-
ಆಸೆ ಹಕ್ಕಿ ಕರೆನೀಡಿದೆ ಕಾವೇರಿ ಕುಣಿದಾಡಿದೆ
ನಗುತ್ತಾವೆ ಹೂಬಳ್ಳಿ ಚೆಲುವ ನೀ ಜೊತೆ ಬಾರೊ
ಒಳ್ಳೆ ಕಿವಿಮಾತು ನಿನಗೇಳುವೆ ನನ್ನ ರಾಜ ನೀ ನಲಿದಾಡುವೆ
ನನ್ನ ಎದೆಮಟ್ಟ ನೀ ನಿಲ್ಲುವೆ
ಏನೆ ಮಳ್ಳಿ ಬಾರೆ ಇಲ್ಲಿ ಏನೆ ಕಳ್ಳಿ ಹೇಳೆ ಇಲ್ಲಿ
ನಗಸಾರ ಒಲ್ಲೆ ನಾನು ಚೆಲುವೆ ನೀ ಜೊತೆ ಬಾರೆ
ನನ್ನ ಎದೆತುಂಬಿ ಮಾತಾಡೆ ನನ್ನಾಸೆಯ ನಿನಗೇಳುವೆ
ಚಿನ್ನ ಬಳಿ ಬಾರೆ ಸವಿಹೀರುವೆ
ಕನಸ್ಸಲ್ಲಿ ಬಂದೆ ಎದುರಲ್ಲಿ ನಿಂದೆ ಬಿಗಿದಪ್ಪಿ ನೀ ಹಿಡಿದೆ
ಬಂದರ ನೇರಿ ಮೆರವಣಿಗೆ ಬಂದೆ ಮೈ ಉಬ್ಬಿ ನಾನೋಡಿದೆ
ಬಾರೆ ಬರುವೆನೆದುರಲ್ಲೆ ನಿಲ್ಲು ನೀ
ತೋರೆ ನಗುವ ನಗುಮೊಗ ತೋರು ನೀ
ಯಾವ ಮೋಡಿ ಮಾಡಿಬಂದೆ ನನ್ನ ಸೇರಲು
ನಿನ್ನ ಮೋಹಜಾಲದಲ್ಲಿ ನನ್ನ ಸೆಳೆಯಲು
ಮೋಡಿಯಾಕೆ ಕಳ್ಳಿ ನಾನು ಕದಿಯಲು
ನಾನೆ ಬಂದೆ ನೀನೆ ನಾನು ಎಂದು ಹೇಳಲು
||ಏನೆ ಮಳ್ಳಿ ಬಾರೆ ಇಲ್ಲಿ ಏನೆ ಕಳ್ಳಿ ಹೇಳೆ ಇಲ್ಲಿ
ನಗಸಾರ ಒಲ್ಲೆ ನಾನು ಚೆಲುವೆ ನೀ ಜೊತೆ ಬಾರೆ
ಒಳ್ಳೆ ಕಿವಿಮಾತು ನಿನಗೇಳುವೆ ನನ್ನ ರಾಜ ನೀ ನಲಿದಾಡುವೆ
ನನ್ನ ಎದೆಮಟ್ಟ ನೀ ನಿಲ್ಲುವೆ||
ಪ್ರೀತಿಯ ಕೊಟ್ಟೆ ಮನಸ್ಸನ್ನು ಇಟ್ಟೆ ಚೆಂದದ ಭಾಷೆ ಕೊಟ್ಟೆ
ಹತ್ತಿರ ಬಂದೆ ಮುತ್ತನು ತಂದೆ ನನ್ ಜೀವ ನೀನಾದೆ
ಬಾರಾ ಕುಣಿದು ಕುಣಿಸುತ ನಿಲ್ಲು ನೀ
ತೋರ ಬೆಡಗು ಬೆಡಗನು ತೋರು ನೀ
ಯಾವ ಸುವ್ವಿ ಹಾಡಲಿರುವೆ ನನ್ನ ಸೇರಲು
ಚಿನ್ನ ರನ್ನ ಮಾತನಾಡಿ ನನ್ನ ತೂಡಲು
ರಾಗಬೇಕೆ ನೀರೆ ಬಾರೆ ಮಾತಕೇಳುವೆ
ಕಳ್ಳಿ ಬಾರೆ ಮಳ್ಳಿ ಬಾರೆ ಗುಟ್ಟ ಹೇಳುವೆ
||ಆಸೆ ಹಕ್ಕಿ ಕರೆನೀಡಿದೆ ಕಾವೇರಿ ಕುಣಿದಾಡಿದೆ
ನಗುತ್ತಾವೆ ಹೂಬಳ್ಳಿ ಚೆಲುವ ನೀ ಜೊತೆ ಬಾರೊ
ನನ್ನ ಎದೆತುಂಬಿ ಮಾತಾಡೆ ನನ್ನಾಸೆಯ ನಿನಗೇಳುವೆ
ಚಿನ್ನ ಬಳಿ ಬಾರೆ ಸವಿಹೀರುವೆ||
Aase Hakki Kare Needide song lyrics from Kannada Movie Huliya starring Devaraj, Archana, Avinash, Lyrics penned bySung by S P Balasubrahmanyam, S Janaki, Music Composed by Sadhu Kokila, film is Directed by K V Raju and film is released on 1996