Yaamaride Hrudaya Lyrics

in Tootu Madike

Video:

LYRIC

ಯಾಮಾರಿದೆ ಹೃದಯ ಈ ಹುಡುಗಿಯ ಸೆಳೆತಕೆ
ವಾಲುತಿದೆ ಹರೆಯ ಇವಳ ಕಡೆಗೆ
ಏಕೊ ಬಂದಿದೆ ಪ್ರೀತಿಯ ಜ್ವರ
ಇವಳ ಕಡೆಗೆ ಹೃದಯದ ನಡಿಗೆ
ಮತ್ತೆ ಮತ್ತೆ ಮಧುರ ಸ್ವರ ಎದೆಯ ಒಳಗೆ
ನಿನ್ನನ್ನು ನೋಡುವಾಸೆ ಏನೇನೊ ಹೇಳುವಾಸೆ
ಹೆಸರಿಡಿದು ಕೂಗುವಾಸೆ
ನಿನ್ನ ಹಿಂದೆ ನಾನು ದಿನವೂ ಬರುವೆ
ಏನನ್ನೊ ನೀಡುವಾಸೆ ಮತ್ತೊಮ್ಮೆ ನೋಡುವಾಸೆ
ಮನಸ್ಸಾರ ಅಪ್ಪುವಾಸೆ ತೋಳಲ್ಲೆ ತಬ್ಬುವಾಸೆ
 
ಅಪ್ಸರೆಯು ಬಂದಳು ಜೋಪಡಿಯ ಎದೆಯೊಳಗೆ
ಕನಸುಗಳ ಉತ್ಸವ ಸ್ವರ್ಗವೆ  ಕಣ್ಣಮುಂದೆ
ದಿನವೆಲ್ಲ ಹಬ್ಬವು ಇವಳೆಂದರೆ ಸಡಗರವು
ಬದಲಾಗಿದೆ ಭಾವನೆ ಮಾತಲಿ ಹೇಳಲಾರೆ
ಹತ್ರ ಹೋಗಲು ಭಯ ಆಗಿದೆ
ದೂರ ನಿಲ್ಲಲು ವೇದನೆಯು
ಮಾತು ಆಡಲು ಮನಸ್ಸು ಕಾದಿದೆ
ಮಾತೆ ಬಾರದು ಮುಜುಗರ ಕೇಳೆ
ಕಣ್ಣಲ್ಲೆ ಮುಟ್ಟುವಾಸೆ ಕಲಿತಾಯ್ತು ನಿನ್ನ ಭಾಷೆ
ಬದಲಾಯ್ತು ನನ್ನ ವರಸೆ
ನೀನು ಅಂದ್ರೆ ನಂಗೆ ಯಾಕೊ ಇಷ್ಟ

ಹೇಳುವೆ ಮಾತು ನೂರು
ಕೇಳು ನೀ ಒಂದು ಚೂರು
ಮಾಡುವೆ ಪ್ರೀತಿ ಜೋರು
ಬಂದು ನೀ ನನ್ನ ಸೇರೆ
ಏಏ  ಬಿದ್ದಂಗಾಗಿದೆ ಎದ್ದಂಗಾಗಿದೆ
ಕಾಣೆಯಾದೆನು ನನ್ನೊಳಗೆ
ಸುಮ್ಮನೆ ಇದ್ದರು ಮನಸ್ಸು ನಕ್ಕಿದೆ
ಲೂಸಾಗೋದೆನು ಯಾಕೆ ಹಿಂಗೆ
ಜೊತೆಯಲ್ಲೆ ನಡೆಯೊ ಆಸೆ
ಜೊತೆ ಜೊತೆಗೆ ಇರುವ ಆಸೆ
ಮುದ್ದನ್ನು ಮಾಡುವಾಸೆ
ನೀನು ಅಂದ್ರೆ ನಂಗೆ ಯಾಕೊ ಇಷ್ಟ
ನನ್ನನ್ನೆ ನೀಡುವಾಸೆ ಮತ್ತೊಮ್ಮೆ ನೋಡುವಾಸೆ
ಮನಸ್ಸಾರ ಅಪ್ಪುವಾಸೆ
ನಿನ್ನ ಬಿಟ್ಟು ಬದುಕು ನಂಗೆ ಕಷ್ಟ