ಏಕಾಂತ ಇಂದು ಜೊತೆಯಾಗಿದೆ
ಏಕಾಂಗಿ ಪಯಣ ಸಾಕಾಗಿದೆ
ಈ ನನ್ನ ಬದುಕಿನಲ್ಲಿ
ಕವಿದಿದೆ ಗಾಢಮೌನ
ಈ ಕಣ್ಣ ಹನಿಗಳಲ್ಲಿ
ಕರಗಿದೆ ವರ್ತಮಾನ
ಉತ್ತರ ಇಲ್ಲದ ಪ್ರಶ್ನೆಯು ಮುಂದಿದೆ
ತಂಗಾಳಿ ತರುವ ಹೂವಂಥ ಸ್ಪರ್ಶ
ಇಂದೇತಕೆ ಮುಳ್ಳಾಗಿದೆ?
ತಂಪನು ಸುರಿವ ಮಳೆಯ ಹನಿಯು
ಸುಡುವ ತಾಪ ತಂದಿದೆ,
ಕಂಪನು ಹರಡೊ ಹೂವು ಇಂದು
ವಿಷದ ನಶೆಯ ತಂದಿದೆ.
ಅದು ನನಗೆಂದೆಅದು ನನಗೆಂದೆ
ಋತುಮಾನವೆ ಈ ದಿನ ಮುನಿದಿದೆ
ಈ ಆರ್ತನಾದ ಕೇಳಲೆಂದೆ
ಸಲ್ಲಾಪದಿಂದ ಸಂತೈಸುವಂಥ
ಸಂಗಾತಿಗೆ ಏನಾಗಿದೆ?
ಕಟ್ಟಿದ ಕನಸು ಹಾಗೆ ಉಳಿದು
ಮನಸು ಒಡೆದು ಹೋಗಿದೆ
ಬಯಸಿದ ಬಯಕೆ ಭ್ರಮೆಯಾಗಿರಲು
ಬದುಕು ಬಿರುಕ ಕಂಡಿದೆ
ಬಳಲಿ ಬೆಂದೆ ಬಳಲಿ ಬೆಂದೆ
ಈ ವೇದನೆ ತಾಳಲು ಆಗದೆ
ಈ ಹಾಡಿನಲ್ಲೆ ತೋಡಿಕೊಂಡೆ
ಏಕಾಂತ ಇಂದು ಜೊತೆಯಾಗಿದೆ
ಏಕಾಂಗಿ ಪಯಣ ಸಾಕಾಗಿದೆ
ಈ ನನ್ನ ಬದುಕಿನಲ್ಲಿ
ಕವಿದಿದೆ ಗಾಢಮೌನ
ಈ ಕಣ್ಣ ಹನಿಗಳಲ್ಲಿ
ಕರಗಿದೆ ವರ್ತಮಾನ
ಉತ್ತರ ಇಲ್ಲದ ಪ್ರಶ್ನೆಯು ಮುಂದಿದೆ
ತಂಗಾಳಿ ತರುವ ಹೂವಂಥ ಸ್ಪರ್ಶ
ಇಂದೇತಕೆ ಮುಳ್ಳಾಗಿದೆ?
ತಂಪನು ಸುರಿವ ಮಳೆಯ ಹನಿಯು
ಸುಡುವ ತಾಪ ತಂದಿದೆ,
ಕಂಪನು ಹರಡೊ ಹೂವು ಇಂದು
ವಿಷದ ನಶೆಯ ತಂದಿದೆ.
ಅದು ನನಗೆಂದೆಅದು ನನಗೆಂದೆ
ಋತುಮಾನವೆ ಈ ದಿನ ಮುನಿದಿದೆ
ಈ ಆರ್ತನಾದ ಕೇಳಲೆಂದೆ
ಸಲ್ಲಾಪದಿಂದ ಸಂತೈಸುವಂಥ
ಸಂಗಾತಿಗೆ ಏನಾಗಿದೆ?
ಕಟ್ಟಿದ ಕನಸು ಹಾಗೆ ಉಳಿದು
ಮನಸು ಒಡೆದು ಹೋಗಿದೆ
ಬಯಸಿದ ಬಯಕೆ ಭ್ರಮೆಯಾಗಿರಲು
ಬದುಕು ಬಿರುಕ ಕಂಡಿದೆ
ಬಳಲಿ ಬೆಂದೆ ಬಳಲಿ ಬೆಂದೆ
ಈ ವೇದನೆ ತಾಳಲು ಆಗದೆ
ಈ ಹಾಡಿನಲ್ಲೆ ತೋಡಿಕೊಂಡೆ