-
ಧಗೆ ಉರಿವ ಹಗಲಿನಲಿ ಹಸಿರು ಹುರುಕಳಿಸಿತ್ತು
ಉಸಿರಿಲ್ಲ ತಂಗಾಳಿಗೆ
ಧಗೆ ಉರಿವ ಹಗಲಿನಲಿ ಹಸಿರು ಹುರುಕಳಿಸಿತ್ತು
ಉಸಿರಿಲ್ಲ ತಂಗಾಳಿಗೆ
ಬಿಳಿಯ ಹಾಳೆಯ ಮೇಲೆ ಮಸಿಯ ಚೆಲ್ಲಿದ ಹಾಗೆ
ಒಂಟಿ ಮರ ಇಡಿ ಕಾಡಿಗೆ
ಬಿಳಿಯ ಹಾಳೆಯ ಮೇಲೆ ಮಸಿಯ ಚೆಲ್ಲಿದ ಹಾಗೆ
ಒಂಟಿ ಮರ ಇಡಿ ಕಾಡಿಗೆ
ಎಲೆಯಿರದ ಮರದಲ್ಲಿ ಒಂದೆ ಹೂವರಳಿತ್ತು
ಅನುಮಾನ ಕಣ್ಣಿನಲಿ
ಆ ಹೂವ ಪಕ್ಕದಲಿ ಮೂರುವರ್ಣದ ಹಕ್ಕಿ
ಬಲವಿಲ್ಲ ರೆಕ್ಕೆಯಲಿ
ಬಿರಿವ ಮೋಡದ ಒಳಗೆ ಹೊಳೆವ ಕೆಂಡದ ಹದ್ದು
ಹೊಂಚಿತ್ತು ಎರಗಲಿಕ್ಕೆ
ಸುಡುವ ಬಾನಲ್ಲೆ ಮಣ್ಣು ನೆರವಿನಲಿ ಕಾದಿತ್ತು
ಜೀವಗಳ ಹುರಿಯಲಿಕ್ಕೆ
ಕನಸು ಒಣಗಿದ ಕ್ಷಿತಿಜ ಕಲ್ಲಾಗಿ ಕೂತಿತ್ತು
ಕಣ್ಣಲ್ಲಿ ಜೀವ ಹಿಡಿದು
ಬಾನರೆಪ್ಪೆಯ ಮೇಲೆ ಕ್ಷಪಿತ ಬದುಕಿನ ಭಾರ
ಎಲ್ಲಿ ಇದೆ ಕೊನೆಯ ಬೆಳಕು
ಎಲ್ಲಿ ಇದೆ ಕೊನೆಯ ಬೆಳಕು
ಎಲ್ಲಿ ಇದೆ ಕೊನೆಯ ಬೆಳಕು
-
ಧಗೆ ಉರಿವ ಹಗಲಿನಲಿ ಹಸಿರು ಹುರುಕಳಿಸಿತ್ತು
ಉಸಿರಿಲ್ಲ ತಂಗಾಳಿಗೆ
ಧಗೆ ಉರಿವ ಹಗಲಿನಲಿ ಹಸಿರು ಹುರುಕಳಿಸಿತ್ತು
ಉಸಿರಿಲ್ಲ ತಂಗಾಳಿಗೆ
ಬಿಳಿಯ ಹಾಳೆಯ ಮೇಲೆ ಮಸಿಯ ಚೆಲ್ಲಿದ ಹಾಗೆ
ಒಂಟಿ ಮರ ಇಡಿ ಕಾಡಿಗೆ
ಬಿಳಿಯ ಹಾಳೆಯ ಮೇಲೆ ಮಸಿಯ ಚೆಲ್ಲಿದ ಹಾಗೆ
ಒಂಟಿ ಮರ ಇಡಿ ಕಾಡಿಗೆ
ಎಲೆಯಿರದ ಮರದಲ್ಲಿ ಒಂದೆ ಹೂವರಳಿತ್ತು
ಅನುಮಾನ ಕಣ್ಣಿನಲಿ
ಆ ಹೂವ ಪಕ್ಕದಲಿ ಮೂರುವರ್ಣದ ಹಕ್ಕಿ
ಬಲವಿಲ್ಲ ರೆಕ್ಕೆಯಲಿ
ಬಿರಿವ ಮೋಡದ ಒಳಗೆ ಹೊಳೆವ ಕೆಂಡದ ಹದ್ದು
ಹೊಂಚಿತ್ತು ಎರಗಲಿಕ್ಕೆ
ಸುಡುವ ಬಾನಲ್ಲೆ ಮಣ್ಣು ನೆರವಿನಲಿ ಕಾದಿತ್ತು
ಜೀವಗಳ ಹುರಿಯಲಿಕ್ಕೆ
ಕನಸು ಒಣಗಿದ ಕ್ಷಿತಿಜ ಕಲ್ಲಾಗಿ ಕೂತಿತ್ತು
ಕಣ್ಣಲ್ಲಿ ಜೀವ ಹಿಡಿದು
ಬಾನರೆಪ್ಪೆಯ ಮೇಲೆ ಕ್ಷಪಿತ ಬದುಕಿನ ಭಾರ
ಎಲ್ಲಿ ಇದೆ ಕೊನೆಯ ಬೆಳಕು
ಎಲ್ಲಿ ಇದೆ ಕೊನೆಯ ಬೆಳಕು
ಎಲ್ಲಿ ಇದೆ ಕೊನೆಯ ಬೆಳಕು
Dhage Uriva Hagalinali song lyrics from Kannada Movie Avasthe starring Ananthnag, M P Prakash, M Bhakthavathsala, Lyrics penned by Chandrashekhara Kambara Sung by B R Chaya, Music Composed by Vijaya Bhaskar, film is Directed by Krishna Masadi and film is released on 1987