ಸಮಯಗಳ ಸೀಮೆಯಲಿ ನಾವಿಕನು ಆದೆ ನಾನು
ನೆನಪುಗಳ ಬಾಗಿಲಿಗೆ ಬೀಗವನು ಹಾಕಲೇನು
ನಡೆಸಿದ ಕೈಬೆರಳು ನುಡಿಸಿದ ಕಾಲುಗಳು
ಉಳಿದಿರೊ ಗಾಯಗಳು ಸಹಚರ ಜೀವಗಳು
ಜೊತೆಯಲಿ ಬರುವೆವು ಕಾಣೆ
ಸಮಯವೆ ಸಮಯವೆ ಸಮಯವೆ
ಸಮಯವೆ ನೀ ಕಠಿಣವೆ
ಗಗನದ ಪಂಜರದಿ ಹಕ್ಕಿ ಸಿಲುಕಿದೆ
ಪರಿಧಿಯ ಒಳಗೆ ಸುತ್ತಿ ಗಿರಕಿ ಹೊಡೆದಿದೆ
ತಿಳಿಯದು ಎಲ್ಲೆಂದು ಆಗಮ್ಯ
ಕರೆದಿದೆ ಕೈಬೀಸುತ ಮುಂದೇನೊ ಶೂನ್ಯ
ಬರುತಿದೆ ಬೆಂಕಿ ಬೆನ್ನೇರಿ ಬಿಡುಗಡೆ ಬೇಡೊ ಸಂಚಾರಿ
ತಂಪಿದೆಯೆ ನಾ ನಡೆವ ದಾರಿ
ಸಮಯವೆ ಸಮಯವೆ ಸಮಯವೆ
ಸಮಯವೆ ನೀ ಕಠಿಣವೆ
ಎದೆಯಲಿ ಅಲೆಗಳಿಗ ಖಾಲಿಯಾಗಿದೆ
ನೆನಪಿನ ಸದ್ದಡಗಿ ಶಾಂತವಾಗಿದೆ
ಪ್ರತಿದಿನ ದೀಪಾವಳಿ ಬಂದಹಾಗೆ
ಬೆರಗಲಿ ಕಣ್ತೆರೆದು ನಿಂತೆ ನಾ ಹೀಗೆ
ಜೀವನ ಎಷ್ಟು ಚೆಂದನೊ ನೆನಪಿಗೂ ಒಂದು ಅಂದನೊ
ನನಗೀಗ ಹೊಸಬ ನಾನು
ಸಮಯವೆ ಸಮಯವೆ ಸಮಯವೆ
ಸಮಯವೆ ನೀ ಕಠಿಣವೆ
ಸಮಯಗಳ ಸೀಮೆಯಲಿ ನಾವಿಕನು ಆದೆ ನಾನು
ನೆನಪುಗಳ ಬಾಗಿಲಿಗೆ ಬೀಗವನು ಹಾಕಲೇನು
ನಡೆಸಿದ ಕೈಬೆರಳು ನುಡಿಸಿದ ಕಾಲುಗಳು
ಉಳಿದಿರೊ ಗಾಯಗಳು ಸಹಚರ ಜೀವಗಳು
ಜೊತೆಯಲಿ ಬರುವೆವು ಕಾಣೆ
ಸಮಯವೆ ಸಮಯವೆ ಸಮಯವೆ
ಸಮಯವೆ ನೀ ಕಠಿಣವೆ
ಗಗನದ ಪಂಜರದಿ ಹಕ್ಕಿ ಸಿಲುಕಿದೆ
ಪರಿಧಿಯ ಒಳಗೆ ಸುತ್ತಿ ಗಿರಕಿ ಹೊಡೆದಿದೆ
ತಿಳಿಯದು ಎಲ್ಲೆಂದು ಆಗಮ್ಯ
ಕರೆದಿದೆ ಕೈಬೀಸುತ ಮುಂದೇನೊ ಶೂನ್ಯ
ಬರುತಿದೆ ಬೆಂಕಿ ಬೆನ್ನೇರಿ ಬಿಡುಗಡೆ ಬೇಡೊ ಸಂಚಾರಿ
ತಂಪಿದೆಯೆ ನಾ ನಡೆವ ದಾರಿ
ಸಮಯವೆ ಸಮಯವೆ ಸಮಯವೆ
ಸಮಯವೆ ನೀ ಕಠಿಣವೆ
ಎದೆಯಲಿ ಅಲೆಗಳಿಗ ಖಾಲಿಯಾಗಿದೆ
ನೆನಪಿನ ಸದ್ದಡಗಿ ಶಾಂತವಾಗಿದೆ
ಪ್ರತಿದಿನ ದೀಪಾವಳಿ ಬಂದಹಾಗೆ
ಬೆರಗಲಿ ಕಣ್ತೆರೆದು ನಿಂತೆ ನಾ ಹೀಗೆ
ಜೀವನ ಎಷ್ಟು ಚೆಂದನೊ ನೆನಪಿಗೂ ಒಂದು ಅಂದನೊ
ನನಗೀಗ ಹೊಸಬ ನಾನು
ಸಮಯವೆ ಸಮಯವೆ ಸಮಯವೆ
ಸಮಯವೆ ನೀ ಕಠಿಣವೆ