ಕಾರ್ಮೋಡ ಕರಗಿ ಹೋಗಲಿ ತಿಳಿಬಾನಲ್ಲಿ ಬೆಳಕು ಮೂಡಲಿ
ಕಣ್ಣಂಚಲಿ ಖುಷಿಯು ಮಿಂಚಲಿ ಜೀವನವೆ ಜೇನಾಗಲಿ
ನಗಬೇಕು ದಿನವು ನಗುವಂತೆ ಹೂವು
ಮಿಡಿದಾಗ ಮನವು ಮರೆತಂತೆ ನೋವು
ಒಲವೆ ಬದುಕು ಒಲಿದು ಹಾಡು
ಕನಸ ಕಡಲ ಮೊಗೆದು ನೋಡು
ಸಾಗುವ ದಾರಿಲಿ ಸಾವಿರ ತಿರುವಲ್ಲಿ
ತೂಗಿದೆ ನೋಡಿಲ್ಲಿ ಜೀವನ ಜೋಕಾಲಿ
ಬದುಕಿನ ಪುಟದ ಪ್ರತಿಯೊಂದು ಸಾಲದು
ಹಿಡಿತಕೆ ಸಿಗುವ ಕ್ಷಣ ಬಂತು ಕೇಳು
ಈ ಒಲವಿಗೆ ಹಲವು ಆಕಾರ
ತಿಳಿ ಹೂ ಕನಸಿಗೆ ಒಲವೆ ಆಧಾರ
ಕಾರ್ಮೋಡ ಕರಗಿ ಹೋಗಲಿ ತಿಳಿಬಾನಲ್ಲಿ ಬೆಳಕು ಮೂಡಲಿ
ಕಣ್ಣಂಚಲಿ ಖುಷಿಯು ಮಿಂಚಲಿ ಜೀವನವೆ ಜೇನಾಗಲಿ
ನಗಬೇಕು ದಿನವು ನಗುವಂತೆ ಹೂವು
ಮಿಡಿದಾಗ ಮನವು ಮರೆತಂತೆ ನೋವು
ಒಲವೆ ಬದುಕು ಒಲಿದು ಹಾಡು
ಕನಸ ಕಡಲ ಮೊಗೆದು ನೋಡು
ಸಾಗುವ ದಾರಿಲಿ ಸಾವಿರ ತಿರುವಲ್ಲಿ
ತೂಗಿದೆ ನೋಡಿಲ್ಲಿ ಜೀವನ ಜೋಕಾಲಿ
ಬದುಕಿನ ಪುಟದ ಪ್ರತಿಯೊಂದು ಸಾಲದು
ಹಿಡಿತಕೆ ಸಿಗುವ ಕ್ಷಣ ಬಂತು ಕೇಳು
ಈ ಒಲವಿಗೆ ಹಲವು ಆಕಾರ
ತಿಳಿ ಹೂ ಕನಸಿಗೆ ಒಲವೆ ಆಧಾರ