Kaasu Keluva Ganda Lyrics

in Ellara Mane Dosenu

Video:

LYRIC

-
ಕಾಸು ಕೇಳುವ ಗಂಡ ಮೀಸೆ ಯಾತಕೊ ಭಂಡ
ಕಾಸು ಕೇಳುವ ಗಂಡ ಮೀಸೆ ಯಾತಕೊ ಭಂಡ
ಲಾಭವಿಲ್ಲದ ಮದುವೆ ಯಾರ ಭಾಗ್ಯಕ್ಕೆ ಪ್ರಭುವೆ
ತಿಮ್ಮನಿಗು ಸಾಲವಿದೆ  ತೀರಿಸುವ ಛಲವಿದೆ
ತಿಮ್ಮನಿಗೆ ಹುಂಡಿಯಿದೆ ನಮಗಿಲ್ಲಿ ಲೊಟ್ಟೆ ಇದೆ
ನಮ್ಮದೆ ಹೆಂಡ್ತಿ ದುಡ್ಡೆಲ್ಲ
ಕೋರ್ಟು ಒಪ್ಪೋದೆ ಇಲ್ಲ
ಕಾಸು ಕೇಳುವ ಗಂಡ ಮೀಸೆ ಯಾತಕೊ ಭಂಡ
ಲಾಭವಿಲ್ಲದ ಮದುವೆ ಯಾರ ಭಾಗ್ಯಕ್ಕೆ ಪ್ರಭುವೆ
 
ನೀವು ಗಂಡಸಾದರೆ ಬರಿ ಹೆಂಡತಿ ಗಂಟು ನುಂಗೋದು ಬಿಟ್ಟು
ಬಾಳಲುಬಾರದೆ
ಲಾಭ ಇಲ್ಲವಾದರೆ ದಿನ ನಿಮ್ಮನು ನಾವು ಸುಮ್ಮನೆ ಸಾಕಿ
ಹೆಣಗುವುದೇತಕೆ
ಪಾರ್ವತಿಯ ಬಳಿ ಏನಿತ್ತು ಶಿವನೆ ಕಳಿಸಿ ಸಾಕಲಿಲ್ಲವೆ
ಲಕ್ಷ್ಮಮಮ್ಮ ತನ್ನ ಸೇವೆಯನ್ನ ನಾರಾಯಣನಿಗೆ ಕೊಡಲಿಲ್ಲವೆ
ತಿಮ್ಮನಿಗು ಸಾಲವಿದೆ  ತೀರಿಸುವ ಛಲವಿದೆ
ತಿಮ್ಮನಿಗೆ ಹುಂಡಿಯಿದೆ ನಮಗಿಲ್ಲಿ ಲೊಟ್ಟೆ ಇದೆ
ನಮ್ಮದೆ ಹೆಂಡ್ತಿ ದುಡ್ಡೆಲ್ಲ
ಕೋರ್ಟು ಒಪ್ಪೋದೆ ಇಲ್ಲ
 
||ಕಾಸು ಕೇಳುವ ಗಂಡ ಮೀಸೆ ಯಾತಕೊ ಭಂಡ
ಲಾಭವಿಲ್ಲದ ಮದುವೆ ಯಾರ ಭಾಗ್ಯಕ್ಕೆ ಪ್ರಭುವೆ||
 
ಡೊಳ್ಳು ಆಟೋಪದೆ ನಿಜ ದುಡಿಮೆಯ ಮಾಡಿ ಬದುಕನು ದೂಡಿ
ಬೇಡುವಿರೇತಕೆ
ಬಾಳು ವೇದಾಂತವೆ ನೆನ್ನೆ ನಾಳೆಯ ಬಿಟ್ಟು ಇಂದು ಉಂಡು ಉಟ್ಟು
ಮೋಜಿರಬಾರದೆ
ಮಡದಿಯರ ನೀವ್‌ ಬೆನ್ನುಹತ್ತದೆ ದುಡಿದರೆ ಬಾಳು ಸುಖತರದೆ
ಝಣಝಣವೆನ್ನುವ ಕಾಂಚಾಣವೆ ಸಿಗುತಿರೆ ಬಾಳು ಬಲು ಚೆಂದವೆ
ತಿಮ್ಮನಿಗು ಸಾಲವಿದೆ  ತೀರಿಸುವ ಛಲವಿದೆ
ತಿಮ್ಮನಿಗೆ ಹುಂಡಿಯಿದೆ ನಮಗಿಲ್ಲಿ ಲೊಟ್ಟೆ ಇದೆ
ನಮ್ಮದೆ ಹೆಂಡ್ತಿ ದುಡ್ಡೆಲ್ಲ
ಕೋರ್ಟು ಒಪ್ಪೋದೆ ಇಲ್ಲ
 
||ಕಾಸು ಕೇಳುವ ಗಂಡ ಮೀಸೆ ಯಾತಕೊ ಭಂಡ
ಲಾಭವಿಲ್ಲದ ಮದುವೆ ಯಾರ ಭಾಗ್ಯಕ್ಕೆ ಪ್ರಭುವೆ||

Kaasu Keluva Ganda song lyrics from Kannada Movie Ellara Mane Dosenu starring Ramkumar, Shruthi, Mohan, Lyrics penned by Hamsalekha Sung by Hemanth, Nanditha, Music Composed by Hamsalekha, film is Directed by H S Prakash and film is released on 2001