Elli Bhoorame Lyrics

ಎಲ್ಲಿ ಭೂರಮೆ Lyrics

in Nandanavanadol

in ನಂದನವನದೊಳ್

LYRIC

Song Details Page after Lyrice

-
ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ ಭಿಮ್ಮನೆ ಬಂದಳೊ
ಎಲ್ಲಿ ಮೋಹನ ಗಿರಿಯ ಬೆಡಗಿನ ರೂಪಿನಿಂದಲಿ ನಿಂದಳೊ
ಎಲ್ಲಿ ಮುಗಿಲಲಿ ಮಿಂಚಿನನೊಳ್‌ ಕಾವೇರಿ ಹೊಳೆ ಹೊಳೆವಳೊ
ಎಲ್ಲಿ ನೆಲವನು ತಣಿಸಿ ಜನಮನದ ಕಳೆ ಕಳೆ ಕಳೆವಳೊ
ಅಲ್ಲಿ ಆ ಕಡೆ ನೋಡಲ ಅಲ್ಲಿ ಕೊಡಗರ ನಾಡಲ
ಅಲ್ಲಿ ಆ ಕಡೆ ನೋಡಲ ಅಲ್ಲಿ ಕೊಡವರ ಬೀಡಲ
 
ಸವಿದು ಮೆದ್ದರೊ ಯಾರು ಪೂರ್ವದಿ ಹುಲಿಯ ಹಾಲಿನ ಮೇವನು
ಕವಣೆ ಸಿರಿಕಲ್ಲಾಟ ಹಗ್ಗಕೆ ಸೆಳೆದರೊ ಹೆಬ್ಬಾವನು
ಸವರಿ ಆನೆಯ ಸೊಂಡಿಲಿನ ರಣಕೊಂಬನಾರ್‌ ಭೋರ್ಗರೆದರೊ
ಸವೆದು ಸವಿಯದ ಸಾಹಸತ್ವದ ಕ್ಷಾತ್ರ ಬೇಟೆಯ ಮೆರೆದರೊ
ಅವರು ಸೋಲ್‌ ಸಾವರಿಯರು  ಅವರು ಕಡುಗಲಿ ಗರಿಯರು
ಅವರು ಕಡುಗಲಿ ಗರಿಯರು ಅವರೆ ಕೊಡಗಿನ ಹಿರಿಯರು
 
ಇದು ಅಗಸ್ತ್ಯನ ತಪದ ಮಣೆ ಕಾವೇರಿ ತಾಯ ತವರಮನೆ
ಕದನ ಸಿರಿಗುಯ್ಯಾಲೆ ತೂಗಿದನಿಲ್ಲಿ ಚಂದಿರವರ್ಮನೆ
ಇದಕೊ ಚೆಂಗಾಳ್ವರಸರ ಆಡಂಭರವು ಕುಣಿದ ಶ್ರೀರಂಗವು
ಇದೊ ಇದೊ ಇಲ್ಲರಳ್ದ ಹಾವೇರಿಯರ ಬಲಗಿರಿ ಶೃಂಗವು
ವಿಧಿಯ ಮಾಟದ ಕೊಡಗಿದು ಮೊದಲು ನಮ್ಮ ಕಡೆಗಿದು
ಮೊದಲು ನಮ್ಮದು ಕಡೆಗಿದು ಕದಲದೆಮ್ಮನು ಬೆಡಗಿದು
 
ಒಮ್ಮತವು ಒಗ್ಗಟ್ಟು ಒಂದೆ ಮನವು ಎಲ್ಲಿದೆ ಹೇಳಿರಿ
ಸುಮ್ಮನಿಟ್ಟರೊ ದಟ್ಟಿ ಕುಪ್ಪಸ ಹಾಡು ಹುತ್ತರಿಗೇಳಿರಿ
ಚಿಮ್ಮಿ ಪಾತುರೆ ಕೋಲ ಹೊಯ್ಲಿಗೆ ಕುಣಿವ ಪದ ಹೊರ ಹೊಮ್ಮಲಿ
ಅಮ್ಮೆ ಹರಸಿದ ಸೀಮೆ ನಮಗಿದು ಇರಲಿ ನಮ್ಮದೆ ನಮ್ಮಲಿ
ನೆಮ್ಮದಿಯನಿದು ತಾಳಲಿ ಅಮ್ಮೆಯ ಬಲ ತೋಳಲಿ
ಅಮ್ಮೆಯ ಬಲ ತೋಳಲಿ ನಮ್ಮ ಕೊಡಗಿದು ಬಾಳಲಿ

Elli Bhoorame song lyrics from Kannada Movie Nandanavanadol starring Bharath Rai, Vanchira Vittala Nanaiah, Santhosh Shetty, Lyrics penned by Panje Mangesha Rao Sung by Reeta Uttaiah, Music Composed by Shiva Sathya, film is Directed by Sandeep Shetty Vittal and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ