Beladingalallu Lyrics

in Charlie

LYRIC

ಬೆಳದಿಂಗಳಲ್ಲು ಅಮವಾಸ್ಯೆ ಇದು ನವಯುವಕರ ಸಮಸ್ಯೆ
ಬೆಳದಿಂಗಳಲ್ಲು ಅಮವಾಸ್ಯೆ ಇದು ನವಯುವಕರ ಸಮಸ್ಯೆ
ಬೆಳದಿಂಗಳಲ್ಲು ಅಮವಾಸ್ಯೆ ಇದು ನವಯುವಕರ ಸಮಸ್ಯೆ
ಹುಡುಗಿ ಇನ್ನು ಸಿಕ್ಕೆ ಇಲ್ಲ ಆದ್ರು ನಮಗೆ ದುಃಖ ಇಲ್ಲ
ಪರ್ಸಿನಲ್ಲಿ ರೊಕ್ಕ ಇಲ್ಲ ನಮ್ದು ಯಾವ್ದು ಪಕ್ಕ ಇಲ್ಲ
ಪರ್ಸಿನಲ್ಲಿ ರೊಕ್ಕ ಇಲ್ಲ ನಮ್ದು ಯಾವ್ದು ಪಕ್ಕ ಇಲ್ಲ
ಆಗೊದಲ್ಲ ಹೋಗೊದಲ್ಲ ಹರೆಯ
ಅರೆ ಹರೆಯ ಹರೆಯ ಬಗೆಯೆ ಹರಿಯೊದಿಲ್ಲ ನಮ್ದು ಖಾಲಿ ಅಲ್ಲಗುಲ್ಲ
ಹರೆಯ ಬಗೆಯೆ ಹರಿಯೊದಿಲ್ಲ ನಮ್ದು ಖಾಲಿ ಅಲ್ಲಗುಲ್ಲ
ಬೆಳದಿಂಗಳಲ್ಲು ಅಮವಾಸ್ಯೆ ಇದು ನವಯುವಕರ ಸಮಸ್ಯೆ
 
ಚ್ಯಾನ್ಸು ಸಿಕ್ರೆ ಭೂಲೋಕನೆ ಬೈಟು ಮಾಡ್ತೀವಿ
ಸೂರ್ಯನೆ ಮ್ಯಾಲೆ 30-40 ಸೈಟು ಮಾಡ್ತೀವಿ
ಹುಡುಗೀರು ಏನೆ ಹೇಳೊದಿದ್ರು ಹೇಳಿ ಕೇಳ್ತೀವಿ
ಫೋನಲ್ಲಿ ಬ್ಯಾಡ ಎಲ್ಲಿದ್ದಿರೊ ಅಲ್ಗೆ ಬರ್ತೀವಿ
ನಮ್ಮ ಪ್ರೀತಿ ಭಕ್ತಿಗೀತೆ ವಿರಹದಲ್ಲಿ ಬೆಂದೋಗೈತೆ
ಮತ್ತೆ ಮತ್ತೆ ಮತ್ತೆ ಮದುವೆ ನಮ್ದು ಒನ್ಲಿ ಪ್ರೀತಿ ಚಿಂತೆ
 
ಊರಗುಡಿಯ ಗಂಟೆ ಹಂಗೆ ಎಲ್ರು ನಮ್ಮ ತಲೆಗೆ ಹೊಡಿತಾರೆ
ಅಡ್ಡ ಸಿಕ್ಕ ಮಂದಿ ನಮ್ಗೆ ನಿಲ್ಸಿ ಹಣೆಯಬರಹ ಬರಿತಾರೆ
ಕುಂತ್ರೆ ನಿಂತ್ರೆ ಮಲಗಿಕೊಂಡ್ರೆ ಯಾಕೇನಾಯ್ತು ಅಂತ ಕೇಳ್ತಾರೆ
ಊರಿನಲ್ಲಿ ಮಳೆ ಬರದಿದ್ರು ನಾವೆ ಕಾರಣ ಅಂತ ಅಂತಾರೆ
ನಮ್ಗು ಒಂದು ಫ್ಯೂಚರ್‌ ಐತೆ ಗಾಡಿ ಸ್ವಲ್ಪ ನಿಂತೋಗೈತೆ
ಕಳೆದ ವರ್ಷ ಲೇಟಾಗೈತೆ ನೆಕ್ಸ್ಟ್‌ ಇಯರ್‌ ಬ್ಯಾರೆ ಐತೆ
ಆಗೊದಲ್ಲ ಹೋಗೊದಲ್ಲ ಹರೆಯ
ಅರೆ ಹರೆಯ ಹರೆಯ ಬಗೆಯೆ ಹರಿಯೊದಿಲ್ಲ ಕೇಳೊಕೊಂಡ್ರು ಕೇಳೊರಿಲ್ಲ
ನಾವು ಜಾಸ್ತಿ ಹೇಳೊದಿಲ್ಲ ನಮ್ದು ಖಾಲಿ ಅಲ್ಲಗುಲ್ಲ
 
||ಬೆಳದಿಂಗಳಲ್ಲು ಅಮವಾಸ್ಯೆ ಇದು ನವಯುವಕರ ಸಮಸ್ಯೆ||
||ಬೆಳದಿಂಗಳಲ್ಲು ಅಮವಾಸ್ಯೆ ಇದು ನವಯುವಕರ ಸಮಸ್ಯೆ||

Beladingalallu song lyrics from Kannada Movie Charlie starring Krishna, Milana Nagaraj, Vaishali Deepak, Lyrics penned by Yogaraj Bhat Sung by Vijay Prakash, Veer Samarth, Music Composed by Veer Samarth, film is Directed by Shiva and film is released on 2015