Ollethanavanu Lyrics

in Gaali

Video:

LYRIC

ಒಳ್ಳೆತನವನು ಮೆರೆಸೊ ಮನಗಳು
ತನ್ನತನವನು ಬೆಸೆಯೊ ಕೈಗಳು
ಮನಸ್ಸು ಬಿಳಿಯ ಹಾಳೆ ಕನಸ್ಸ ಬರೆಯೊ ವೇಳೆ
ನಿಮ್ಮ ಕಂಗಳ ಬೆಳದಿಂಗಳ ಬಯಲಲ್ಲಿ ಕಾಣಿರಿ ಹೂಗಳ
ನಿಮ್ಮ ಕಂಗಳ ಬೆಳದಿಂಗಳ ಬಯಲಲ್ಲಿ ಕಾಣಿರಿ ಹೂಗಳ
ಒಳ್ಳೆತನವನು ಮೆರೆಸೊ ಮನಗಳು
ತನ್ನತನವನು ಬೆಸೆಯೊ ಕೈಗಳು
 
ಏಳು ಬಣ್ಣ ನೋಡಲು ಕಾಯಬೇಕಿದಿಲ್ಲಿಗೆ
ಒಮ್ಮೆ ಇವರ ಕಂಗಳ ಬಂದು ನೋಡಿ ಇಲ್ಲಿಗೆ
ಕೊಡುತ್ತಿರುವರು ಬಾಡಿಗೆ ಒಂದು ಒಳ್ಳೆ ಕನಸ್ಸಿಗೆ
ಸಾಧನೆಯ ಭಿಕ್ಷೆಗೆ ಇವರು ಹಿಡಿದಿರುವರು ಜೋಳಿಗೆ
ಈ ಸ್ನೇಹಕೆ ಒಂದು ಕೋರಿಕೆ ಉಳಿಯಲಿ ಎಲ್ಲ ಕಾಲಕೆ
ಈ ಸ್ನೇಹಕೆ ಒಂದು ಕೋರಿಕೆ ಉಳಿಯಲಿ ಎಲ್ಲ ಕಾಲಕೆ
 
||ಒಳ್ಳೆತನವನು ಮೆರೆಸೊ ಮನಗಳು
ತನ್ನತನವನು ಬೆಸೆಯೊ ಕೈಗಳು||
 
ಪುಣ್ಯಕ್ಷೇತ್ರ ನೋಡಲು ಹೋಗಬೇಕೆ ಎಲ್ಲಿಗೆ
ಒಮ್ಮೆ ಇವರ ಮನಗಳು ಬಂದು ನೋಡಿ ಇಲ್ಲಿಗೆ
ಬಡತನದ ಸಾರಿಗೆ ನೆನಪೆ ಇಲ್ಲ ಇವರಿಗೆ
ಇವರೆ ಎಲ್ಲ ಇವರಿಗೆ ಉಳಿದ ಪೂರ ಬದುಕಿಗೆ
ಈ ಬಂಧಕೆ ಒಂದು ಹೋಲಿಕೆ ಉಳಿಯಲಿ ಎಲ್ಲ ಕಾಲಕೆ
ಈ ಬಂಧಕೆ ಒಂದು ಹೋಲಿಕೆ ಉಳಿಯಲಿ ಎಲ್ಲ ಕಾಲಕೆ
 
||ಒಳ್ಳೆತನವನು ಮೆರೆಸೊ ಮನಗಳು
ತನ್ನತನವನು ಬೆಸೆಯೊ ಕೈಗಳು
ಮನಸ್ಸು ಬಿಳಿಯ ಹಾಳೆ ಕನಸ್ಸ ಬರೆಯೊ ವೇಳೆ
ನಿಮ್ಮ ಕಂಗಳ ಬೆಳದಿಂಗಳ ಬಯಲಲ್ಲಿ ಕಾಣಿರಿ ಹೂಗಳ
ನಿಮ್ಮ ಕಂಗಳ ಬೆಳದಿಂಗಳ ಬಯಲಲ್ಲಿ ಕಾಣಿರಿ ಹೂಗಳ||
 
||ಒಳ್ಳೆತನವನು ಮೆರೆಸೊ ಮನಗಳು
ತನ್ನತನವನು ಬೆಸೆಯೊ ಕೈಗಳು||

Ollethanavanu song lyrics from Kannada Movie Gaali starring Jeevan, Roopa Nataraj, Sunil, Lyrics penned by Lucky Sung by Inchara Nagesh, Music Composed by Daniel, film is Directed by Lucky and film is released on 2013