ಮುಖಪುಟದ ಪರದೆಯ ಸರಿಸಿ
ಹೊಸನೋಟಕೆ ಸೂಚನೆ
ಈ ಜನುಮಕೆ ಬಂಧವ ತೊಡಿಸೊ
ಮಾಂಗಲ್ಯ ಧಾರಣೆ
ಸಂತಾನಕೆ ಶುಭವನು ಹರಸಿ
ಕಾಲುಂಗುರ ಅರ್ಪಣೆ
ಹೆಜ್ಜೆಯ ಸಂಕಲ್ಪವ ತಿಳಿಸೊ
ಸಪ್ತಪದಿ ಪ್ರಾರ್ಥನೆ
ನೋಟಗಳು ತಾನೆ
ಮೌನದ ಭಾಷೆಗಳೇನೆ
ಸ್ಪರ್ಶಗಳು ತಾನೆ
ಮನಸಿನ ಭಾವಗಳೇನೆ
ಕೇಳಲೆ ನನ್ನಲೆ ನಾನೆ
ಪ್ರಶ್ನೆಗೆ ಉತ್ತರವೇನೆ
ಹೊಸಥರ ತಂದ ತವಕಗಳ
ಕಾರಣವು ನೀನೆ
ಕಾಲ್ಬೆರಳಲಿ ಬಂದ ಬರಹಗಳ
ತಿಳಿಸಲೆ ನಾನೆ
ಈ ನೋಟದಲ್ಲೆ ಏನೊ ತಿಳಿಯುತ್ತಿದೆ
ಈ ಸ್ಪರ್ಶದಲ್ಲೆ ಏನೊ ತಿಳಿಸುತ್ತಿದೆ
ಈ ಕಲಿಕೆ ನಡುವೆಯಲು ನೂರು ಪ್ರಶ್ನೆಗಳ
ಸಾಲುಗಳು ನೀನೆ
ನೀ ಬಳಿಗೆ ಬರಲು ಮೈ ಬೆವರುತಿದೆ
ನೀ ಮುನಿಸಿಕೊಳ್ಳಲು ಕೈ ಮುದುಡುತಿದೆ
ಈ ಭಯದ ನಡುವೆಯಲು ಬೆರಳ ತಣಿಕೆಗಳ
ಅರಿಯನು ನಾನೆ
ಬಿಸಿಲ ಸ್ಪರ್ಶವಾಗದೆ
ಮೊಗ್ಗು ಅರಳಲಾಗದು
ಮಂಜು ಸರಿದು ಹೋಗದೆ
ತಾರೆ ಸ್ಪಷ್ಟವಾಗದು
ನೀನು ಸನಿಹವಿಲ್ಲದೆ
ದಿನವೆ ಪೂರ್ತಿಯಾಗದು
ನಿನ್ನ ಮಾತ ಕೇಳದೆ
ಕಾಲವೇ ಜಾರದು
ಕ್ಷಮಿಸು ನನ್ನನ ತಬ್ಬಿದೆ ಆ ದಿನ
ಹೇಳದೆ ಕಾರಣ ಸೋಲಲೆ ಈ ದಿನ
ಕುಂಕುಮ ಲಕ್ಷಣ ನೀನಿಟ್ಟ ಆ ಕ್ಷಣ
ತಾಳಿಯ ಒಡೆಯ ನೀನೇನೆ ಕೇಳೆಯಾ
ದೇವರ ನಾ ಬೇಡದೆ ವರವಾದೆ ನೀ
||ನೋಟಗಳು ತಾನೆ
ಮೌನದ ಭಾಷೆಗಳೇನೆ
ಕೇಳಲೆ ನನ್ನಲೆ ನಾನೆ
ಹೊಸಥರ ತಂದ ತವಕಗಳ
ಕಾರಣವು ನೀನೆ
ಬಿಸಿಲಲ್ಲಿ ಸೇರೊ
ನೆರಳದು ನೀನೇನೆ
ಮಳೆಯಲು ಕಾಡೊ
ಹನಿಯಲು ನೀನೆ ತಾನೆ||
ಮುಖಪುಟದ ಪರದೆಯ ಸರಿಸಿ
ಹೊಸನೋಟಕೆ ಸೂಚನೆ
ಈ ಜನುಮಕೆ ಬಂಧವ ತೊಡಿಸೊ
ಮಾಂಗಲ್ಯ ಧಾರಣೆ
ಸಂತಾನಕೆ ಶುಭವನು ಹರಸಿ
ಕಾಲುಂಗುರ ಅರ್ಪಣೆ
ಹೆಜ್ಜೆಯ ಸಂಕಲ್ಪವ ತಿಳಿಸೊ
ಸಪ್ತಪದಿ ಪ್ರಾರ್ಥನೆ
ನೋಟಗಳು ತಾನೆ
ಮೌನದ ಭಾಷೆಗಳೇನೆ
ಸ್ಪರ್ಶಗಳು ತಾನೆ
ಮನಸಿನ ಭಾವಗಳೇನೆ
ಕೇಳಲೆ ನನ್ನಲೆ ನಾನೆ
ಪ್ರಶ್ನೆಗೆ ಉತ್ತರವೇನೆ
ಹೊಸಥರ ತಂದ ತವಕಗಳ
ಕಾರಣವು ನೀನೆ
ಕಾಲ್ಬೆರಳಲಿ ಬಂದ ಬರಹಗಳ
ತಿಳಿಸಲೆ ನಾನೆ
ಈ ನೋಟದಲ್ಲೆ ಏನೊ ತಿಳಿಯುತ್ತಿದೆ
ಈ ಸ್ಪರ್ಶದಲ್ಲೆ ಏನೊ ತಿಳಿಸುತ್ತಿದೆ
ಈ ಕಲಿಕೆ ನಡುವೆಯಲು ನೂರು ಪ್ರಶ್ನೆಗಳ
ಸಾಲುಗಳು ನೀನೆ
ನೀ ಬಳಿಗೆ ಬರಲು ಮೈ ಬೆವರುತಿದೆ
ನೀ ಮುನಿಸಿಕೊಳ್ಳಲು ಕೈ ಮುದುಡುತಿದೆ
ಈ ಭಯದ ನಡುವೆಯಲು ಬೆರಳ ತಣಿಕೆಗಳ
ಅರಿಯನು ನಾನೆ
ಬಿಸಿಲ ಸ್ಪರ್ಶವಾಗದೆ
ಮೊಗ್ಗು ಅರಳಲಾಗದು
ಮಂಜು ಸರಿದು ಹೋಗದೆ
ತಾರೆ ಸ್ಪಷ್ಟವಾಗದು
ನೀನು ಸನಿಹವಿಲ್ಲದೆ
ದಿನವೆ ಪೂರ್ತಿಯಾಗದು
ನಿನ್ನ ಮಾತ ಕೇಳದೆ
ಕಾಲವೇ ಜಾರದು
ಕ್ಷಮಿಸು ನನ್ನನ ತಬ್ಬಿದೆ ಆ ದಿನ
ಹೇಳದೆ ಕಾರಣ ಸೋಲಲೆ ಈ ದಿನ
ಕುಂಕುಮ ಲಕ್ಷಣ ನೀನಿಟ್ಟ ಆ ಕ್ಷಣ
ತಾಳಿಯ ಒಡೆಯ ನೀನೇನೆ ಕೇಳೆಯಾ
ದೇವರ ನಾ ಬೇಡದೆ ವರವಾದೆ ನೀ
||ನೋಟಗಳು ತಾನೆ
ಮೌನದ ಭಾಷೆಗಳೇನೆ
ಕೇಳಲೆ ನನ್ನಲೆ ನಾನೆ
ಹೊಸಥರ ತಂದ ತವಕಗಳ
ಕಾರಣವು ನೀನೆ
ಬಿಸಿಲಲ್ಲಿ ಸೇರೊ
ನೆರಳದು ನೀನೇನೆ
ಮಳೆಯಲು ಕಾಡೊ
ಹನಿಯಲು ನೀನೆ ತಾನೆ||
Notagalu song lyrics from Kannada Movie Arjuna Sanyasi starring C C Rao, Soundarya Gowda, Abhinaya, Lyrics penned by Anuranjan H R Sung by Shakthisree Gopalan, Music Composed by K Hemanth Kumar, film is Directed by Eshwar Polanki and film is released on 2022