-
ಗೆಳೆಯ ನೀಡುವೆಯ ಒಂದು ಕಿರುನಗೆಯ
ಸಂತೆಯ ನಡುವೆ ನಿಂತು ಆಲಿಸೊ ನನ್ನ ದನಿಯ
ಸಂತಸದಿಂದ ನೀನು ಆಗುವೆ ಏನು ಇನಿಯ
ಗೆಳೆಯ ನೀಡುವೆಯ ಒಂದು ಕಿರುನಗೆಯ
ನಸುನಗುತ್ತಿದೆ ಸಾಲು ಅಂಗಡಿಯಲ್ಲಿ ಹೂವು
ಪಿಸುನುಡಿಯುತ ಹೀಗೆ ಜೊತೆ ನಡೆದರೆ ನಾವು
ಹಾಗೇನೆ ಬೆರಳು ಮುಗಿಲಾದವು
ಬಿಸಿಲು ಬೇಗೆಯಲ್ಲಿ ಉಸಿರ ನೀಡುವಂತ ತಂಪು ಭಾವನೆ
ಮೆಲುಕು ಹಾಕುತ್ತೇನೆ ಮರೆತು ಹೋಗದಂತೆ ನಿನ್ನ ಮಾತನೆ
||ಗೆಳೆಯ ನೀಡುವೆಯ ಒಂದು ಕಿರುನಗೆಯ||
ಪರಿಚಯವಿದು ಮೆಲ್ಲ ಪರಿಮಣಿಸಿಕೊ ಹೇಗೆ
ಸವಿಗನಸ್ಸಲಿ ಹಾಡು ಮರುಕಳಿಸಿದ ಹಾಗೆ
ಮಳೆಯು ಬಂತು ಮರುಭೂಮಿಗೆ
ಕನಸ್ಸಿಗಿಂತ ಈಗ ನನಸೆ ತುಂಬ ಆಪ್ತ ನಿನ್ನ ಸಂಗಡ
ಹೃದಯವನ್ನು ಎಂದೊ ಕೊಟ್ಟೆ ನಿನಗೆ ನೋಡು ನಾನು ಮುಂಗಡ
||ಗೆಳೆಯ ನೀಡುವೆಯ ಒಂದು ಕಿರುನಗೆಯ||
||ಗೆಳೆಯ ನೀಡುವೆಯ ಒಂದು ||
-
ಗೆಳೆಯ ನೀಡುವೆಯ ಒಂದು ಕಿರುನಗೆಯ
ಸಂತೆಯ ನಡುವೆ ನಿಂತು ಆಲಿಸೊ ನನ್ನ ದನಿಯ
ಸಂತಸದಿಂದ ನೀನು ಆಗುವೆ ಏನು ಇನಿಯ
ಗೆಳೆಯ ನೀಡುವೆಯ ಒಂದು ಕಿರುನಗೆಯ
ನಸುನಗುತ್ತಿದೆ ಸಾಲು ಅಂಗಡಿಯಲ್ಲಿ ಹೂವು
ಪಿಸುನುಡಿಯುತ ಹೀಗೆ ಜೊತೆ ನಡೆದರೆ ನಾವು
ಹಾಗೇನೆ ಬೆರಳು ಮುಗಿಲಾದವು
ಬಿಸಿಲು ಬೇಗೆಯಲ್ಲಿ ಉಸಿರ ನೀಡುವಂತ ತಂಪು ಭಾವನೆ
ಮೆಲುಕು ಹಾಕುತ್ತೇನೆ ಮರೆತು ಹೋಗದಂತೆ ನಿನ್ನ ಮಾತನೆ
||ಗೆಳೆಯ ನೀಡುವೆಯ ಒಂದು ಕಿರುನಗೆಯ||
ಪರಿಚಯವಿದು ಮೆಲ್ಲ ಪರಿಮಣಿಸಿಕೊ ಹೇಗೆ
ಸವಿಗನಸ್ಸಲಿ ಹಾಡು ಮರುಕಳಿಸಿದ ಹಾಗೆ
ಮಳೆಯು ಬಂತು ಮರುಭೂಮಿಗೆ
ಕನಸ್ಸಿಗಿಂತ ಈಗ ನನಸೆ ತುಂಬ ಆಪ್ತ ನಿನ್ನ ಸಂಗಡ
ಹೃದಯವನ್ನು ಎಂದೊ ಕೊಟ್ಟೆ ನಿನಗೆ ನೋಡು ನಾನು ಮುಂಗಡ
||ಗೆಳೆಯ ನೀಡುವೆಯ ಒಂದು ಕಿರುನಗೆಯ||
||ಗೆಳೆಯ ನೀಡುವೆಯ ಒಂದು ||