Ooru Oorinalu Ninde Lyrics

in Lady Police

LYRIC

-
ಊರು ಊರಿನಲು ನಿಂದೆ ಸುದ್ದಿ ಹರಡಿದೆ
ಅಂತ ಸಾಹಸ ನಾನು ಏನು ಮಾಡಿದೆ
ಪ್ರೇಮಪತ್ರಿಕೆಗೆ ನೀನೆ ಭೇಟಿ ನೀಡಿದೆ
ಮಾತು ಮಾತಿನಲು ಏನೊ ಮೋಡಿ ಮಾಡಿದೆ
ಪ್ರೀತಿಯ ಸುದ್ದಿ ಆಗಲೆ ಬರೆದಾಯ್ತು
ಪ್ರೇಮವು ಎಂಥ ವೇಗಕ್ಕೆ ಪ್ರಿಂಟಾಯ್ತು
ನಿನಗಾಗಿ ಈ ಜೀವನ ಅನುರಾಗ ಭಾವ ಪಾವನ
ಊರು ಊರಿನಲು ನಿಂದೆ ಸುದ್ದಿ ಹರಡಿದೆ
ಅಂತ ಸಾಹಸ ನಾನು ಏನು ಮಾಡಿದೆ
 
ನೀ ಹತ್ತಿರ ಬಂದಾಗಲೆ ಜಿಲ್‌ ಎಂದಿದೆ
ನನ್ನೆದೆ ಜಿಲ್ ಎಂದಿದೆ
ನೀ ಮುಟ್ಟಲು ಈ ಕೈಯ್ಯನು ಜುಮ್‌ ಎಂದಿದೆ
ಮೈ ಜುಮ್‌ ಎಂದಿದೆ
ಹುಡುಗಾಟದ ಹುಡುಗಿಯ ಹುಡುಕಾಡಿದೆ
ಬೆನ್ನತ್ತಿ ನಾ ಕಾಡಿದೆ
ಅನುರಾಗದ ಸರಿಗಮ ಸಂಗೀತವು ಎದೆತುಂಬಿ ಹಾಡಾಗಿದೆ
 
||ಊರು ಊರಿನಲು ನಿಂದೆ ಸುದ್ದಿ ಹರಡಿದೆ
ಅಂತ ಸಾಹಸ ನಾನು ಏನು ಮಾಡಿದೆ||
 
ನವರಂಗನು ನೀ ತುಂಬಿದೆ
ಬಾಳೆಲ್ಲವು ಈ ದಿನ ಹಸಿರಾಗಿದೆ
ಮಳೆಬಿಲ್ಲಿನ ರಥವೇರುತ
ಬಾನಲ್ಲಿಯೆ ಆಸೆಯು ತೇಲಾಡಿದೆ
ನೀನಿಲ್ಲದೆ ಬಳಿಯಲಿ ದಿನವೆಲ್ಲವು ನೆನಪಲ್ಲೆ ನರಳಾಡಿದೆ
ನೀನಿದ್ದರೆ ಬಿಸಿಲದು ನೆರಳಾಗಿದೆ ಹುಲ್ಲೆಲ್ಲ ಹೂವಾಗಿದೆ
 
||ಊರು ಊರಿನಲು ನಿಂದೆ ಸುದ್ದಿ ಹರಡಿದೆ
ಅರೆರೆರೆ ಅಂತ ಸಾಹಸ ನಾನು ಏನು ಮಾಡಿದೆ
ಪ್ರೇಮಪತ್ರಿಕೆಗೆ ನೀನೆ ಭೇಟಿ ನೀಡಿದೆ
ಮಾತು ಮಾತಿನಲು ಏನೊ ಮೋಡಿ ಮಾಡಿದೆ
ಪ್ರೀತಿಯ ಸುದ್ದಿ ಆಗಲೆ ಬರೆದಾಯ್ತು
ಪ್ರೇಮವು ಎಂಥ ವೇಗಕ್ಕೆ ಪ್ರಿಂಟಾಯ್ತು
ನಿನಗಾಗಿ ಈ ಜೀವನ ಅನುರಾಗ ಭಾವ ಪಾವನ||
 
||ಊರು ಊರಿನಲು ನಿಂದೆ ಸುದ್ದಿ ಹರಡಿದೆ
ಅರೆರೆರೆ ಅಂತ ಸಾಹಸ ನಾನು ಏನು ಮಾಡಿದೆ
ಪ್ರೇಮಪತ್ರಿಕೆಗೆ ನೀನೆ ಭೇಟಿ ನೀಡಿದೆ
ಮಾತು ಮಾತಿನಲು ಏನೊ ಮೋಡಿ ಮಾಡಿದೆ||
 

Ooru Oorinalu Ninde song lyrics from Kannada Movie Lady Police starring Malashree, Harish, Rajanand, Lyrics penned by Shyamasundar Kulkarni Sung by S P Balasubrahmanyam, Sangeetha Katti, Music Composed by Rajesh Ramanath, film is Directed by B Naganna and film is released on 1995