Kusumada Baana Lyrics

in Gun

Video:

LYRIC

ಕುಸುಮದ ಬಾಣ ಕನಸ್ಸಿನ ಹಾಗೆ ಹೃದಯಕೆ ನಾಟಿದೆ
ಬರೆಯದೆ ಹೋದ ಕವನವು ನನ್ನ ಕೊರಳನು ದಾಟಿದೆ
ಅರೆ ಕರಗಿದೆ ಜೀವ ಅರೆಯದ ಹಾಗೆ ಅರಿಯುತ ನಿನ್ನನು
ಮೈಮರೆಯದೆ ನಾನು ಇರುವುದು ಹೇಗೆ ಕರೆದರೆ ನನ್ನನು
ಹೇಗಿರಲಿ ಹೇಗಿರಲಿ ಪ್ರೀತಿಸದೆ ನಿನ್ನನು….
 
||ಕುಸುಮದ ಬಾಣ ಕನಸ್ಸಿನ ಹಾಗೆ ಹೃದಯಕೆ ನಾಟಿದೆ
ಬರೆಯದೆ ಹೋದ ಕವನವು ನನ್ನ ಕೊರಳನು ದಾಟಿದೆ
ಅರೆ ಕರಗಿದೆ ಜೀವ ಅರೆಯದ ಹಾಗೆ ಅರಿಯುತ ನಿನ್ನನು
ಮೈಮರೆಯದೆ ನಾನು ಇರುವುದು ಹೇಗೆ ಕರೆದರೆ ನನ್ನನು
ಹೇಗಿರಲಿ ಹೇಗಿರಲಿ ಪ್ರೀತಿಸದೆ ನಿನ್ನನು….||
 
ನವಿರಾದ ನೀಲಿ ನಕ್ಷೆ ಕಂಡೆ ಕಣ್ಣಿನಲಿ
ಕೊಡು ನೀ ಪ್ರೇಮಶಿಕ್ಷೆ ನಿಂದೆ ರೀತಿಯಲಿ
ಮನದ ಎದುರು ಬರಿ ನೀನೆ ಇರಲು
ಹೃದಯ ಬಿರಿವ ಬಿರುಗಾಳಿ ಬರಲು
ಹೇಗಿರಲಿ ಹೇಗಿರಲಿ ನೋಡದೆಯೆ ನಿನ್ನನು….
 
ಬರೆದಿಲ್ಲ ಸೀಮೆ ರೇಖೆ ಆಶಾಲೋಕದಲಿ
ನಮಗಾಗಿ ಕಾಯಬೇಕೆ ಚಂದ್ರ ಬೀದಿಯಲಿ
ಉಸಿರ ಬಿಸಿಯ ನಿನಗಾಗಿ ಇರಿಸಿ
ಸತತ ಸನಿಹ ಸಹವಾಸ ಬಯಸಿ
ಹೇಗಿರಲಿ ಹೇಗಿರಲಿ ಕೂಗದೆಯೆ ನಿನ್ನನು….
 
||ಕುಸುಮದ ಬಾಣ ಕನಸ್ಸಿನ ಹಾಗೆ ಹೃದಯಕೆ ನಾಟಿದೆ
ಬರೆಯದೆ ಹೋದ ಕವನವು ನನ್ನ ಕೊರಳನು ದಾಟಿದೆ
ಅರೆ ಕರಗಿದೆ ಜೀವ ಅರೆಯದ ಹಾಗೆ ಅರಿಯುತ ನಿನ್ನನು
ಮೈಮರೆಯದೆ ನಾನು ಇರುವುದು ಹೇಗೆ ಕರೆದರೆ ನನ್ನನು
ಹೇಗಿರಲಿ ಹೇಗಿರಲಿ ಪ್ರೀತಿಸದೆ ನಿನ್ನನು….||

Kusumada Baana song lyrics from Kannada Movie Gun starring Harish Raj, Mallika Kapoor, Nikitha, Lyrics penned by Jayanth Kaikini Sung by Rajesh Krishnan, Music Composed by Ronnie Raphael, film is Directed by Harish Raj and film is released on 2011