Hudugi Beku Nanage Lyrics

in Don Kumara

LYRIC

ಹುಡುಗಿ ಬೇಕು ನಂಗೆ ಗೌರಮ್ಮ ಇದ್ದಂಗೆ
ಪ್ರೀತಿ ಬೇಕು ನಂಗೆ ಎಂದು ಕಮ್ಮಿ ಆಗದಂಗೆ
ಅಂಥ ಹುಡುಗಿ ಸಿಕ್ರೆ ನಾನು ಈಗ್ಲೆ ಆಗ್ತೀನಿ ಮದುವೆ
ಅಂಥ ಹುಡುಗಿ ಸಿಕ್ರೆ ನಾನು ಈಗ್ಲೆ ಆಗ್ತೀನಿ ಮದುವೆ
 
ಅಪ್ಸರೆ ಅಲ್ಲದಿದ್ರು ನಂಗೆ ಕನ್ನಡತಿ ಬೇಕು
ಸ್ಟೈಲು ಬರದಿದ್ರು ಮುದ್ದೆ ಮಾಡೊಕ್‌ ಬರಬೇಕು
 
(ಬ್ರಹ್ಮನಿಗೆ ಈಗ ತಾನೆ ಆರ್ಡರ್‌ ಕೊಟ್ಬಂದೆ
ಸ್ವಲ್ಪ ಕಾಯೊ ಗೆಳೆಯ ಈಗ ಬೇಗ ಬರ್ತಾಳೆ)
 
ಪ್ಯಾಂಟ್‌ ಶರ್ಟು ಹಾಕೊ ಹುಡುಗಿ ನಂಗೆ ಬೇಡಪ್ಪ
ಸೀರೆ ಉಡುವ ಹುಡುಗಿ ಸಿಕ್ರೆ ಪ್ಲೀಸ್‌ ಹೇಳಪ್ಪ
 
ಸಹನೆ ಬೇಕು  ನಂಗೆ ಭೂತಾಯಿಗಿದ್ದಂಗೆ
ಕರುಣೆ ಬೇಕು ನಂಗೆ ಸೀತಾಮಾತೆಗಿದ್ದಂಗೆ
ಅಂಥ ಹುಡುಗಿ ಸಿಕ್ರೆ ನಾನು ಈಗ್ಲೆ ಆಗ್ತೀನಿ ಮದುವೆ
ಅಂಥ ಹುಡುಗಿ ಸಿಕ್ರೆ ನಾನು ಈಗ್ಲೆ ಆಗ್ತೀನಿ ಮದುವೆ
 
ಕಾವೇರಿ ತಾಯಿ ಹಾಗೆ ಅವಳ ಕಂಗಳು ಹೊಳಿಬೇಕು
ಗಂಗಾ ಮಾತೆಯ ಹಾಗೆ ಮಾತಲಿ ಮಂತ್ರವೆ ಬರಬೇಕು
(ಬ್ರಹ್ಮನಿಗೆ ಈಗ ತಾನೆ ಆರ್ಡರ್‌ ಕೊಟ್ಬಂದೆ
ಸ್ವಲ್ಪ ಕಾಯೊ ಗೆಳೆಯ ಈಗ ಬೇಗ ಬರ್ತಾಳೆ)
ಮಾತು ಬೇಕು ನಂಗೆ ನನ್ನ ಕನ್ನಡ ಇದ್ದಂಗೆ
ಅಂಥ ಹುಡುಗಿ ಸಿಕ್ರೆ ನಾನು ಈಗ್ಲೆ ಆಗ್ತೀನಿ ಮದುವೆ
 
ಹುಡುಗಿ ಬೇಕು ನಮ್ಗು ಗೌರಮ್ಮ ಇದ್ದಂಗೆ
ಪ್ರೀತಿ ಬೇಕು ನಮ್ಗು ಎಂದು ಕಮ್ಮಿ ಆಗದಂಗೆ
ಅಂಥ ಹುಡುಗಿ ಸಿಕ್ರೆ ನಾವು ಈಗ್ಲೆ ಆಗ್ತೀನಿ ಮದುವೆ
ಅಂಥ ಹುಡುಗಿ ಸಿಕ್ರೆ ನಾವು

Hudugi Beku Nanage song lyrics from Kannada Movie Don Kumara starring Chandrashekhar V, Sahana, Prakruthi, Lyrics penned by Nagesh Kumar N Sung by Avinash Chebbi, Music Composed by Arav Rishik, film is Directed by Nagesh Kumar .N and film is released on 2023