ಎಷ್ಟೊ ಮಾತು ಉಳಿದಿರುವಾಗ ಮೌನವೆ ತುಂಬಿದೆ ಏಕೆ
ಎಂದು ನಾನು ಜೊತೆಗಿರುವಾಗ ಚಿಂತೆಯ ಭಾರವು ಬೇಕೆ
ಈ ಹುಡುಕಾಟದ ಹೊಣೆ ನನ್ನದು ನನ್ನ ಸುಮ್ಮನೆ ನಂಬಿ ಬಿಡು
ಆತಂಕವ ದೂರಕೆ ಸರಿಸಿ ನನ್ನ ತೋಳಲ್ಲಿ ಉಳಿದುಬಿಡು
ನಗುವುದು ನೀ ಮರೆತಿರಲು ಮುಂದಕೆ ಸಾಗದು ಈ ದಾರಿ
ನನ್ನ ಕೈಬಿಗಿ ಹಿಡಿಯಲು ನೀನು ಕೂಗಿ ಹೇಳುವೆನು ಸಾರಿ
ಆ ಕಣ್ಣು ಕೇಳಿರುವ ಎಲ್ಲ ಪ್ರಶ್ನೆಗೆ ಹುಡುಕಿ ತರುವೆನು ಉತ್ತರ
ಆಣೆ ಮಾಡುವೆ ಎಂದು ಒಡೆಯದು ನಿನ್ನ ಆಶಾಗೋಪುರ
ಕಲ್ಲುಮುಳ್ಳಿನ ಹಾದಿ ಇದು ನನ್ನ ಸ್ನೇಹವೆ ಸಾಂತ್ವಾನ
ತೀರದ ಕಾಳಜಿ ನನಗೆ ನಿನ್ನಲಿ ಕಾರಣ ತಿಳಿಯೆನು ನಾ
ಈ ಒಲವು ಸರಿಯೇ ಎಂಬ ಪ್ರಶ್ನೆಗೆ ಮನಸ್ಸಿದು ಮನ್ನಣೆ ನೀಡುತ್ತಿದೆ
ತರ್ಕಕು ಮೀರಿದ ಭಾವನೆ ಪ್ರೀತಿ ಎನ್ನುತ ಮುನ್ನಡೆ ಪಡೆಯುತಿದೆ
ಕತ್ತಲು ತುಂಬಿದ ಕೋಟೆಯಲಿ ನೀ ಹಣತೆಯ ಪ್ರತಿರೂಪ
ಜೊತೆಯಲಿ ನೀನು ನಡೆದಿರಲು ಎಡವುವುದು ಅಪರೂಪ
ಈ ಹುಡುಕಾಟದ ಹೊಣೆ ನಿನ್ನದು ನಿನ್ನನೆ ನಾನು ನಂಬಿರುವೆ
ಆತಂಕವ ದೂರಕೆ ಸರಿಸು ನಿನ್ನ ತೋಳಲ್ಲಿ ನಾ ಇರುವೆ

Eshto Mathu Ulidiruvaga song lyrics from Kannada Movie Aadhya starring Bharath Gowda, Gouthami Jadhav, Neelan Reddy, Lyrics penned by Kishan Badrinath Sung by Deepak Doddera, Anuradha Bhat, Music Composed by Jeevan Reddy, film is Directed by Vinod Kumar J and film is released on 2015