Kuhoo Kuhoo Kogile Lyrics

in CID Eesha

Video:

LYRIC

ಕುಹೂ ಕುಹೂ ಕುಹೂ ಕೋಗಿಲೆ
ಪ್ರೀತಿ ಪ್ರೀತಿ ಅಂತ ಕೂಗೆಲೇ
ಓಓಓಓಓ ಬೆಳ್ಳಿ ಸೂರ್ಯನೆ
ನಿನ್ನ ಕಂಡು ಕರಗೋದೆನೆ
ನಿನ್ನ ಕಣ್ಗಳ ಗಾಳದಲ್ಲಿ ಸಿಕ್ಕಿಬಿದ್ದೆ
ನನ್ನ ಕೇಳದೇನೆ ನನ್ನ ಮನ ಯಾಕೆ ಕದ್ದೆ
ಮರುಳಾದೆ ಓ ಮನಸ್ಸೆ
ಹೂಬಳ್ಳಿ ಹೆಮ್ಮರನ ಅಪ್ಪಿ ಬಾಳುವಂತೆ ಬಾಳುವಾಸೆ
 
||ಕುಹೂ ಕುಹೂ ಕುಹೂ ಕೋಗಿಲೆ
ಪ್ರೀತಿ ಪ್ರೀತಿ ಅಂತ ಕೂಗೆಲೇ
ಓಓಓಓಓ ಬೆಳ್ಳಿ ಸೂರ್ಯನೆ
ನಿನ್ನ ಕಂಡು ಕರಗೋದೆನೆ||
 
ತಡೆಯುವೆ ಕಾಲನ್ನ ಕರೆಯದೆ ನಾಳೆಯನ್ನ
ನನ್ನ ಜೊತೆ ನೀನಿರೊ ಕ್ಷಣ
ಉಸಿರನ್ನು ಹೀರೊ ಮುನ್ನ ಹಿಡಿಯುವೆ ಗಾಳಿಯನ್ನ
ನಿನ್ನ ಉಸಿರೆಲ್ಲ ನಂದೆ ಚಿನ್ನ
ಸೇರಿ ಸೇರದಾಗ ಸೇರೊ ಕಣ್ಣಿನಲ್ಲೆ
ಸೆಳೆಯೊ ನೋಟವೆ ಕರೆ
ಹೇಳಿ ಹೇಳದೇನೆ ಹೇಳೊ ಮೌನವೆಲ್ಲ
ಇಳಿಸೆ ಮಾತಿನ ಹೊರೆ
ಶುರುವಾಯ್ತು ಈ ಪ್ರೀತಿ
ನೀ ಒಮ್ಮೆ ನನ್ನ ಕಂಡ ಮೇಲು
ಇನ್ನು ಒಮ್ಮೆ ನೋಡುವಾಸೆ
 
||ಕುಹೂ ಕುಹೂ ಕುಹೂ ಕೋಗಿಲೆ
ಪ್ರೀತಿ ಪ್ರೀತಿ ಅಂತ ಕೂಗೆಲೇ
ಓಓಓಓಓ ಬೆಳ್ಳಿ ಸೂರ್ಯನೆ
ನಿನ್ನ ಕಂಡು ಕರಗೋದೆನೆ||
 
ಭೂಮಿಯನ್ನೆ ಚಿನ್ನದಂತೆ ಬಾನಿನಲ್ಲಿ ಬಣ್ಣದಂತೆ
ನಿನ್ನ ಸಂಗ ಸೇರಿಹೋದೆ ನಾನು
ನೆನೆಯುವ ಮಣ್ಣಿನಲ್ಲಿ ನಗುತಿರೊ ಹೂವಿನಲ್ಲಿ
ರಮಿಸುವ ಗಂಧವಾಗಲೇನು
ಯಾರು ಹೇಳದೇನೆ ಕೇಳಿ ಕೇಳದೇನೆ ಕಲಿತೆ ಪ್ರೀತಿಯ ಪಾಠ
ಭಾಷೆ ಕೇಳೊದಿಲ್ಲ ವೇಷ ಹಾಕೊದಿಲ್ಲ
ಮನಸ್ಸು ಆಡುವ ಆಟ
ಈ ಪ್ರೀತಿ ಅಂಬಾರಿ ಏಳೇಳು ಜನ್ಮ ನಾನು ನೀನು
ಸವ್ವಾರಿಯ ಮಾಡುವಾಸೆ
 
||ಕುಹೂ ಕುಹೂ ಕುಹೂ ಕೋಗಿಲೆ
ಪ್ರೀತಿ ಪ್ರೀತಿ ಅಂತ ಕೂಗೆಲೇ
ಓಓಓಓಓ ಬೆಳ್ಳಿ ಸೂರ್ಯನೆ
ನಿನ್ನ ಕಂಡು ಕರಗೋದೆನೆ
ನಿನ್ನ ಕಣ್ಗಳ ಗಾಳದಲ್ಲಿ ಸಿಕ್ಕಿಬಿದ್ದೆ
ನನ್ನ ಕೇಳದೇನೆ ನನ್ನ ಮನ ಯಾಕೆ ಕದ್ದೆ
ಮರುಳಾದೆ ಓ ಮನಸ್ಸೆ
ಹೂಬಳ್ಳಿ ಹೆಮ್ಮರನ ಅಪ್ಪಿ ಬಾಳುವಂತೆ ಬಾಳುವಾಸೆ||
 
||ಕುಹೂ ಕುಹೂ ಕುಹೂ ಕೋಗಿಲೆ
ಪ್ರೀತಿ ಪ್ರೀತಿ ಅಂತ ಕೂಗೆಲೇ
ಓಓಓಓಓ ಬೆಳ್ಳಿ ಸೂರ್ಯನೆ
ನಿನ್ನ ಕಂಡು ಕರಗೋದೆನೆ||
 

Kuhoo Kuhoo Kogile song lyrics from Kannada Movie CID Eesha starring Jaggesh, Mayuri, Komal Kumar, Lyrics penned by Ram Narayan Sung by Rajesh Krishnan, Nanditha, Music Composed by Vijay Bharathi, film is Directed by N Rajesh and film is released on 2013