-
ಸೂರ್ಯನ ಕಿವಿ ಹಿಂಡಿ ಇಣುಕಿ ಎಳೆದು ತಾರೊ
ಕಿರಣಗಳ ಕೈ ಹಿಡಿದು ಬೆಳಕಿನ ಬಂಡಿಯ ಹೂಡೊ
ಇಬ್ಬನಿ ಹನಿಗಳು ಬೆಚ್ಚಗಿವೆ ಬೇಗನೆ ಬಾರೊ ಸ್ನಾನಕ್ಕೆ
ನದಿಗಳು ನಿದ್ದೆಯ ಮಬ್ಬಲಿವೆ ಎದ್ದು ಎಬ್ಬಿಸೊ ಧ್ಯಾನಕ್ಕೆ
ಏಳು ಏಳು ಅಜ್ಜಯ್ಯ ನಿನ್ನ ಮಹಿಮೆಗೆ ಮುಪ್ಪೆ ಇಲ್ಲಯ್ಯ
ಏಳು ಏಳು ಅಜ್ಜಯ್ಯ ನಿನ್ನ ಮಹಿಮೆಗೆ ಮುಪ್ಪೆ ಇಲ್ಲಯ್ಯ
ಗರಬಡಿದು ನಿಂತಿವೆ ಸಾಲು ಸಾಲು ಗಿರಿಬೆಟ್ಟಗಳು
ನಿನ್ನ ಗಾಂಭೀರ್ಯ ಅವುಗಳಿಗು ದಯಮಾಡು
ಬರಬಂದ ಭೂಮಿಯ ಒಡಲು ಸೀಳೊಡೆದು ಬತ್ತಿ ಹೋಗಿರಲು
ನಿನ್ನ ಸ್ಪರ್ಶದಿಂದ ಹಸಿರು ಹರಡಿದೆ ನೋಡು
ಶುನ್ಯ ಆಗಸಕ್ಕೆ ದಿವ್ಯ ಮೌನದ ದೀಕ್ಷೆ ಕೊಡು
ನವ ಋತುಗಳಿಗೆ ಇತಿಮಿತಿಯ ಹೇಳಿಕೊಡು
ಚಿಲಿಪಿಲಿ ಹಕ್ಕಿಗಳಿಗೆ ಚತುರ್ವೇದ ಓದಿಸು
ಜುಳು ಜುಳು ಝರಿ ತೊರೆಗಳಿಗೆ ಓಂಕಾರ ನಾದಶೃತಿ ಹಿಡಿಸು
ಸೃಷ್ಟಿಯ ರಥವನ್ನು ಮುಟ್ಟಿ ಎತ್ತ ಓಡಿಸೊ ಸಾರಥಿ
ನಿತ್ಯವು ನಿನಗಿರುವುದು ಕೋಟಿ ಭಕ್ತರ ಕಂಗಳ ಆರತಿ
ಹೇಳು ಹೇಳು ಕರಿಬಸವ ಹಗಲು ಇರುಳು ನಿನ್ನ ಕೈವಶವ
ಹೇಳು ಹೇಳು ಕರಿಬಸವ ಹಗಲು ಇರುಳು ನಿನ್ನ ಕೈವಶವ
ಒಡಲೊಂದು ಶಿವನಿರುವ ಗುಡಿಯು ಸತ್ಯ ನುಡಿಯು ಮನಸ್ಸು ಸ್ಮರಿಸಲು
ಅವನು ನೆಲೆಸದ ಮನವು ದೆವ್ವಗಳ ಮನೆ ಕೇಳು
ಬದುಕೊಂದು ಅವನಿತ್ತ ಭಿಕ್ಷೆ ಶ್ರೀ ರಕ್ಷೆ ನನ್ನದೇನಿಲ್ಲ
ಕೊಡಲಿ ಕಸಿದುಕೊಳ್ಳಲಿ ಕಾರಣ ಕೇಳುವುದಿಲ್ಲ
ಕೊರತೆ ನೀಗಿಸುವ ಹರನೆ ಗುರು ಕರಿಬಸವ
ಸ್ಥಿರತೆ ಸಿದ್ದಿಸುವ ಒಡನೆ ಸನ್ಯಾಸಿ ಶಿವ
ಚಂಚಲ ಚಿತ್ತದೊಳಗೆ ಅಚಲ ಛಲ ತುಂಬಿಸು
ದುರ್ಬಲ ಮನಸ್ಸುಗಳಿಗೆ ನೂರಾನೆ ಬಲ ಕೊಟ್ಟು ನಂಬಿಸು
ದುಷ್ಟರ ದಹಿಸುವ ನಿರ್ಮೋಹದೇಹಿಯೊ ಅಜ್ಜಯ್ಯ
ಪವಾಡವ ನಡೆಸುವ ಪುಣ್ಯಪುರುಷವ ನೀ ನಿಜವಯ್ಯ
ಉಸಿರಿನ ಸ್ವರವೆ ಅಜ್ಜಯ್ಯ ನಿನ್ನಹೆಸರಿಗೆ ಅಪಜಯ ಇಲ್ಲಯ್ಯ

Sooryana Kivi Hindi song lyrics from Kannada Movie Bidalare starring Anil Kalyan, Keerthi Chawla, Ananthnag, Lyrics penned by Indra Sung by Chithra, Music Composed by K M Indra, film is Directed by Ramana and film is released on 2004