Kandu Kandu Nee Enna Lyrics

in Bhale Adrushtavo Adrushta

Video:

LYRIC

-
ಕಂಡು ಕಂಡೂ
ನೀ  ಎನ್ನ ಕೈಬಿಡುವರೇ ಕೃಷ್ಣ
ಪುಂಡರೀಕಾಕ್ಷ ಶ್ರೀ
ಪುರುಷತ್ತಮಾ ದೇವ.....
 
|| ಕಂಡು ಕಂಡೂ ||
 
ಬಂಧುಗಳು ಎನಗಿಲ್ಲ
ಬದುಕಿನಲಿ ಸುಖವಿಲ್ಲ
ನಿಂದೆಯಲಿನೊಂದೆನೈ
ನೀರಜಾಕ್ಷ
ತಂದೆತಾಯಿಯು ನೀನೆ
ಬಂಧುಬಳಗವು ನೀನೆ
ಎಂದೆಂದಿಗೂ ನಿನ್ನ
ನಂಬಿಹೆನು ಶ್ರೀ ಕೃಷ್ಣ..........
 
|| ಕಂಡು ಕಂಡೂ ||
 
 
 
ಕ್ಷಣವೊಂದು ಯುಗವಾಗಿ ತೃ
ಣಕಿಂತ ಕಡೆಯಾಗಿ
ಎಣಿಸಲಾರದಭವದಿ
ನೊಂದೆ ನಾನು
ಸನಕಾದಿ ಮುನಿವಂದ್ಯ
ವನಜ ಸಂಭವ ಜನಕ
ಫಣಿಶಾಯಿ ಪ್ರಹ್ಲಾದಗೊಲಿದ
ಶ್ರೀಕೃಷ್ಣ........
 
|| ಕಂಡು ಕಂಡೂ ||
 
 
ಭಕ್ತವತ್ಸಲನೆಂಬ
ಬಿರುದುಪೊತ್ತಮೇಲೆ
ಭಕ್ತರಾಧೀನನಾಗಿರಬೇಡವೇ
ಮುಕ್ತಿದಾಯಕ ನೀನು
ಹೊನ್ನೂರುಪುರವಾಸ
ಶಕ್ತಗುರು ಪುರಂದರಾವಿಠ್ಠಲ
ಶ್ರೀಕೃಷ್ಣ.......
|| ಕಂಡು ಕಂಡೂ ||

Kandu Kandu Nee Enna song lyrics from Kannada Movie Bhale Adrushtavo Adrushta starring Kalpana, B V Radha, Gangadhar, Lyrics penned by Purandara dasaru Sung by S Janaki, Music Composed by Vijaya Bhaskar, film is Directed by Ravi and film is released on 1971