ಒಳ್ಳೆ ಜನಕ್ಕೆ ಕಾಲ ಈ ಭೂಮಿ ಮ್ಯಾಲೆ ಇಲ್ಲ
ಶಾಪ ಏನೊ ಪಾಪ ಏನೊ ಮಲ್ಲಿಕಾರ್ಜುನ
ಒಳ್ಳೆ ಮನಕೆ ಶೂಲ ಹಿಂದೇನೆ ಬರುವುದಲ್ಲ
ಶಾಪ ಏನೊ ಪಾಪ ಏನೊ ಮಲ್ಲಿಕಾರ್ಜುನ
ಊರನೆ ಕಾಯುವ ಮಗುವ ಮನದ ಗುಂಡಿಗೆ
ಅಕ್ಕರೆ ಹಾಸುವ ಹಾಲ ಒಡಲ ಜೋಳಿಗೆ
ನೋವಲ್ಲೆ ನರಳಿದೆ ಆಲದ ಮರ
ಕಣ್ಣೀರ ಒರೆಸುವ ಕೈಗಳು ದೂರ
ಒಳ್ಳೆ ಜನಕ್ಕೆ ಕಾಲ ಈ ಭೂಮಿ ಮ್ಯಾಲೆ ಇಲ್ಲ
ಶಾಪ ಏನೊ ಪಾಪ ಏನೊ ಮಲ್ಲಿಕಾರ್ಜುನ
ಅಂಬಲಿ ಕುಡಿಸಿದ ತಾಯಿ ಈಗ ತಬ್ಬಲಿ
ತೊಟ್ಟಿಲಿನ ಕುಡಿಯ ಋಣ ಕೊಂಡಿ ಕಳಚಿದೆ
ನಗುವನೆ ಕಲಿಸಿದ ಮಾತು ಮೂಕವಾಗಿದೆ
ಕತ್ತಲೆಯು ಕಳೆದು ದಿಕ್ಕೊಂದು ಸಿಗುವುದೆ
ಹೂವನು ಹಾಸಿದ ಗಾಳಿಯ ನಡುವೆ
ಮುಳ್ಳನು ನೆಟ್ಟರೆ ನರಿಗಳು
ಬೆಣ್ಣೆಗೆ ಸುಣ್ಣವ ಕಲಿಸಿ ತಿನ್ನಿಸೊ
ವಿಷವ ತುಂಬಿದ ಮನಗಳು
ಬೆಳಗುವ ಸೂರ್ಯನೆ ಉಸಿರು ಹಿಡಿದು ಅತ್ತರೆ
ನೀರ ಒರೆಸುವ ಕೈಗಳು ಎಲ್ಲಿ
ನೋವಲ್ಲೆ ನರಳಿದೆ ಮಮತೆಯ ಬಳ್ಳಿ
||ಒಳ್ಳೆ ಜನಕ್ಕೆ ಕಾಲ ಈ ಭೂಮಿ ಮ್ಯಾಲೆ ಇಲ್ಲ
ಶಾಪ ಏನೊ ಪಾಪ ಏನೊ ಮಲ್ಲಿಕಾರ್ಜುನ||
ಕಟುಕನ ಮಾತಿನ ಚಾಟಿ ಏಟ ಬಿರುಸಿಗೆ
ಕಟ್ಟಿಕೊಂಡ ಕನಸ್ಸು ಕನಸ್ಸಾಗೆ ಉಳಿದಿದೆ
ಮುಳ್ಳಿನ ಬಲೆಯಲಿ ಸಿಲುಕಿ ನರಳೊ ಪ್ರೀತಿಗೆ
ಗ್ರಹಣವು ಕಳೆದು ಒಳ್ಳೆ ಕಾಲ ಬರುವುದೆ
ಪ್ರೀತಿಯ ನಂಬಿದ ಹೂವಿನ ಹೃದಯ ಆಸೆಯ ಆಸರೆ ಬಯಸಿದೆ
ವೇದನೆ ತುಂಬಿದ ರಾಜನ ನೆನೆದು ತನ್ನಲ್ಲೆ ಕಾಲು ಕೊರಗಿದೆ
ಯಾರನು ಪ್ರೀತಿಸಲು ಹಣೆಯ ಬರಹ ಬರೆದರೊ
ನೋವಲ್ಲಿ ನರಳಿದೆ ಜೀವದ ಮರ
ಕಣ್ಣೀರ ಒರೆಸುವ ಪ್ರೀತಿಯು ದೂರ
ಒಳ್ಳೆ ಜನಕ್ಕೆ ಕಾಲ ಈ ಭೂಮಿ ಮ್ಯಾಲೆ ಇಲ್ಲ
ಶಾಪ ಏನೊ ಪಾಪ ಏನೊ ಮಲ್ಲಿಕಾರ್ಜುನ
ಒಳ್ಳೆ ಮನಕೆ ಶೂಲ ಹಿಂದೇನೆ ಬರುವುದಲ್ಲ
ಶಾಪ ಏನೊ ಪಾಪ ಏನೊ ಮಲ್ಲಿಕಾರ್ಜುನ
ಊರನೆ ಕಾಯುವ ಮಗುವ ಮನದ ಗುಂಡಿಗೆ
ಅಕ್ಕರೆ ಹಾಸುವ ಹಾಲ ಒಡಲ ಜೋಳಿಗೆ
ನೋವಲ್ಲೆ ನರಳಿದೆ ಆಲದ ಮರ
ಕಣ್ಣೀರ ಒರೆಸುವ ಕೈಗಳು ದೂರ
ಒಳ್ಳೆ ಜನಕ್ಕೆ ಕಾಲ ಈ ಭೂಮಿ ಮ್ಯಾಲೆ ಇಲ್ಲ
ಶಾಪ ಏನೊ ಪಾಪ ಏನೊ ಮಲ್ಲಿಕಾರ್ಜುನ
ಅಂಬಲಿ ಕುಡಿಸಿದ ತಾಯಿ ಈಗ ತಬ್ಬಲಿ
ತೊಟ್ಟಿಲಿನ ಕುಡಿಯ ಋಣ ಕೊಂಡಿ ಕಳಚಿದೆ
ನಗುವನೆ ಕಲಿಸಿದ ಮಾತು ಮೂಕವಾಗಿದೆ
ಕತ್ತಲೆಯು ಕಳೆದು ದಿಕ್ಕೊಂದು ಸಿಗುವುದೆ
ಹೂವನು ಹಾಸಿದ ಗಾಳಿಯ ನಡುವೆ
ಮುಳ್ಳನು ನೆಟ್ಟರೆ ನರಿಗಳು
ಬೆಣ್ಣೆಗೆ ಸುಣ್ಣವ ಕಲಿಸಿ ತಿನ್ನಿಸೊ
ವಿಷವ ತುಂಬಿದ ಮನಗಳು
ಬೆಳಗುವ ಸೂರ್ಯನೆ ಉಸಿರು ಹಿಡಿದು ಅತ್ತರೆ
ನೀರ ಒರೆಸುವ ಕೈಗಳು ಎಲ್ಲಿ
ನೋವಲ್ಲೆ ನರಳಿದೆ ಮಮತೆಯ ಬಳ್ಳಿ
||ಒಳ್ಳೆ ಜನಕ್ಕೆ ಕಾಲ ಈ ಭೂಮಿ ಮ್ಯಾಲೆ ಇಲ್ಲ
ಶಾಪ ಏನೊ ಪಾಪ ಏನೊ ಮಲ್ಲಿಕಾರ್ಜುನ||
ಕಟುಕನ ಮಾತಿನ ಚಾಟಿ ಏಟ ಬಿರುಸಿಗೆ
ಕಟ್ಟಿಕೊಂಡ ಕನಸ್ಸು ಕನಸ್ಸಾಗೆ ಉಳಿದಿದೆ
ಮುಳ್ಳಿನ ಬಲೆಯಲಿ ಸಿಲುಕಿ ನರಳೊ ಪ್ರೀತಿಗೆ
ಗ್ರಹಣವು ಕಳೆದು ಒಳ್ಳೆ ಕಾಲ ಬರುವುದೆ
ಪ್ರೀತಿಯ ನಂಬಿದ ಹೂವಿನ ಹೃದಯ ಆಸೆಯ ಆಸರೆ ಬಯಸಿದೆ
ವೇದನೆ ತುಂಬಿದ ರಾಜನ ನೆನೆದು ತನ್ನಲ್ಲೆ ಕಾಲು ಕೊರಗಿದೆ
ಯಾರನು ಪ್ರೀತಿಸಲು ಹಣೆಯ ಬರಹ ಬರೆದರೊ
ನೋವಲ್ಲಿ ನರಳಿದೆ ಜೀವದ ಮರ
ಕಣ್ಣೀರ ಒರೆಸುವ ಪ್ರೀತಿಯು ದೂರ