Neela Megha Shyama Lyrics

ನೀಲ ಮೇಘ ಶ್ಯಾಮ Lyrics

in Eradu Rekhegalu

in ಎರಡು ರೇಖೆಗಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನವರಾತ್ರಿ ಸಂಜೆಯಲಿ ನನ್ನದೆಯ ಹಾಡಿನಲಿ
ಪ್ರಶ್ನೆಯೊಂದು ಮೂಡಿಹುದು ನೋಡಮ್ಮಾ
ನವರಾತ್ರಿ ಸಂಜೆಯಲಿ ನಾ ನುಡಿವ ಮಾತಿನಲಿ
ಉತ್ತರವು ಅಡಗಿರುವುದು ಕೇಳಮ್ಮಾ..

ನೀಲ ಮೇಘ ಶ್ಯಾಮ ನಿತ್ಯಾನಂದಧಾಮ
ನೀಲ ಮೇಘ ಶ್ಯಾಮ ನಿತ್ಯಾನಂದಧಾಮ
ರುಕ್ಮಿಣಿಗಾಗೇ ರುಕ್ಮಿಣಿಗಾಗೇ
ಅವನ ಮಧುರ ಮುರುಳಿಯು
ಮಿಡಿವ ಸವಿಯ ರವಳಿಯು
ಸತಿಗಾಗೇ ಏ ಕುಲಸತಿಗಾಗೆ

ನೀಲ ಮೇಘ ಶ್ಯಾಮ ನಿತ್ಯಾನಂದಧಾಮ
ನೀಲ ಮೇಘ ಶ್ಯಾಮ ನಿತ್ಯಾನಂದಧಾಮ
ಇಬ್ಬರಿಗಾಗೇ ಎಂದು ಇಬ್ಬರಿಗಾಗೇ
ಸೊಬಗಿ ಸತ್ಯಭಾಮೆ ರುಕ್ಮಿಣಿಯರು ಇಬ್ಬರು
ಒಬ್ಬನಿಗಾಗೇ ಅವನೊಬ್ಬನಿಗಾಗೇ

|| ನೀಲ ಮೇಘ ಶ್ಯಾಮ ನಿತ್ಯಾನಂದಧಾಮ
ರುಕ್ಮಿಣಿಗಾಗೇ ರುಕ್ಮಿಣಿಗಾಗೇ ||

ತನ್ನ ಪೂಜೆಗೈದ ಗಿರಿಜೆ ತಪಕೆ ಮೆಚ್ಚಿದ…
ಮೆಚ್ಚಿ ಒಲಿದು ಮನಸ್ಸು ತಂದು ಹರನು ವರಿಸಿದ
ಪ್ರೀತಿ ಇಂದ ಬಂದ ಗಂಗೆ ಅಂದ ಮೆಚ್ಚಿದ
ತನ್ನ ಶಿರದ ಮೇಲೆ ಅವಳ ಹರನು ಇರಿಸಿದ
ಒಂದೇ ಮಾಲೆ ಒಂದೇ ಮದುವೆ ಬಾಳಿಗೆ ಅದೇ ನೀತಿ
ಒಂದೇ ಮಾಲೆ ಇಬ್ಬರಿಗೀವುದು ದೇವರ ನಿಜ ನೀತಿ
ಅದು ಅಂದಿನ ಕಥೆಯಮ್ಮಾ..
ಇದು ನಿತ್ಯದ ಕಥೆಯಮ್ಮಾ
ಅದು ಬೊಂಬೆ ಮದುವೆಯಮ್ಮಾ
ಇದು ಸತ್ಯದ ಮದುವೆಯಮ್ಮಾ

|| ನೀಲ ಮೇಘ ಶ್ಯಾಮ....ಅಹ್ಹಹ್ಹ..
ನೀಲ ಮೇಘ ಶ್ಯಾಮ ನಿತ್ಯಾನಂದಧಾಮ
ರುಕ್ಮಿಣಿಗಾಗೇ ರುಕ್ಮಿಣಿಗಾಗೇ….||

ಮಲ್ಲೆ ಹೂವ ನಲ್ಲೆ ಮುಡಿಗೆ ಇಟ್ಟ ನಲ್ಲನು…
ಎಂದು ಅವಳ ಬಿಟ್ಟು ನೋಡ ಬೇರೆ ಯಾರನು
ನಲ್ಲ ನೆಟ್ಟ ಪ್ರೀತಿ ಬಳ್ಳಿ ಎರಡು ತೋಟದೇ
ಎರಡು ಬಳ್ಳಿ ತಂದ ಹೂವು ಎಲ್ಲಾ ಅವನದೇ
ಒಂದೇ ಒಡಲ ಎರಡು ಪ್ರಾಣ ಒಟ್ಟಿಗೆ ಇರಬಹುದೇ
ಒಂದೇ ಮುಖಕೆ ಎರಡು ಕಣ್ಣು ಸೃಷ್ಟಿಯತಪ್ಪಹುದೇ
ಇದಕುತ್ತರ ಏನಿದೆಯೋ...
ಕಂಬನಿಗೆ ಕೊನೆಯಿದೆಯೋ
ಇದು ವಿಧಿಯ ಚೆಲ್ಲಾಟ
ಇದು ಬಾಳಿನ ಹೋರಾಟ

 
|| ನೀಲ ಮೇಘ ಶ್ಯಾಮ ನಿತ್ಯಾನಂದಧಾಮ
ರುಕ್ಮಿಣಿಗಾಗೇ ರುಕ್ಮಿಣಿಗಾಗೇ||
||ನೀಲ ಮೇಘ ಶ್ಯಾಮ ನಿತ್ಯಾನಂದಧಾಮ
ರುಕ್ಮಿಣಿಗಾಗೇ.. ಅಹ್ಹಹ್ಹಹ್ಹ..  ರುಕ್ಮಿಣಿಗಾಗೇ….||

ನವರಾತ್ರಿ ಸಂಜೆಯಲಿ ನನ್ನದೆಯ ಹಾಡಿನಲಿ
ಪ್ರಶ್ನೆಯೊಂದು ಮೂಡಿಹುದು ನೋಡಮ್ಮಾ
ನವರಾತ್ರಿ ಸಂಜೆಯಲಿ ನಾ ನುಡಿವ ಮಾತಿನಲಿ
ಉತ್ತರವು ಅಡಗಿರುವುದು ಕೇಳಮ್ಮಾ..

ನೀಲ ಮೇಘ ಶ್ಯಾಮ ನಿತ್ಯಾನಂದಧಾಮ
ನೀಲ ಮೇಘ ಶ್ಯಾಮ ನಿತ್ಯಾನಂದಧಾಮ
ರುಕ್ಮಿಣಿಗಾಗೇ ರುಕ್ಮಿಣಿಗಾಗೇ
ಅವನ ಮಧುರ ಮುರುಳಿಯು
ಮಿಡಿವ ಸವಿಯ ರವಳಿಯು
ಸತಿಗಾಗೇ ಏ ಕುಲಸತಿಗಾಗೆ

ನೀಲ ಮೇಘ ಶ್ಯಾಮ ನಿತ್ಯಾನಂದಧಾಮ
ನೀಲ ಮೇಘ ಶ್ಯಾಮ ನಿತ್ಯಾನಂದಧಾಮ
ಇಬ್ಬರಿಗಾಗೇ ಎಂದು ಇಬ್ಬರಿಗಾಗೇ
ಸೊಬಗಿ ಸತ್ಯಭಾಮೆ ರುಕ್ಮಿಣಿಯರು ಇಬ್ಬರು
ಒಬ್ಬನಿಗಾಗೇ ಅವನೊಬ್ಬನಿಗಾಗೇ

|| ನೀಲ ಮೇಘ ಶ್ಯಾಮ ನಿತ್ಯಾನಂದಧಾಮ
ರುಕ್ಮಿಣಿಗಾಗೇ ರುಕ್ಮಿಣಿಗಾಗೇ ||

ತನ್ನ ಪೂಜೆಗೈದ ಗಿರಿಜೆ ತಪಕೆ ಮೆಚ್ಚಿದ…
ಮೆಚ್ಚಿ ಒಲಿದು ಮನಸ್ಸು ತಂದು ಹರನು ವರಿಸಿದ
ಪ್ರೀತಿ ಇಂದ ಬಂದ ಗಂಗೆ ಅಂದ ಮೆಚ್ಚಿದ
ತನ್ನ ಶಿರದ ಮೇಲೆ ಅವಳ ಹರನು ಇರಿಸಿದ
ಒಂದೇ ಮಾಲೆ ಒಂದೇ ಮದುವೆ ಬಾಳಿಗೆ ಅದೇ ನೀತಿ
ಒಂದೇ ಮಾಲೆ ಇಬ್ಬರಿಗೀವುದು ದೇವರ ನಿಜ ನೀತಿ
ಅದು ಅಂದಿನ ಕಥೆಯಮ್ಮಾ..
ಇದು ನಿತ್ಯದ ಕಥೆಯಮ್ಮಾ
ಅದು ಬೊಂಬೆ ಮದುವೆಯಮ್ಮಾ
ಇದು ಸತ್ಯದ ಮದುವೆಯಮ್ಮಾ

|| ನೀಲ ಮೇಘ ಶ್ಯಾಮ....ಅಹ್ಹಹ್ಹ..
ನೀಲ ಮೇಘ ಶ್ಯಾಮ ನಿತ್ಯಾನಂದಧಾಮ
ರುಕ್ಮಿಣಿಗಾಗೇ ರುಕ್ಮಿಣಿಗಾಗೇ….||

ಮಲ್ಲೆ ಹೂವ ನಲ್ಲೆ ಮುಡಿಗೆ ಇಟ್ಟ ನಲ್ಲನು…
ಎಂದು ಅವಳ ಬಿಟ್ಟು ನೋಡ ಬೇರೆ ಯಾರನು
ನಲ್ಲ ನೆಟ್ಟ ಪ್ರೀತಿ ಬಳ್ಳಿ ಎರಡು ತೋಟದೇ
ಎರಡು ಬಳ್ಳಿ ತಂದ ಹೂವು ಎಲ್ಲಾ ಅವನದೇ
ಒಂದೇ ಒಡಲ ಎರಡು ಪ್ರಾಣ ಒಟ್ಟಿಗೆ ಇರಬಹುದೇ
ಒಂದೇ ಮುಖಕೆ ಎರಡು ಕಣ್ಣು ಸೃಷ್ಟಿಯತಪ್ಪಹುದೇ
ಇದಕುತ್ತರ ಏನಿದೆಯೋ...
ಕಂಬನಿಗೆ ಕೊನೆಯಿದೆಯೋ
ಇದು ವಿಧಿಯ ಚೆಲ್ಲಾಟ
ಇದು ಬಾಳಿನ ಹೋರಾಟ

 
|| ನೀಲ ಮೇಘ ಶ್ಯಾಮ ನಿತ್ಯಾನಂದಧಾಮ
ರುಕ್ಮಿಣಿಗಾಗೇ ರುಕ್ಮಿಣಿಗಾಗೇ||
||ನೀಲ ಮೇಘ ಶ್ಯಾಮ ನಿತ್ಯಾನಂದಧಾಮ
ರುಕ್ಮಿಣಿಗಾಗೇ.. ಅಹ್ಹಹ್ಹಹ್ಹ..  ರುಕ್ಮಿಣಿಗಾಗೇ….||

Neela Megha Shyama song lyrics from Kannada Movie Eradu Rekhegalu starring Srinath, Saritha, Geetha, Lyrics penned by R N Jayagopal Sung by P Susheela, Vani Jairam, Music Composed by M S Vishwanathan, film is Directed by K Balachandar and film is released on 1984
Song Details Page Title
Video:
ಸಂಗೀತ ವೀಡಿಯೊ:
Lyricist:

R N Jayagopal

ಗೀತರಚನೆಕಾರ:

ಆರ್.ಎನ್.ಜಯಗೋಪಾಲ್

Director:

K Balachandar

ನಿರ್ದೇಶಕ:

ಕೆ ಬಾಲಚಂದರ್

Music Director:

M S Vishwanathan

ಸಂಗೀತ ನಿರ್ದೇಶಕ:

ಎಂ.ಎಸ್.ವಿಶ್ವನಾಥನ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ