Arasanje Needida Amara Sandesharu Lyrics

in Nala Damayanthi

LYRIC

ಅರಸಂಚೆ ನೀಡಿದ ಅಮರ ಸಂದೇಶವದು
ಅನುರಾಗದ ಅಲೆಗಳನು ಏಳಿಸುತ ನಿಂತಿಹುದು

ಅರಸಂಚೆ ನೀಡಿದ ಅಮರ ಸಂದೇಶವದು
ಅನುರಾಗದ ಅಲೆಗಳನು ಏಳಿಸುತ ನಿಂತಿಹುದು

ಅನುದಿನವೂ ಅವನಡಿಯ ಅನುಸರಿಸಿ ಬಾಳೆಂದು
ಅನುಭವದ ಕಥೆ ಹೇಳಿ ಆಣತಿಯ ನೀಡಿಹುದು

|| ಅರಸಂಚೆ ನೀಡಿದ ಅಮರ ಸಂದೇಶವದು
ಅನುರಾಗದ ಅಲೆಗಳನು ಏಳಿಸುತ ನಿಂತಿಹುದು…||

ನಸುನಗುವ ಕುಸುಮಗಳಾ ಸೌಗಂಧದೊಡಗೂಡಿ
ದಿಸೆ ದಿಸೆಗೂ ಚಲಿಸುವ ಮಲಯ ಮಾರುತನೇ
ಕಾದಿಹುದು ದಮಯಂತಿ ದಯೆ ತೋರೋ ಧರಿಣೀಶ
ಎಂದುರುಹಿ ಕರೆತರದೆ ಸುಮ್ಮನಿರುವುದು ಸರಿಯೇ

|| ಅರಸಂಚೆ ನೀಡಿದ ಅಮರ ಸಂದೇಶವದು
ಅನುರಾಗದ ಅಲೆಗಳನು ಏಳಿಸುತ ನಿಂತಿಹುದು…||

 

Arasanje Needida Amara Sandesharu song lyrics from Kannada Movie Nala Damayanthi starring P Bhanumathi, Kemparaj Urs, Ganapathi Bhat, Lyrics penned by B Gopala Sung by Indirathanaya, Music Composed by B Gopalam, film is Directed by Kemparaj Urs and film is released on 1957