Mutthina Hanigalu Lyrics

in Bayasade Banda Bhagya

Video:

LYRIC

ಮುತ್ತಿನಾ ಹನಿಗಳು
ಸುತ್ತಲೂ ಮುತ್ತಲು
ಮನವು ಅರಳಿ ಹೊಸತನ ತರುತಿದೆ
ನನ್ನಲ್ಲಿ ನಿನ್ನಲ್ಲಿ ..
ಓ.. ನನ್ನಲ್ಲೀ ನಿನ್ನಲ್ಲಿ..
 
ಮುಗಿಲಿನಾ ಆಟಕೆ
ಮಿಂಚಿನಾ ಓಟಕೆ
ಗಗನ ಹೆದರಿ ನಡುಗಿದೆ ಗುಡುಗಿದೆ
ನಿನ್ನಂತೆ ನನ್ನಂತೆ..
ಓ..ನಿನ್ನಂತೇ ನನ್ನಂತೇ......
 
|| ಮುತ್ತಿನಾ ಹನಿಗಳು
ಸುತ್ತಲೂ ಮುತ್ತಲು….||
 
ಗಾಳಿಯೂ ಬೀಸಿದೆ
ಕಿವಿಯಲಿ ಹಾಡಿದೆ
ಈ ಹೆಣ್ಣು ಚೆನ್ನಾ ಗುಣದಲ್ಲಿ ಚಿನ್ನಾ
ಬಿಡಬೇಡವೆಂದಿದೆ...
ಆಆಆ.. ಆಹ್ಹಹ್ಹಾ ಆಹ್ಹಹ್ಹಾ ...
(ಆಆಆ) ಲಾಲಾಲಾ (ಲಾಲಾಲಾ) 
ಮಾತಿಗೆ ಸೋಲದೆ
ಆತುರಾ ತೋರದೆ
ನಿನ್ನಿಂದ ಇನ್ನು ದೂರಾಗು ಎಂದು
ಬಿರುಗಾಳಿ ನೂಕಿದೆ ..
ಏ..ಬಿರುಗಾಳಿ ನೂಕಿದೆ....
 
|| ಮುಗಿಲಿನಾ ಆಟಕೆ
ಮಿಂಚಿನಾ ಓಟಕೆ….||
 
ನೋಟದಾ ಮಿಂಚಿಗೆ
ಮಾತಿನಾ ಗುಡುಗಿಗೆ
ನಾನಂದು ಹೆದರಿ ಮೈಯೆಲ್ಲ
ಬೆವರಿ ಊರಾಚೆ ಓಡಿದೆ..
ಹೆಣ್ಣಿಗೆ ಹೆದರುವಾ
ಗಂಡಿನಾ ಶೌರ್ಯವಾ
ನಾನಂದು ಕಂಡೆ ಹುಡುಗಾಟಕೆಂದೆ
ದಿನವೆಲ್ಲ ಕಾಡಿದೆ..
ಏ..ದಿನವೆಲ್ಲ ಕಾಡಿದೆ....
 
|| ಮುಗಿಲಿನಾ ಆಟಕೆ
ಮಿಂಚಿನಾ ಓಟಕೆ
ಗಗನ ಹೆದರಿ ನಡುಗಿದೆ ಗುಡುಗಿದೆ
ನಿನ್ನಂತೆ ನನ್ನಂತೇ..
ಓ..ನಿನ್ನಂತೇ ನನ್ನಂತೇ...
 
ಮುತ್ತಿನಾ ಹನಿಗಳು
ಸುತ್ತಲೂ ಮುತ್ತಲು
ಮನವು ಅರಳಿ ಹೊಸತನ ತರುತಿದೆ
ನನ್ನಲ್ಲಿ ನಿನ್ನಲ್ಲಿ ..
ಓ.. ನನ್ನಲ್ಲೀ ನಿನ್ನಲ್ಲೀ..
ಆಹಾಹಾ ಆಹಾಹಾ...
ಹೂಂಹೂಂ ಹೂಂಹೂಂ….|| 
 

Mutthina Hanigalu song lyrics from Kannada Movie Bayasade Banda Bhagya starring Vishnuvardhan, Ramgopal, T N Balakrishna, Lyrics penned by R N Jayagopal Sung by S P Balasubrahmanyam, S Janaki, Music Composed by Rajan-Nagendra, film is Directed by R Ramamurthy and film is released on 1977