ಮಧುರ ಹುಚ್ಚು ಮೊದಲೆ ಇತ್ತು
ಕಳ್ಳ ಮನದ ಮೂಲೆಯಲಿ
ಮೊದಲ ಹೆಜ್ಜೆ ಕೊನೆಗು ಇಟ್ಟೆ ನನ್ನ ದಾರಿಯಲಿ
ಎಷ್ಟೊಂದು ಕಾಡಿಸಿದೆ ಎಷ್ಟೆಲ್ಲ ಕಾಯಿಸಿದೆ
ಪಯಣ ಪ್ರೀತಿಗೆ ಎಳೆಯಿಲ್ಲ
ಇನ್ನು ತಾಳ್ಮೆ ನನಗಿಲ್ಲ
ಹೃದಯ ಇನ್ನು ಕೇಳಲ್ಲ
ಬಾ ಹೇಳುವೆ ಪಿಸುಮಾತನು ಬಿಸಿಯಾದ ಉಸಿರಲ್ಲಿ
ಮುಂಜಾನೆ ನಿದ್ದೆಯಲ್ಲಿ ಬಿದ್ದ ಕನಸ್ಸನ್ನು
ನೆನಪಿಸಿಕೊಳ್ಳೋದು ಹೇಗೆ ಎಂದು ಗೊತ್ತೇನು
ಸಂಜೇಲಿ ಸೇರಿ ನೋಡು ನನ್ನ ತೋಳನ್ನು
ನೆನಪಿಡುವ ಹಾಗೆ ಮುತ್ತೊಂದು ಕೊಟ್ಟೇನು
ವಿರಹಕ್ಕೆ ಒಳ್ಳೆ ಔಷಧಿಯನ್ನು ಹುಡುಕೋದೆ ನಿನ್ನ ಕೆಲಸವೇನು
ಇನ್ನೆಷ್ಟು ಸೋಲಿಸುವೆ ಸೋಲದ ಪ್ರೀತಿಗೆ ನೆಲೆಯಿಲ್ಲ
ಬೇರೆ ಏನು ಬೇಕಿಲ್ಲ ಈಗೀತರ ಆಗಲ್ಲ
ಬಾ ನೀಡುವೆ ಗುರುತೊಂದನ್ನು ತಿಳಿಕೆಂಪು ಕೆನ್ನೇಲಿ
ತಂಗಾಳಿ ಬಂದಾಗೆಲ್ಲ ತುಂಟ ಹಾಡನ್ನು
ಗುನುಗುತ ನನ್ನನ್ನೆ ನೋಡೋದು ತರವಲ್ಲ
ಶೃಂಗಾರ ಕಾವ್ಯದಲ್ಲಿ ಪೋಲಿ ಸಾಲನ್ನು ವಿವರಿಸಿ
ವಿವರಿಸಿ ಹೇಳೋದು ಅಷ್ಟೊಂದು ಸರಿಯಲ್ಲ
ಗೊತ್ತಿದ್ದು ತಪ್ಪು ಮಾಡೋದನ್ನು
ಅನುರಾಗ ಅನ್ನಬಹುದು ಏನೊ
ಇನ್ನೆಷ್ಟು ಸಾಯಿಸುವೆ ಸಾಯದೆ ಪ್ರೀತಿಯು ಉಳಿಯಲ್ಲ
ನಾನು ಏನು ಹೇಳಲ್ಲ ಮುಂದೆ ಏನು ನನದಲ್ಲ
ನಾ ನೀಡುವೆ ಜ್ವರವೊಂದನು ಕಿಡಿಗೇಡಿ ರೀತಿಯಲಿ
ಮಧುರ ಹುಚ್ಚು ಮೊದಲೆ ಇತ್ತು
ಕಳ್ಳ ಮನದ ಮೂಲೆಯಲಿ
ಮೊದಲ ಹೆಜ್ಜೆ ಕೊನೆಗು ಇಟ್ಟೆ ನನ್ನ ದಾರಿಯಲಿ
ಎಷ್ಟೊಂದು ಕಾಡಿಸಿದೆ ಎಷ್ಟೆಲ್ಲ ಕಾಯಿಸಿದೆ
ಪಯಣ ಪ್ರೀತಿಗೆ ಎಳೆಯಿಲ್ಲ
ಇನ್ನು ತಾಳ್ಮೆ ನನಗಿಲ್ಲ
ಹೃದಯ ಇನ್ನು ಕೇಳಲ್ಲ
ಬಾ ಹೇಳುವೆ ಪಿಸುಮಾತನು ಬಿಸಿಯಾದ ಉಸಿರಲ್ಲಿ
ಮುಂಜಾನೆ ನಿದ್ದೆಯಲ್ಲಿ ಬಿದ್ದ ಕನಸ್ಸನ್ನು
ನೆನಪಿಸಿಕೊಳ್ಳೋದು ಹೇಗೆ ಎಂದು ಗೊತ್ತೇನು
ಸಂಜೇಲಿ ಸೇರಿ ನೋಡು ನನ್ನ ತೋಳನ್ನು
ನೆನಪಿಡುವ ಹಾಗೆ ಮುತ್ತೊಂದು ಕೊಟ್ಟೇನು
ವಿರಹಕ್ಕೆ ಒಳ್ಳೆ ಔಷಧಿಯನ್ನು ಹುಡುಕೋದೆ ನಿನ್ನ ಕೆಲಸವೇನು
ಇನ್ನೆಷ್ಟು ಸೋಲಿಸುವೆ ಸೋಲದ ಪ್ರೀತಿಗೆ ನೆಲೆಯಿಲ್ಲ
ಬೇರೆ ಏನು ಬೇಕಿಲ್ಲ ಈಗೀತರ ಆಗಲ್ಲ
ಬಾ ನೀಡುವೆ ಗುರುತೊಂದನ್ನು ತಿಳಿಕೆಂಪು ಕೆನ್ನೇಲಿ
ತಂಗಾಳಿ ಬಂದಾಗೆಲ್ಲ ತುಂಟ ಹಾಡನ್ನು
ಗುನುಗುತ ನನ್ನನ್ನೆ ನೋಡೋದು ತರವಲ್ಲ
ಶೃಂಗಾರ ಕಾವ್ಯದಲ್ಲಿ ಪೋಲಿ ಸಾಲನ್ನು ವಿವರಿಸಿ
ವಿವರಿಸಿ ಹೇಳೋದು ಅಷ್ಟೊಂದು ಸರಿಯಲ್ಲ
ಗೊತ್ತಿದ್ದು ತಪ್ಪು ಮಾಡೋದನ್ನು
ಅನುರಾಗ ಅನ್ನಬಹುದು ಏನೊ
ಇನ್ನೆಷ್ಟು ಸಾಯಿಸುವೆ ಸಾಯದೆ ಪ್ರೀತಿಯು ಉಳಿಯಲ್ಲ
ನಾನು ಏನು ಹೇಳಲ್ಲ ಮುಂದೆ ಏನು ನನದಲ್ಲ
ನಾ ನೀಡುವೆ ಜ್ವರವೊಂದನು ಕಿಡಿಗೇಡಿ ರೀತಿಯಲಿ