Baridehaviduvalla Lyrics

ಬರಿದೇಹವಿದುವಲ್ಲ Lyrics

in Payanigaru

in ಪಯಣಿಗರು

LYRIC

Song Details Page after Lyrice

-
ಬರಿದೇಹವಿದುವಲ್ಲ ಬರಿದೇಹವಲ್ಲ
ಬಾಡಿಗೆಯ ಉಸಿರಾಟ ತುಂಬಿರುವ ಚೀಲ
ಸಾವಿಗೆ ಹುಟ್ಟಿನ ಅನುಭವವೆ ಇಲ್ಲ
ಸಾವಿಗೆ ಹುಟ್ಟಿನ ಅನುಭವವೆ ಇಲ್ಲ
ನಿಲ್ಲಿಸಿದರೆ ಏಣಿ ಮಲಗಿಸಲು ಚಟ್ಟ
ಆ ವಿಧಿಯು ಕೆಟ್ಟೋನು ಹೇಳಿಲ್ಲ ಗುಟ್ಟ
ಆ ವಿಧಿಯು ಕೆಟ್ಟೋನು ಹೇಳಿಲ್ಲ ಗುಟ್ಟ
 
ಗೊತ್ತಿರದ ದಾರಿಲಿ ಪಯಣಿಗರು ನಾವು
ಗೊತ್ತಿರದ ದಾರಿಲಿ ಪಯಣಿಗರು ನಾವು
ಯಾರದೊ ನೆನಪಿನಲಿ ವಲಸಿಗರು ನಾವು
ಕಾಲನಿಗೆ ನಾವೆಂದೊ ಮುರಿದೋದ ತಂತಿ
ಮಸಣದಲಿ ಶವ ಮತ್ತು ಶಿವ ಒಂದೆ ಜಾತಿ
ಮಸಣದಲಿ ಶವ ಮತ್ತು ಶಿವ ಒಂದೆ ಜಾತಿ
ಜಾತಕಕ್ಕೆ ಅಂಟಿಲ್ಲ ಸೂತಕದ ಛಾಯೆ
ಜ್ಞಾಪಕವು ಇದ್ದರಾಯ್ತು ಇಲ್ಲಿ ಎಲ್ಲ ಮಾಯೆ
ದಾರಿಯಿನ್ನು ಮುಗಿದಿಲ್ಲ ನೂರಾರು ತಿರುವು
ಯಾತ್ರೆಗು ಜಾತ್ರೆಗು ಪ್ರಾಸ ಒಂದೆ ತರವು
ಗೋರಿಯ ಒಳಗಿಳಿದ ಮೇಲೇಕೆ ಬೊಬ್ಬೆ
ಗೋರಿಯ ಒಳಗಿಳಿದ ಮೇಲೇಕೆ ಬೊಬ್ಬೆ
ಮಂಡಿ ಚಕ್ಕಡಿ ಕೆಳಗೆ ಬಾಳೊಂದು ನಿಂಬೆ
 
||ಬರಿದೇಹವಿದುವಲ್ಲ ಬರಿದೇಹವಲ್ಲ
ಬಾಡಿಗೆಯ ಉಸಿರಾಟ ತುಂಬಿರುವ ಚೀಲ||
||ಬರಿದೇಹವಿದುವಲ್ಲ ಬರಿದೇಹವಲ್ಲ
ಬಾಡಿಗೆಯ ಉಸಿರಾಟ ತುಂಬಿರುವ ಚೀಲ||
 
ಕಂಬನಿಯ ಒಳಗೆ ಕನ್ನಡಿಯ ಹಿಡಿವ ಹುಚ್ಚು ಹಠವೇಕೆ
ಇಲ್ಲಿಯವರೆಗು ಬಾಳಿದ ಮೇಲೆ ಮುಚ್ಚುಮರೆಯೇಕೆ
ಇರೊವರೆಗು ಇರಲೇಳು ಮನಸ್ಸುಗಳ ಸಂಧಾನ
ಯಾವ ಕ್ಷಣ ಎಲ್ಲಿಹುದೊ ಬರಲಿರುವ ನಿಲ್ದಾಣ
ಭಾವಬಂಧವೆಲ್ಲ ನಾವೆ ಮಾಡಿದ ನಿರ್ಮಾಣ
ತೃಣದ ವಸ್ತ್ರವ ಕಳಚಿ ಉಳಿದ ಜಗವೆ ನಿರ್ವಾಣ
ಸುಖದುಃಖ ಒಟ್ಟಿಗಿದೆ ಅದುವೆ ವಿಪರ್ಯಾಸ
ಹಣೆಬರಹಕು ಕಳೆಬರಗು ಇಲ್ಲ ವ್ಯತ್ಯಾಸ
ಇಲ್ಲ ವ್ಯತ್ಯಾಸ
 
|| ಬರಿದೇಹವಿದುವಲ್ಲ ಬರಿದೇಹವಲ್ಲ
ಬಾಡಿಗೆಯ ಉಸಿರಾಟ ತುಂಬಿರುವ ಚೀಲ
ಸಾವಿಗೆ ಹುಟ್ಟಿನ ಅನುಭವವೆ ಇಲ್ಲ
ಸಾವಿಗೆ ಹುಟ್ಟಿನ ಅನುಭವವೆ ಇಲ್ಲ
ನಿಲ್ಲಿಸಿದರೆ ಏಣಿ ಮಲಗಿಸಲು ಚಟ್ಟ
ಆ ವಿಧಿಯು ಕೆಟ್ಟೋನು ಹೇಳಿಲ್ಲ ಗುಟ್ಟ
ಆ ವಿಧಿಯು ಕೆಟ್ಟೋನು ಹೇಳಿಲ್ಲ ಗುಟ್ಟ||
 

-
ಬರಿದೇಹವಿದುವಲ್ಲ ಬರಿದೇಹವಲ್ಲ
ಬಾಡಿಗೆಯ ಉಸಿರಾಟ ತುಂಬಿರುವ ಚೀಲ
ಸಾವಿಗೆ ಹುಟ್ಟಿನ ಅನುಭವವೆ ಇಲ್ಲ
ಸಾವಿಗೆ ಹುಟ್ಟಿನ ಅನುಭವವೆ ಇಲ್ಲ
ನಿಲ್ಲಿಸಿದರೆ ಏಣಿ ಮಲಗಿಸಲು ಚಟ್ಟ
ಆ ವಿಧಿಯು ಕೆಟ್ಟೋನು ಹೇಳಿಲ್ಲ ಗುಟ್ಟ
ಆ ವಿಧಿಯು ಕೆಟ್ಟೋನು ಹೇಳಿಲ್ಲ ಗುಟ್ಟ
 
ಗೊತ್ತಿರದ ದಾರಿಲಿ ಪಯಣಿಗರು ನಾವು
ಗೊತ್ತಿರದ ದಾರಿಲಿ ಪಯಣಿಗರು ನಾವು
ಯಾರದೊ ನೆನಪಿನಲಿ ವಲಸಿಗರು ನಾವು
ಕಾಲನಿಗೆ ನಾವೆಂದೊ ಮುರಿದೋದ ತಂತಿ
ಮಸಣದಲಿ ಶವ ಮತ್ತು ಶಿವ ಒಂದೆ ಜಾತಿ
ಮಸಣದಲಿ ಶವ ಮತ್ತು ಶಿವ ಒಂದೆ ಜಾತಿ
ಜಾತಕಕ್ಕೆ ಅಂಟಿಲ್ಲ ಸೂತಕದ ಛಾಯೆ
ಜ್ಞಾಪಕವು ಇದ್ದರಾಯ್ತು ಇಲ್ಲಿ ಎಲ್ಲ ಮಾಯೆ
ದಾರಿಯಿನ್ನು ಮುಗಿದಿಲ್ಲ ನೂರಾರು ತಿರುವು
ಯಾತ್ರೆಗು ಜಾತ್ರೆಗು ಪ್ರಾಸ ಒಂದೆ ತರವು
ಗೋರಿಯ ಒಳಗಿಳಿದ ಮೇಲೇಕೆ ಬೊಬ್ಬೆ
ಗೋರಿಯ ಒಳಗಿಳಿದ ಮೇಲೇಕೆ ಬೊಬ್ಬೆ
ಮಂಡಿ ಚಕ್ಕಡಿ ಕೆಳಗೆ ಬಾಳೊಂದು ನಿಂಬೆ
 
||ಬರಿದೇಹವಿದುವಲ್ಲ ಬರಿದೇಹವಲ್ಲ
ಬಾಡಿಗೆಯ ಉಸಿರಾಟ ತುಂಬಿರುವ ಚೀಲ||
||ಬರಿದೇಹವಿದುವಲ್ಲ ಬರಿದೇಹವಲ್ಲ
ಬಾಡಿಗೆಯ ಉಸಿರಾಟ ತುಂಬಿರುವ ಚೀಲ||
 
ಕಂಬನಿಯ ಒಳಗೆ ಕನ್ನಡಿಯ ಹಿಡಿವ ಹುಚ್ಚು ಹಠವೇಕೆ
ಇಲ್ಲಿಯವರೆಗು ಬಾಳಿದ ಮೇಲೆ ಮುಚ್ಚುಮರೆಯೇಕೆ
ಇರೊವರೆಗು ಇರಲೇಳು ಮನಸ್ಸುಗಳ ಸಂಧಾನ
ಯಾವ ಕ್ಷಣ ಎಲ್ಲಿಹುದೊ ಬರಲಿರುವ ನಿಲ್ದಾಣ
ಭಾವಬಂಧವೆಲ್ಲ ನಾವೆ ಮಾಡಿದ ನಿರ್ಮಾಣ
ತೃಣದ ವಸ್ತ್ರವ ಕಳಚಿ ಉಳಿದ ಜಗವೆ ನಿರ್ವಾಣ
ಸುಖದುಃಖ ಒಟ್ಟಿಗಿದೆ ಅದುವೆ ವಿಪರ್ಯಾಸ
ಹಣೆಬರಹಕು ಕಳೆಬರಗು ಇಲ್ಲ ವ್ಯತ್ಯಾಸ
ಇಲ್ಲ ವ್ಯತ್ಯಾಸ
 
|| ಬರಿದೇಹವಿದುವಲ್ಲ ಬರಿದೇಹವಲ್ಲ
ಬಾಡಿಗೆಯ ಉಸಿರಾಟ ತುಂಬಿರುವ ಚೀಲ
ಸಾವಿಗೆ ಹುಟ್ಟಿನ ಅನುಭವವೆ ಇಲ್ಲ
ಸಾವಿಗೆ ಹುಟ್ಟಿನ ಅನುಭವವೆ ಇಲ್ಲ
ನಿಲ್ಲಿಸಿದರೆ ಏಣಿ ಮಲಗಿಸಲು ಚಟ್ಟ
ಆ ವಿಧಿಯು ಕೆಟ್ಟೋನು ಹೇಳಿಲ್ಲ ಗುಟ್ಟ
ಆ ವಿಧಿಯು ಕೆಟ್ಟೋನು ಹೇಳಿಲ್ಲ ಗುಟ್ಟ||
 

Baridehaviduvalla song lyrics from Kannada Movie Payanigaru starring Lakshman Shivashankar, Ashwin Hasan, Raghavendra Nayak, Lyrics penned by K Kalyan Sung by Ravindra Soragavi, Music Composed by Vinu Manasu, film is Directed by Raj Gopi and film is released on 2019
Song Details Page Title
Lyricist:

K Kalyan

ಗೀತರಚನೆಕಾರ:

ಕೆ.ಕಲ್ಯಾಣ್

Director:

Raj Gopi

ನಿರ್ದೇಶಕ:

ರಾಜ್ ಗೋಪಿ

Music Director:

Vinu Manasu

ಸಂಗೀತ ನಿರ್ದೇಶಕ:

ವಿನು ಮನಸು

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ