Kagadada Oorinalli Lyrics

in Gaali

Video:

LYRIC

ಕಾಗದದ ಊರಿನಲ್ಲಿ ಪೆನ್ನಿಗೆಲ್ಲಿದೆ ಬರ
ಮಸಿ ಕುಡಿಕೆ ಹಿಡಿದು ಬಾ ಪ್ರೇಮಬರಹ ಗೀಚಲು
ಒಲುಮೆ ಕೀಬೋರ್ಡಿನಲ್ಲಿ ಅಕ್ಷರಕ್ಕೆಲ್ಲಿದೆ ಬರ
ಕೈಯಯ ಬೆರಳು ಬಾಗಿದ ಪ್ರೀತಿ ಪದವ ಒತ್ತಲು
ಕವಿಗಳಲ್ಲ ನಾವುಗಳು ಮನಸ್ಸಿನದೆ ಸಾಲುಗಳು
ಮುಟ್ಟೆ ಇಲ್ಲ ನಾವುಗಳು ಹಂಸಲೇಖರ ಪಾದಗಳು
 
||ಕಾಗದದ ಊರಿನಲ್ಲಿ ಪೆನ್ನಿಗೆಲ್ಲಿದೆ ಬರ
ಮಸಿ ಕುಡಿಕೆ ಹಿಡಿದು ಬಾ ಪ್ರೇಮಬರಹ ಗೀಚಲು||
 
ಓ ಮಳೆಗಾಲದ ರಸ್ತೆ ಮೇಲಿನ
ಕೆಸರಾಗಿ ನಿನ್ನ ಕಾಲು ತಾಗೊ ಆಸೆ
ಹಳೇ ಕಾರಿನ ಸೈಲೆನ್ಸರಿನ
ಮಸಿಯಾಗಿ ನಿನ್ನ ಹಣೆ ಸೇರೊ ಆಸೆ
ನಸುವು ಹುಟ್ಟಲಿ ಓಓಓ ನಿನ್ನ ಇಷ್ಟದ
ನಿದಿರೆಯಾಗಿ ಸುಖ ಕೊಡುವ ಆಸೆ
ನಸುವು ಹುಟ್ಟಲಿ ಓಓಓ ನಿನ್ನ ಇಷ್ಟದ
ನಿದಿರೆಯಾಗಿ ಸುಖ ಕೊಡುವ ಆಸೆ
ಕಪ್ಪು ಹಲಗೆ ನೀನು ಬಿಳಿ ಬಳಪ ನಾನು
ಕಾದ ಭೂಮಿ ನೀನು ಮಳೆಹನಿ ನಾನು
ಇಂಕಿಲ್ಲದ ಪೆನ್ನುಗಳು ಖಾಲಿಯಾದ ಲೆಡ್ಡುಗಳು
ತಲೆಕೆಟ್ಟ ಆ ದಿನಗಳು ತಮಟೆ ಹೊಡೆವ ಈ ಕೈಗಳು
 
ಓ ಸೆಲ್‌ ಫೋನಿನ ಟಚ್‌ ಸ್ಕ್ರೀನಿನ
ವಾಲ್‌ ಪೇಪರಾಗಿ ನಿನ್ನ ಸೆಳೆಯೊ ಆಸೆ
ಹಳೆ ಕಾಲದ ಓಓಓ ಹೆವಿ ಗಾತ್ರದ
ರೇಡಿಯೊ ಆಗಿ ಕಿವಿಯ ಮುಟ್ಟೊ ಆಸೆ
ಗ್ಯಾರಂಟಿಯ ಓಓಓ ಗೋರಂಟಿಯಾಗಿ
ನಿನ್ನ ಕೈಯ್ಯ ತುಂಬ ಹರಡೊ ಆಸೆ
ಗ್ಯಾರಂಟಿಯ ಓಓಓ ಗೋರಂಟಿಯಾಗಿ
ನಿನ್ನ ಕೈಯ್ಯ ತುಂಬ ಹರಡೊ ಆಸೆ
ಕಲರ್‌ ಕೊಡೆಯು ನೀನು ಅದರ ಹಿಡಿಯು ನಾನು
ಹೊಳೆವ ಬಲ್ಬು ನೀನು ಅದರ ಸ್ವಿಚ್ಚು ನಾನು
ಬರಿದಾಗಿದೆ ಪದಗಳು ಬೋಳಾದ ತಲೆಗಳು
ಬದಲಾದ ಈ ಜನಗಳು ಫ್ಲಾಪಾದ ಒಳ್ಳೆ ಹಾಡುಗಳು

Kagadada Oorinalli song lyrics from Kannada Movie Gaali starring Jeevan, Roopa Nataraj, Sunil, Lyrics penned by Lucky Sung by Sparsh, Music Composed by Daniel, film is Directed by Lucky and film is released on 2013