ಕೋಗಿಲೆಯೇ ಕ್ಷೇಮವೇ
ಕಸ್ತೂರಿಯೇ ಸೌಖ್ಯವೇ
ಕೋಗಿಲೆಯೇ ಕ್ಷೇಮವೇ
ಕಸ್ತೂರಿಯೇ ಸೌಖ್ಯವೇ
ನೈದಿಲೆಯೇ ನಿದಿರೆಯೇ
ಮಲ್ಲಿಗೆಯೇ ಮಂಪರೇ
ಏಳಿರಿ ಏಳಿರಿ ಮೇಲೆ ನೇಸರ
ಬಂದನು ಮೇಲೆ ನೋಡಿ
ಮಂಜಿನ ನೀರಲ್ಲಿ ಮುದ್ದು
ಮೋರೆಯ ತೊಳೆದು ಬಂದು ಹಾಡಿ
|| ಕೋಗಿಲೆಯೇ ಕ್ಷೇಮವೇ
ಕಸ್ತೂರಿಯೇ ಸೌಖ್ಯವೇ
ನೈದಿಲೆಯೇ ನಿದಿರೆಯೇ
ಮಲ್ಲಿಗೆಯೇ ಮಂಪರೇ ||
ಕಾನನದಲ್ಲಿ ಬೀಸುವ ಗಾಳಿಗೆ
ಎಂದು ಆಲಸ್ಯ ಬಂದಿದೆ ಹೇಳೀ
ಬೆಟ್ಟಗಳಲ್ಲಿ ಓಡುವ ನದಿಯು
ಎಂದು ದಣಿದು ನಿಂತಿದೆ ಕೇಳೀ
ರಾಗಗಳಂತೆ ಮೂಡುವ ಮೇಘಗಳಿಗೆ
ಬೇಸರ ಬಂದಿತೆ ಕೇಳೀ
ವೀರರ ಕೈಲಿ ಬಗ್ಗದ ಮಳೆಯ
ಬಿಲ್ಲು ಬರೆನು ಎಂಬುದೆ ಹೇಳೀ
ಭುವನ ತಿರುಗಿದೆ ಓ ಓ ಓ ಗಗನ ಚಲಿಸಿದೇ
ಕವನ ಕದೆದಿದೆ ಓ ಓ ಓ ಬದುಕು ಬರೆಸಿದೆ
ಏಳಿರಿ ಏಳಿರಿ ಮೇಲೆ ನೇಸರ
ಬಂದನು ಮೇಲೆ ನೋಡಿ
ಮಣ್ಣಿನ ನೀರಲ್ಲಿ ಮುದ್ದು
ಮೋರೆಯ ತೊಳೆದು ಬಂದು ಹಾಡಿ
|| ಕೋಗಿಲೆಯೇ ಕ್ಷೇಮವೇ
ಕಸ್ತೂರಿಯೇ ಸೌಖ್ಯವೇ
ನೈದಿಲೆಯೇ ನಿದಿರೆಯೇ
ಮಲ್ಲಿಗೆಯೇ ಮಂಪರೇ ||
ಜಾಣರ ಗುಂಪು ಕಂಪಿನ ತೋಟಕ್ಕೆ
ಹಾರಿ ಸೊಂಪಿನ ಜೇನನ್ನು ತಂದವು
ಪುಂಡರ ಗುಂಪು ಹುಳಿಯ ತೋಪಿಗೆ
ನುಗ್ಗಿ ಹೊಟ್ಟೆಯ ಬಿರಿಯ ತಿಂದವು
ತಪ್ಪಲಿನಲ್ಲಿ ರಂಗಿನ ಅಚ್ಚೆಯ ಹೊಯ್ದ
ಪತಂಗ ಪಡೆಯ ಪಯಣ
ಕೆಚ್ಚಲಿನಲ್ಲಿ ಗೋವಿನ ಕೂಸಿನ
ದೊಡ್ಡ ಕಣ್ಣಿನ ಮೆಚ್ಚಿನ ಮೌನ
ಕಮಲ ಕುಳಿತೆಯ ಓ ಓ ಓ ಅಳಿಲೆ ಅವಿತೆಯ
ನವಿಲೆ ನಿಂತೆಯ ಓ ಓ ಓ ಮನಸೆ ಮರೆತೆಯ
ಏಳಿರಿ ಏಳಿರಿ ಮೇಲೆ ನೇಸರ
ಬಂದನು ಮೇಲೆ ನೋಡಿ
ಮಣ್ಣಿನ ನೀರಲ್ಲಿ ಮುದ್ದು
ಮೋರೆಯ ತೊಳೆದು ಬಂದು ಹಾಡಿ
|| ಕೋಗಿಲೆಯೇ ಕ್ಷೇಮವೇ
ಕಸ್ತೂರಿಯೇ ಸೌಖ್ಯವೇ
ನೈದಿಲೆಯೇ ನಿದಿರೆಯೇ
ಮಲ್ಲಿಗೆಯೇ ಮಂಪರೇ ||
ಕೋಗಿಲೆಯೇ ಕ್ಷೇಮವೇ
ಕಸ್ತೂರಿಯೇ ಸೌಖ್ಯವೇ
ಕೋಗಿಲೆಯೇ ಕ್ಷೇಮವೇ
ಕಸ್ತೂರಿಯೇ ಸೌಖ್ಯವೇ
ನೈದಿಲೆಯೇ ನಿದಿರೆಯೇ
ಮಲ್ಲಿಗೆಯೇ ಮಂಪರೇ
ಏಳಿರಿ ಏಳಿರಿ ಮೇಲೆ ನೇಸರ
ಬಂದನು ಮೇಲೆ ನೋಡಿ
ಮಂಜಿನ ನೀರಲ್ಲಿ ಮುದ್ದು
ಮೋರೆಯ ತೊಳೆದು ಬಂದು ಹಾಡಿ
|| ಕೋಗಿಲೆಯೇ ಕ್ಷೇಮವೇ
ಕಸ್ತೂರಿಯೇ ಸೌಖ್ಯವೇ
ನೈದಿಲೆಯೇ ನಿದಿರೆಯೇ
ಮಲ್ಲಿಗೆಯೇ ಮಂಪರೇ ||
ಕಾನನದಲ್ಲಿ ಬೀಸುವ ಗಾಳಿಗೆ
ಎಂದು ಆಲಸ್ಯ ಬಂದಿದೆ ಹೇಳೀ
ಬೆಟ್ಟಗಳಲ್ಲಿ ಓಡುವ ನದಿಯು
ಎಂದು ದಣಿದು ನಿಂತಿದೆ ಕೇಳೀ
ರಾಗಗಳಂತೆ ಮೂಡುವ ಮೇಘಗಳಿಗೆ
ಬೇಸರ ಬಂದಿತೆ ಕೇಳೀ
ವೀರರ ಕೈಲಿ ಬಗ್ಗದ ಮಳೆಯ
ಬಿಲ್ಲು ಬರೆನು ಎಂಬುದೆ ಹೇಳೀ
ಭುವನ ತಿರುಗಿದೆ ಓ ಓ ಓ ಗಗನ ಚಲಿಸಿದೇ
ಕವನ ಕದೆದಿದೆ ಓ ಓ ಓ ಬದುಕು ಬರೆಸಿದೆ
ಏಳಿರಿ ಏಳಿರಿ ಮೇಲೆ ನೇಸರ
ಬಂದನು ಮೇಲೆ ನೋಡಿ
ಮಣ್ಣಿನ ನೀರಲ್ಲಿ ಮುದ್ದು
ಮೋರೆಯ ತೊಳೆದು ಬಂದು ಹಾಡಿ
|| ಕೋಗಿಲೆಯೇ ಕ್ಷೇಮವೇ
ಕಸ್ತೂರಿಯೇ ಸೌಖ್ಯವೇ
ನೈದಿಲೆಯೇ ನಿದಿರೆಯೇ
ಮಲ್ಲಿಗೆಯೇ ಮಂಪರೇ ||
ಜಾಣರ ಗುಂಪು ಕಂಪಿನ ತೋಟಕ್ಕೆ
ಹಾರಿ ಸೊಂಪಿನ ಜೇನನ್ನು ತಂದವು
ಪುಂಡರ ಗುಂಪು ಹುಳಿಯ ತೋಪಿಗೆ
ನುಗ್ಗಿ ಹೊಟ್ಟೆಯ ಬಿರಿಯ ತಿಂದವು
ತಪ್ಪಲಿನಲ್ಲಿ ರಂಗಿನ ಅಚ್ಚೆಯ ಹೊಯ್ದ
ಪತಂಗ ಪಡೆಯ ಪಯಣ
ಕೆಚ್ಚಲಿನಲ್ಲಿ ಗೋವಿನ ಕೂಸಿನ
ದೊಡ್ಡ ಕಣ್ಣಿನ ಮೆಚ್ಚಿನ ಮೌನ
ಕಮಲ ಕುಳಿತೆಯ ಓ ಓ ಓ ಅಳಿಲೆ ಅವಿತೆಯ
ನವಿಲೆ ನಿಂತೆಯ ಓ ಓ ಓ ಮನಸೆ ಮರೆತೆಯ
ಏಳಿರಿ ಏಳಿರಿ ಮೇಲೆ ನೇಸರ
ಬಂದನು ಮೇಲೆ ನೋಡಿ
ಮಣ್ಣಿನ ನೀರಲ್ಲಿ ಮುದ್ದು
ಮೋರೆಯ ತೊಳೆದು ಬಂದು ಹಾಡಿ
|| ಕೋಗಿಲೆಯೇ ಕ್ಷೇಮವೇ
ಕಸ್ತೂರಿಯೇ ಸೌಖ್ಯವೇ
ನೈದಿಲೆಯೇ ನಿದಿರೆಯೇ
ಮಲ್ಲಿಗೆಯೇ ಮಂಪರೇ ||
Kogileye Kshemave song lyrics from Kannada Movie Mannina Doni starring Ambarish, Sudharani, Vanitha Vasu, Lyrics penned by Hamsalekha Sung by S Janaki, Music Composed by Hamsalekha, film is Directed by M S Rajashekar and film is released on 1992