Kesaru Kaige Mosaru Lyrics

in Challenge

Video:

LYRIC

-
ಕೆಸರು ಕೈಗೆ ಮೊಸರು ಬಾಯಿಗೆ ದುಡಿದರೆ
ದುಡಿಯೋನೆ ಎಂದು ಊರಿಗೆ ದೊರೆ
ಕೆಸರು ಕೈಗೆ ಮೊಸರು ಬಾಯಿಗೆ ದುಡಿದರೆ
ದುಡಿಯೋನೆ ಎಂದು ಊರಿಗೆ ದೊರೆ
ಕೆಲಸದಲ್ಲಿ ನಿನಗೆ ಕಂಡರೆ ಈಶ್ವರ ನೀ ಕೋಟಿಶ್ವರ
ಕೆಲಸದಲ್ಲಿ ನಿನಗೆ ಕಂಡರೆ ಈಶ್ವರೆ ನೀ ಕೋಟಿಶ್ವರ
ಕೆಸರು ಕೈಗೆ ಮೊಸರು ಬಾಯಿಗೆ ದುಡಿದರೆ
ದುಡಿಯೋನೆ ಎಂದು ಊರಿಗೆ ದೊರೆ
ಆ ಶಿವ ಭೂಮಿ ಕೊಟ್ಟ ಬೊರ್‌ ಅಂತ ನೀರು ಬಿಟ್ಟ
ಬೀಜವಾಗಿ ಆಕಳಾಗಿ ನೇಗಿಲಾಗಿ ಬೇಲಿಯಾಗಿ ತಾ
ನಮ್ಮ ಪೈರು ಉಂಟು ಮಾಡಿದ
ಆ ಶಿವ ಭೂಮಿ ಸುತ್ತ ಏನೇನೊ ಸುತ್ತಿಸುತ
ಗಾಳಿ ಹೊಡೆದು ಮಂಜು ಕೊರೆದು
ಮಳೆಯ ಕರೆದು ಬಿಸಿಲ ಸುರಿದು ತಾ
ನಮ್ಮ ಬೆಳೆಗೆ ಪ್ರಾಣ ತುಂಬಿದ
ಅನ್ನ ಬೇಕ ಅಂತಾನೆ ದುಡಿದು ತಿನ್ನು ಅಂತಾನೆ
ಅನ್ನ ಬೇಕ ಅಂತಾನೆ ದುಡಿದು ತಿನ್ನು ಅಂತಾನೆ
||ಕೆಸರು ಕೈಗೆ ಮೊಸರು ಬಾಯಿಗೆ ದುಡಿದರೆ
ದುಡಿಯೋನೆ ಎಂದು ಊರಿಗೆ ದೊರೆ||
ಆ ದೊರೆ ಜೀವ ಕೊಟ್ಟು ಜೀವದಿಂದೆ ಸಾವನಿಟ್ಟು
ಒಂದು ಹೊತ್ತು ಸುಖವನಿಟ್ಟು ಮೂರು ಹೊತ್ತು ನೋವು ಕೊಟ್ಟು
ಈ ಮಧ್ಯ ನಮಗೆ ಹಸಿವು ನೀಡಿದ
ಈ ನಮ್ಮ ಮನಸ್ಸು ಚಂಡಿ ಅಲ್ಲಿ ಸ್ವಲ್ಪ ಹುಳಿಯ ಹಿಂಡಿ
ಕಪಟ ಬುದ್ದಿ ಕೊಳಕು ಸುದ್ದಿ ಕೆಸರಲದ್ದಿ ತಿದ್ದಿ ತಿದ್ದಿ
ಬದುಕೆ ಕರ್ಮ ಎಂದು ಹೇಳಿದೆ
ಕೋಟಿ ಬೇಕ ಅಂತಾನೆ ಚಾಟಿ ಏಟು ಕೊಡ್ತಾನೆ
ಕೋಟಿ ಬೇಕ ಅಂತಾನೆ ಚಾಟಿ ಏಟು ಕೊಡ್ತಾನೆ
||ಕೆಸರು ಕೈಗೆ ಮೊಸರು ಬಾಯಿಗೆ ದುಡಿದರೆ
ದುಡಿಯೋನೆ ಎಂದು ಊರಿಗೆ ದೊರೆ
ಕೆಸರು ಕೈಗೆ ಮೊಸರು ಬಾಯಿಗೆ ದುಡಿದರೆ
ದುಡಿಯೋನೆ ಎಂದು ಊರಿಗೆ ದೊರೆ
ಕೆಲಸದಲ್ಲಿ ನಿನಗೆ ಕಂಡರೆ ಈಶ್ವರ ನೀ ಕೋಟಿಶ್ವರ
ಕೆಲಸದಲ್ಲಿ ನಿನಗೆ ಕಂಡರೆ ಈಶ್ವರೆ ನೀ ಕೋಟಿಶ್ವರ||
||ಕೆಸರು ಕೈಗೆ ಮೊಸರು ಬಾಯಿಗೆ ದುಡಿದರೆ
ದುಡಿಯೋನೆ ಎಂದು ಊರಿಗೆ ದೊರೆ||
 

Kesaru Kaige Mosaru song lyrics from Kannada Movie Challenge starring Tiger Prabhakar, Ashok, Sridhar, Lyrics penned by Hamsalekha Sung by Ramesh, Manjula Gururaj, Music Composed by Hamsalekha, film is Directed by Raj Kishor and film is released on 1990