(ಕೋಗಿಲೆಯೆ ಕೋಗಿಲೆಯೆ ಮುಂದಿನ ಮಾಸಕ್ಕೆ ನೀ ಹಾಡು
ಮಾಮರವೇ ಮಾಮರವೇ ಬಯಕೆಯ ಬಾಯಿಗೆ ಫಲ ನೀಡು
ಗಿಳಿಯೇ ಗಿಳಿಯೇ ಶುಭಶಕುನ ನೀ ನುಡಿಯೇ)
ತುಂಬು ಕೈಬಳೆ ನಿನಗೆ ಚೆಲುವೆ
ತುಂಬು ಹರಕೆ ನಿನಗೆ ಒಲವೆ
ನೀನೆ ನನ್ನ ಜೀವ ನಿನ್ನಲ್ಲೊಂದು ಜೀವ
ನಿತ್ಯ ಬೇಡುವೆ ಕಾಯಲು ದೇವರ
ತುಂಬು ಕೈಬಳೆ ನಿನಗೆ ಚೆಲುವೆ
ತುಂಬು ಹರಕೆ ನಿನಗೆ ಒಲವೆ
ಅಂದದ ಕೆನ್ನೆಗೆ ಗಂಧದ ಲೇಪನ
ಅರಿಶಿನ ಕುಂಕುಮ ಶೋಭಿತೆಗೆ
ನಾಗರವೇಣಿಗೆ ಮಲ್ಲಿಗೆ ಸಂಪಿಗೆ
ಝರಿ ಝರಿ ಸೀರೆಯ ಶ್ರೀಮತಿಗೆ
ಈ ಮನೆ ಬೆಳಕೆಂದು ಆರತಿ ನಿನಗೀಗ
ಲಾಲಿಯ ನುಡಿಸೆಂದು ಬೇಡುವೆ ನಿನಗೀಗ
ನೀನೆ ನನ್ನ ಜೀವ ನಿನ್ನಲೊಂದು ಜೀವ
ನಿತ್ಯ ಬೇಡುವೆ ಕಾಯಲು ದೇವರ
||ತುಂಬು ಕೈಬಳೆ ನಿನಗೆ ಚೆಲುವೆ
ತುಂಬು ಹರಕೆ ನಿನಗೆ ಒಲವೆ||
(ನಾರಿಮಣಿ ತುಂಬುದರದ ಮೇಲೆ ಹೊಂಗೆಯ ನೆರಳಿರಲಿ
ನಗುತ ಹೆರುತ ದೂರಾಗಲಿ ವ್ಯಾಕುಲವು
ಬಾ ಬಾ ಬಳಿ ಮನೆಸೂರಿನ ಮೇಲೆ ಗೌರಿಯ ವರವಿರಲಿ
ಗಂಡೊ ಹೆಣ್ಣೊ ಮನೆಯಾಗಲಿ ಗೋಕುಲವು)
ತುಂಬಿದ ಕಲಶವೆ ಸಿಂಧುರ ತಿಲಕವೆ
ನಗುವಿನ ತೋರಣ ಈ ಮನೆಗೆ
ಜನುಮದ ಜೋಡಿಯೆ ಜೊತೆಯಲಿ ನಡೆಯುವೆ
ಬದುಕಿನ ದಾರಿಯೆ ನೀ ನನಗೆ
ಕೂಸಿಗೆ ತಾಯಂತ ತಾಯಿಗೆ ಸೀಮಂತ
ತಂದೆಯು ನಾನಂತ ಆದೆನು ಶ್ರೀಮಂತ
ನೀನೆ ನನ್ನ ಜೀವ ನಿನ್ನಲ್ಲೊಂದು ಜೀವ
ನಿತ್ಯ ಬೇಡುವೆ ಕಾಯಲು ದೇವರ
||ತುಂಬು ಕೈಬಳೆ ನಿನಗೆ ಚೆಲುವೆ
ತುಂಬು ಹರಕೆ ನಿನಗೆ ಒಲವೆ||
(ಕೋಗಿಲೆಯೆ ಕೋಗಿಲೆಯೆ ಮುಂದಿನ ಮಾಸಕ್ಕೆ ನೀ ಹಾಡು
ಮಾಮರವೇ ಮಾಮರವೇ ಬಯಕೆಯ ಬಾಯಿಗೆ ಫಲ ನೀಡು
ಗಿಳಿಯೇ ಗಿಳಿಯೇ ಶುಭಶಕುನ ನೀ ನುಡಿಯೇ)
(ಕೋಗಿಲೆಯೆ ಕೋಗಿಲೆಯೆ ಮುಂದಿನ ಮಾಸಕ್ಕೆ ನೀ ಹಾಡು
ಮಾಮರವೇ ಮಾಮರವೇ ಬಯಕೆಯ ಬಾಯಿಗೆ ಫಲ ನೀಡು
ಗಿಳಿಯೇ ಗಿಳಿಯೇ ಶುಭಶಕುನ ನೀ ನುಡಿಯೇ)
ತುಂಬು ಕೈಬಳೆ ನಿನಗೆ ಚೆಲುವೆ
ತುಂಬು ಹರಕೆ ನಿನಗೆ ಒಲವೆ
ನೀನೆ ನನ್ನ ಜೀವ ನಿನ್ನಲ್ಲೊಂದು ಜೀವ
ನಿತ್ಯ ಬೇಡುವೆ ಕಾಯಲು ದೇವರ
ತುಂಬು ಕೈಬಳೆ ನಿನಗೆ ಚೆಲುವೆ
ತುಂಬು ಹರಕೆ ನಿನಗೆ ಒಲವೆ
ಅಂದದ ಕೆನ್ನೆಗೆ ಗಂಧದ ಲೇಪನ
ಅರಿಶಿನ ಕುಂಕುಮ ಶೋಭಿತೆಗೆ
ನಾಗರವೇಣಿಗೆ ಮಲ್ಲಿಗೆ ಸಂಪಿಗೆ
ಝರಿ ಝರಿ ಸೀರೆಯ ಶ್ರೀಮತಿಗೆ
ಈ ಮನೆ ಬೆಳಕೆಂದು ಆರತಿ ನಿನಗೀಗ
ಲಾಲಿಯ ನುಡಿಸೆಂದು ಬೇಡುವೆ ನಿನಗೀಗ
ನೀನೆ ನನ್ನ ಜೀವ ನಿನ್ನಲೊಂದು ಜೀವ
ನಿತ್ಯ ಬೇಡುವೆ ಕಾಯಲು ದೇವರ
||ತುಂಬು ಕೈಬಳೆ ನಿನಗೆ ಚೆಲುವೆ
ತುಂಬು ಹರಕೆ ನಿನಗೆ ಒಲವೆ||
(ನಾರಿಮಣಿ ತುಂಬುದರದ ಮೇಲೆ ಹೊಂಗೆಯ ನೆರಳಿರಲಿ
ನಗುತ ಹೆರುತ ದೂರಾಗಲಿ ವ್ಯಾಕುಲವು
ಬಾ ಬಾ ಬಳಿ ಮನೆಸೂರಿನ ಮೇಲೆ ಗೌರಿಯ ವರವಿರಲಿ
ಗಂಡೊ ಹೆಣ್ಣೊ ಮನೆಯಾಗಲಿ ಗೋಕುಲವು)
ತುಂಬಿದ ಕಲಶವೆ ಸಿಂಧುರ ತಿಲಕವೆ
ನಗುವಿನ ತೋರಣ ಈ ಮನೆಗೆ
ಜನುಮದ ಜೋಡಿಯೆ ಜೊತೆಯಲಿ ನಡೆಯುವೆ
ಬದುಕಿನ ದಾರಿಯೆ ನೀ ನನಗೆ
ಕೂಸಿಗೆ ತಾಯಂತ ತಾಯಿಗೆ ಸೀಮಂತ
ತಂದೆಯು ನಾನಂತ ಆದೆನು ಶ್ರೀಮಂತ
ನೀನೆ ನನ್ನ ಜೀವ ನಿನ್ನಲ್ಲೊಂದು ಜೀವ
ನಿತ್ಯ ಬೇಡುವೆ ಕಾಯಲು ದೇವರ
||ತುಂಬು ಕೈಬಳೆ ನಿನಗೆ ಚೆಲುವೆ
ತುಂಬು ಹರಕೆ ನಿನಗೆ ಒಲವೆ||
(ಕೋಗಿಲೆಯೆ ಕೋಗಿಲೆಯೆ ಮುಂದಿನ ಮಾಸಕ್ಕೆ ನೀ ಹಾಡು
ಮಾಮರವೇ ಮಾಮರವೇ ಬಯಕೆಯ ಬಾಯಿಗೆ ಫಲ ನೀಡು
ಗಿಳಿಯೇ ಗಿಳಿಯೇ ಶುಭಶಕುನ ನೀ ನುಡಿಯೇ)