LYRIC

Song Details Page after Lyrice

ಒಂದೊಂದೆ ಕಿಡಿ ಸೇರುತ್ತ ಆದಂತೆ ಕಾಡ್ಗಿಚ್ಚು
ಒಗ್ಗೂಡಿ ಮುನ್ನುಗ್ಗೋಣ ಗೆಲ್ಲೋದೆ ನಮ್ಮ ಕೆಚ್ಚು
ಯಾರಿಗೂ ನಾವ್‌ ಹೆದರೋದಿಲ್ಲ ಬೆದರೋದಿಲ್ಲ ಈ ಹೊತ್ತು
ಯಾರಿಗೂ ನಾವ್‌ ಹೆದರೋದಿಲ್ಲ ತಲೆಬಾಗಲ್ಲ ಎಚ್ಚೆತ್ತು
ಕಲಿಸೋಣ ದುರುಳರಿಗೆಲ್ಲ ನೀತಿ ಪಾಠದ ಗತ್ತು
ಬಡಜನರ ನೆತ್ತರ ಹೀರಿದರೆ ತಪ್ಪದು ಆಪತ್ತು
ಕಲಿಸೋಣ ದುರುಳರಿಗೆಲ್ಲ ನೀತಿ ಪಾಠದ ಗತ್ತು
ಬಡಜನರ ನೆತ್ತರ ಹೀರಿದರೆ ತಪ್ಪದು ಆಪತ್ತು
 
ನಾ ದಲಿತ ಅಸ್ಪೃಶ್ಯ ನಾ ತುಂಬಾ ಕೀಳೆನ್ನೊ
ಅಂಜಿಕೆಯ ಬದಿಗಿಟ್ಟು ನಡೆ ಭೀಮ ನಡೆದಂತೆ
ನಾ ದಲಿತ ಅಸ್ಪೃಶ್ಯ ನಾ ತುಂಬಾ ಕೀಳೆನ್ನೊ
ಅಂಜಿಕೆಯ ಬದಿಗಿಟ್ಟು ನಡೆ ಭೀಮ ನಡೆದಂತೆ
ಹೋರಾಟ ಮಾಡದೇನೆ ನಮಗಾಗಿ ಇಲ್ಲಿ ಇಂದು  ಏನು ಸಿಗದು
ನಮ ಧೈರ್ಯವೆ ನಮಗಾಭರಣವು ನ್ಯಾಯದ ರಣದಲ್ಲಿ
ಹೋರಾಟ ಮಾಡದೇನೆ ನಮಗಾಗಿ ಇಲ್ಲಿ ಇಂದು  ಏನು ಸಿಗದು
ನಮ ಧೈರ್ಯವೆ ನಮಗಾಭರಣವು ನ್ಯಾಯದ ರಣದಲ್ಲಿ
ಅವಮಾನವು ಬದಿಗಿರಲಿ ನಮ್ಮ ಗುರಿಯು ನಮಗಿರಲಿ
ಎಲ್ಲ ನೋವ ನುಂಗುತ ಸಾಗೋಣ
 
ಅಕ್ಷರದ ಅರಿವಿರದ ಅಸಹಾಯಕ ಮುಗ್ಧರನು
ಗುರಿಯಿಟ್ಟು ಬಲಿಕೊಟ್ಟು ಮೋಸ ಮಾಡುವಿರೆ
ಅಕ್ಷರದ ಅರಿವಿರದ ಅಸಹಾಯಕ ಮುಗ್ಧರನು
ಗುರಿಯಿಟ್ಟು ಬಲಿಕೊಟ್ಟು ಮೋಸ ಮಾಡುವಿರೆ
ಎಲ್ಲವನ್ನು ಕಳೆದುಕೊಂಡು ತನ್ನ‌
ಮನಸ್ಸುನೊಂದು ಬಡವನಿಂದು ಶಾಪ
ಕೊಟ್ಟರೆ ನಮಗ್ಯಾರಿಗು ಇಲ್ಲ ಉಳಿಗಾಲವು ಇಲ್ಲ
ಓಓ ಎಲ್ಲವನ್ನು ಕಳೆದುಕೊಂಡು ತನ್ನ‌
ಮನಸ್ಸುನೊಂದು ಬಡವನಿಂದು ಶಾಪ
ಕೊಟ್ಟರೆ ನಮಗ್ಯಾರಿಗು ಇಲ್ಲ ಉಳಿಗಾಲವು ಇಲ್ಲ
ಕಷ್ಟಗಳೆ ಬರದಿರಲಿ ನಮ್ಮ ಹೆಜ್ಜೆ ಮುಂದಿರಲಿ
ಛಲದಿ ಗೆಲುವ ಸಾಧಿಸಿ ತೋರೋಣ

ಒಂದೊಂದೆ ಕಿಡಿ ಸೇರುತ್ತ ಆದಂತೆ ಕಾಡ್ಗಿಚ್ಚು
ಒಗ್ಗೂಡಿ ಮುನ್ನುಗ್ಗೋಣ ಗೆಲ್ಲೋದೆ ನಮ್ಮ ಕೆಚ್ಚು
ಯಾರಿಗೂ ನಾವ್‌ ಹೆದರೋದಿಲ್ಲ ಬೆದರೋದಿಲ್ಲ ಈ ಹೊತ್ತು
ಯಾರಿಗೂ ನಾವ್‌ ಹೆದರೋದಿಲ್ಲ ತಲೆಬಾಗಲ್ಲ ಎಚ್ಚೆತ್ತು
ಕಲಿಸೋಣ ದುರುಳರಿಗೆಲ್ಲ ನೀತಿ ಪಾಠದ ಗತ್ತು
ಬಡಜನರ ನೆತ್ತರ ಹೀರಿದರೆ ತಪ್ಪದು ಆಪತ್ತು
ಕಲಿಸೋಣ ದುರುಳರಿಗೆಲ್ಲ ನೀತಿ ಪಾಠದ ಗತ್ತು
ಬಡಜನರ ನೆತ್ತರ ಹೀರಿದರೆ ತಪ್ಪದು ಆಪತ್ತು
 
ನಾ ದಲಿತ ಅಸ್ಪೃಶ್ಯ ನಾ ತುಂಬಾ ಕೀಳೆನ್ನೊ
ಅಂಜಿಕೆಯ ಬದಿಗಿಟ್ಟು ನಡೆ ಭೀಮ ನಡೆದಂತೆ
ನಾ ದಲಿತ ಅಸ್ಪೃಶ್ಯ ನಾ ತುಂಬಾ ಕೀಳೆನ್ನೊ
ಅಂಜಿಕೆಯ ಬದಿಗಿಟ್ಟು ನಡೆ ಭೀಮ ನಡೆದಂತೆ
ಹೋರಾಟ ಮಾಡದೇನೆ ನಮಗಾಗಿ ಇಲ್ಲಿ ಇಂದು  ಏನು ಸಿಗದು
ನಮ ಧೈರ್ಯವೆ ನಮಗಾಭರಣವು ನ್ಯಾಯದ ರಣದಲ್ಲಿ
ಹೋರಾಟ ಮಾಡದೇನೆ ನಮಗಾಗಿ ಇಲ್ಲಿ ಇಂದು  ಏನು ಸಿಗದು
ನಮ ಧೈರ್ಯವೆ ನಮಗಾಭರಣವು ನ್ಯಾಯದ ರಣದಲ್ಲಿ
ಅವಮಾನವು ಬದಿಗಿರಲಿ ನಮ್ಮ ಗುರಿಯು ನಮಗಿರಲಿ
ಎಲ್ಲ ನೋವ ನುಂಗುತ ಸಾಗೋಣ
 
ಅಕ್ಷರದ ಅರಿವಿರದ ಅಸಹಾಯಕ ಮುಗ್ಧರನು
ಗುರಿಯಿಟ್ಟು ಬಲಿಕೊಟ್ಟು ಮೋಸ ಮಾಡುವಿರೆ
ಅಕ್ಷರದ ಅರಿವಿರದ ಅಸಹಾಯಕ ಮುಗ್ಧರನು
ಗುರಿಯಿಟ್ಟು ಬಲಿಕೊಟ್ಟು ಮೋಸ ಮಾಡುವಿರೆ
ಎಲ್ಲವನ್ನು ಕಳೆದುಕೊಂಡು ತನ್ನ‌
ಮನಸ್ಸುನೊಂದು ಬಡವನಿಂದು ಶಾಪ
ಕೊಟ್ಟರೆ ನಮಗ್ಯಾರಿಗು ಇಲ್ಲ ಉಳಿಗಾಲವು ಇಲ್ಲ
ಓಓ ಎಲ್ಲವನ್ನು ಕಳೆದುಕೊಂಡು ತನ್ನ‌
ಮನಸ್ಸುನೊಂದು ಬಡವನಿಂದು ಶಾಪ
ಕೊಟ್ಟರೆ ನಮಗ್ಯಾರಿಗು ಇಲ್ಲ ಉಳಿಗಾಲವು ಇಲ್ಲ
ಕಷ್ಟಗಳೆ ಬರದಿರಲಿ ನಮ್ಮ ಹೆಜ್ಜೆ ಮುಂದಿರಲಿ
ಛಲದಿ ಗೆಲುವ ಸಾಧಿಸಿ ತೋರೋಣ

Ondonde Kidi song lyrics from Kannada Movie Paalaar starring Uma YG,Tilak A,, Lyrics penned by Varadaraj ChikkaballapuraSung by Uma YG Kolar,Mahesh Kumar D M ,G N Ashwath,Chi.Mu.Harish,Pradeep,Arjun,Ravi, Music Composed by Subramanya Acharya, film is Directed by Jeeva Naveenand film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ