Nee Nudiyadiralenu Lyrics

in Marali Goodige

LYRIC

-
ನೀ ನುಡಿಯದಿರಲೇನು ಬಯಲಾಗಿಹುದು ಎಲ್ಲ
ಕಣ್ಣಂಚಿನಾ ಕೊನೆಯಾ ಭಾವದಲ್ಲಿ ಬಗೆ ನೋವಕ್ಕೆ
ಬಳಲಿರುವ ಮೊಗವಿಹುದು
ಕಾರ್ಮೋಡದಾಗಸದ ರೀತಿಯಲ್ಲಿ
ನೀ ನುಡಿಯದಿರಲೇನು ಬಯಲಾಗಿಹುದು ಎಲ್ಲ 
 
ಬಾಡಿರುವ ಮೊಗದಲ್ಲಿ ಕಳೆಯಿರದ ಕಣ್ಣಲ್ಲಿ 
ನಿನ್ನ ಸಿರಿವಂತಿಕೆಯಾ ಕಾಣುವಾಸೇ... ಹ್ಹಾಂ.. 
ಬಾಡಿರುವ ಮೊಗದಲ್ಲಿ ಕಳೆಯಿರದ ಕಣ್ಣಲ್ಲಿ 
ನಿನ್ನ ಸಿರಿವಂತಿಕೆಯಾ ಕಾಣುವಾಸೇ... ಹ್ಹಾಂ.. 
ಸೊಗವಿರದ ತುಟಿಯಲ್ಲಿ ತೂಗಿರುವ ನಗೆಯಲ್ಲಿ 
ಚೆಲುಗನಸಿರುಳುಗಳಾ ಹುಡುಕುವಾಸೇ 
 
||ನೀ ನುಡಿಯದಿರಲೇನು ಬಯಲಾಗಿಹುದು ಎಲ್ಲ ||
 
ಅರೆಘಳಿಗೆ ಸುಖ ಸ್ವಪ್ನ ಬರಲಾರದೆಮ್ಮೊಡನೇ 
ವಾತ್ಸವತೇ ಗಹಗಹಿಸಿ  ಸೆಳೆಯಲಿಹುದು.. ಹ್ಹಾಂ... 
ಅರೆಘಳಿಗೆ ಸುಖ ಸ್ವಪ್ನ ಬರಲಾರದೆಮ್ಮೊಡನೇ 
ವಾತ್ಸವತೇ ಗಹಗಹಿಸಿ  ಸೆಳೆಯಲಿಹುದು.... 
ಮರೆತಲ್ಲಿ ಕೊನೆಗೊಮ್ಮೆ ಮನ ಬಿಚ್ಚಿ ನಕ್ಕು ಬೀಡು 
ಬೇರೆ ಹಾದಿಯ ನಾವೂ ಹಿಡಿಯಬಹುದೂ... 
 
||ನೀ ನುಡಿಯದಿರಲೇನು ಬಯಲಾಗಿಹುದು ಎಲ್ಲ
ಕಣ್ಣಂಚಿನಾ ಕೊನೆಯಾ ಭಾವದಲ್ಲಿ ಬಗೆ ನೋವಕ್ಕೆ
ಬಳಲಿರುವ ಮೊಗವಿಹುದು ಕಾರ್ಮೋಡದಾಗಸದ ರೀತಿಯಲ್ಲಿ
ನೀ ನುಡಿಯದಿರಲೇನು ಬಯಲಾಗಿಹುದು ಎಲ್ಲ ||

Nee Nudiyadiralenu song lyrics from Kannada Movie Marali Goodige starring Kalyan Kumar, Poornima, Roopadevi, Lyrics penned by K S Nissar Ahmed Sung by S P Balasubrahmanyam, Music Composed by Rajan-Nagendra, film is Directed by K R Shantharam and film is released on 1984