Moda Modalu Nanna Edeya Olage Lyrics

in Gowri Puthra

LYRIC

ಮೊದಮೊದಲು ನನ್ನ ಎದೆಯ ಒಳಗೆ
ನದಿಯೊಂದು ಓಡಿದಂತೆ
ನಾನೆಂದೊ ಮರೆತುಹೋದ ಹಾಡು
ನೀ ಬಂದು ಹಾಡಿದಂತೆ
ಮತ್ತೆ ನಿನ್ನ ಕಂಡಾಗ ನನಗೆ ಏನೊ ಅಚ್ಚರಿ ಹಾ
ನನ್ನ ಮನವ ಸವರುತಿದೆ ನಿನ್ನ ಪ್ರೇಮದ ನವಿಲುಗರಿ
 
||ಮೊದಮೊದಲು ನನ್ನ ಎದೆಯ ಒಳಗೆ
ನದಿಯೊಂದು ಓಡಿದಂತೆ
ನಾನೆಂದೊ ಮರೆತುಹೋದ ಹಾಡು
ನೀ ಬಂದು ಹಾಡಿದಂತೆ||
 
ಸಾಗರದ ಸಂತೆಯಲಿ ರಾಶಿ ರಾಶಿ ಮುತ್ತುಗಳು
ನಿನ್ನ ಗುಣ ಬಣ್ಣಿಸಲು ಸಾಲು ನಿಂತು ಕಾಯುತಿವೆ
ಆಗಸದ ಊರಿನಲಿ ಕೋಟಿ ಕೋಟಿ ತಾರೆಗಳು
ನಿನ್ನ ಕಣ್ಣ ಸನ್ನೆಯ ಸಾಲವಾಗಿ ಪಡೆಯುತಿವೆ
ಕೋಟಿ ಜನ್ಮದ ಪುಣ್ಯ ಮಾಡಿರುವೆ ಹೆಣ್ಣಿಗೆ ಭಾಗ್ಯ
ನಿನ್ನಂಥ ಗುಣವಂತ ಸಿಗುತಾನೆ ಓ ಸರದಾರ
ಅಂಥ ಪುಣ್ಯವ ಪಟ್ಟ ಹೆಣ್ಣಾಗಿ ನಾ ಬರಲೆ ನಿನ್ನ ವಧುವಾಗಿ
 
||ಮೊದಮೊದಲು ನನ್ನ ಎದೆಯ ಒಳಗೆ
ನದಿಯೊಂದು ಓಡಿದಂತೆ
ನಾನೆಂದೊ ಮರೆತುಹೋದ ಹಾಡು
ನೀ ಬಂದು ಹಾಡಿದಂತೆ||
 
ಹೂ ಬನದ ಚಿಟ್ಟೆಗಳ ಕಿವಿಯ ಓಲೆ ನಿನ್ನ ನಗು
ಹುಣ್ಣಿಮೆಯ ಚಂದ್ರನಿಗೆ ನೀನೆ ತಾನೆ ಸ್ವಂತ ಮಗು
ಸೋಲುತಲಿ ಸೋಲಿಸುವ ನಿನ್ನ ಮೌನ ಬಲು ಚೆಂದ
ಮುಟ್ಟದೆಯೆ ಗಿಲ್ಲುವೆ ನೀ ಅವಳಿ ಜವಳಿ ಕಣ್ಣಿಂದ
ನೀನು ಇರದ ನಾನು ಆ ನೀರೆ ಇರದ ಮೀನು
ಬದುಕೆ ಉಳಿಯನು ನಾನು ಕೈ ಜಾರಿ ಹೋದರೆ ನೀನು
ಒಂದೇ ಒಂದು ಕ್ಷಣಕೂಡ ನಿನ್ನ ಬಿಟ್ಟಿರಲಾರೆ ನಾನು
 
||ಮೊದಮೊದಲು ನನ್ನ ಎದೆಯ ಒಳಗೆ
ನದಿಯೊಂದು ಓಡಿದಂತೆ
ನಾನೆಂದೊ ಮರೆತುಹೋದ ಹಾಡು
ನೀ ಬಂದು ಹಾಡಿದಂತೆ
ಮತ್ತೆ ನಿನ್ನ ಕಂಡಾಗ ನನಗೆ ಏನೊ ಅಚ್ಚರಿ ಹಾ
ನನ್ನ ಮನವ ಸವರುತಿದೆ ನಿನ್ನ ಪ್ರೇಮದ ನವಿಲುಗರಿ||
 

Moda Modalu Nanna Edeya Olage song lyrics from Kannada Movie Gowri Puthra starring Akshay, Nagashekar, Rakesh Sharma, Lyrics penned by Manjunath Rao Sung by Meghana Kulkarni, Music Composed by Milind Dharmasena, film is Directed by Manjunath M Maskal Matti and film is released on 2012