಿನ ಆತ್ಮ ಬಿಗಿದಪ್ಪಿಕೊಂಡಿಹುದು
ಇರುವಾಗ ಇದ್ದಂತ ಸವಿಯನ್ನು ಮರೆಯುವ
ಕರೆದಾಗ ಬರದಿದ್ದ ಸಾವನ್ನು ಹಳಿಯುವ
ಬದುಕಿದ್ದ ಕ್ಷಣದಲ್ಲಿ ಯಾವುದನ್ನು ಸಹಿಸದವ
ಸತ್ತಾಗ ಕಾಗೆಯಲಿ ಪಿತೃಗಳ ಹುಡುಕುವ
ಆಸೆಯನ್ನು ಬದಿಗೊಟ್ಟಿ ಸಾಧಿಸುವ ಛಲಬಿಟ್ಟ
ಕಾಮಾಂಧಕಾರದಲ್ಲಿ ಪ್ರಾಣವನ್ನೆ ಪಣಕ್ಕಿಟ್ಟ
ಪಡೆದ ಕರ್ಮಕ್ಕೆ ಕೊರಗಿ ಶಾಂತಿಯನು ಅರಸುವ
ವಿಧಿಯಾಡೊ ಆಟದಲ್ಲಿ ಬದುಕನ್ನೆ ಮುಗಿಸುವ
ಆಟ ಕೊನೆಗಾಣಿಸಲು ಷಡ್ಯಂತ್ರ ನಡೆಸುವ
ಬದುಕಿನಾಟದ ಮುಂದೆ ಬರಿದಾಗಿ ನಿಲ್ಲುವ
||ಸೂತಕದ ಕಾರ್ಮೋಡ ಕಡು ಕಪ್ಪು ಕಾಗೆಯದು
ಕೆಂಪು ನೆರಳಿನ ಆತ್ಮ ಬಿಗಿದಪ್ಪಿಕೊಂಡಿಹುದು||