Neenaade Neenaade Lyrics

in Soundarya Nilaya

Video:

LYRIC

ಕಣ್ಣಿನಲ್ಲಿ ನಿನ್ನ ಬಿಂಬ ತುಂಬಿಕೊಂಡಿದೆ
ಮೌನದಲ್ಲು ನಿನ್ನ ಮಾತು ಕೇಳುವಂತಿದೆ
ತಂಗಾಳಿಯಲ್ಲಿ ಚೆಂದ ಹಾಡು ಬೀಸಿ ಬಂದಿದೆ
ನಿನ್ನಂದ ಚೆಂದವೆಲ್ಲ ನನ್ನ ಸ್ವಂತವಾಗಿದೆ
ನೀನಾದೆ ನೀನಾದೆ ಜೀವಕ್ಕೂ ಹತ್ತಿರ
ನಿನ್ನಿಂದ ಈ ಬಾಳು ಇನ್ನಷ್ಟು ಸುಂದರ
ಸಂಗಾತಿ ನೀನೆ ನನ್ನ ಬಾಳ ಪ್ರೇಮದೇವತೆ
ನೀ ಗೀಚೊ ಹಾಳೆ ಮೇಲೆ ನಾನು ಪ್ರೇಮಕವಿತೆ
 
ಹಾರೊ ಆಸೆ ನಿನ್ನ ಕೂಡಿ ಜೋಡಿಯಾಗುತ
ಬಿಟ್ಟು ಬಾಳೊ ಧೈರ್ಯವಿಲಲ ನಿನ್ನ ವಿನಹ
ಅಂಗೈಯ್ಯ ರೆಕ್ಕೆ ಕೂಡಿದಂತೆ ಕೂಡಿ ಬಾಳೋಣ
ಆಕಾಶಕ್ಕೆಲ್ಲ ನಮ್ಮ ಪ್ರೇಮ ಪಾಠ ಹೇಳೋಣ
ನೀನಾದೆ ನೀನಾದೆ ಜೀವಕ್ಕೆ ಹತ್ತಿರ
ನಿನ್ನಿಂದ ಈ ಬಾಳು ಇನ್ನಷ್ಟು ಸುಂದರ
ನೀ ಸಾಗೊ ದಾರಿಯಲ್ಲೆ ನನ್ನ ಹೆಜ್ಜೆಗುರುತು
ಮಾತಾಡಿಕೊಳ್ಳಬೇಕು ಲೋಕ ನಮ್ಮ ಕುರಿತು
 
ನೋವಿನಲಿ ನಾನು ನಿನ್ನ ಪಾಲುದಾರನು
ನಕ್ಕರಷ್ಟೆ ಸಾಕು ಬೇರೆ ಏನು ಕೇಳೆನು
ಸಾವೆ ಆದರೂನು ನಮ್ಮ ದೂರ ಮಾಡದು
ಯಾವ ಕಾಲದಲ್ಲು ಒಂದೆ ನಮ್ಮ ಮಾತಿದು
ನೀನಾದೆ ನೀನಾದೆ ಜೀವಕ್ಕೆ ಹತ್ತಿರ
ನಿನ್ನಿಂದ ಈ ಬಾಳು ಇನ್ನಷ್ಟು ಸುಂದರ
ನನ್ನ ಭಾವಗುಚ್ಚವೆಲ್ಲ ನಿಂಗೆ ಅಂಕಿತ
ಕನಸ್ಸಲ್ಲು ಕರಗೋ ಮೋಹ ಆಸೆ ನಿನ್ನ ಕಾಣುತ
ನೀನಾದೆ ನೀನಾದೆ ಜೀವಕ್ಕೂ ಹತ್ತಿರ
ನಿನ್ನಿಂದ ಈ ಬಾಳು ಇನ್ನಷ್ಟು ಸುಂದರ
ನನ್ನ ಭಾವಗುಚ್ಚವೆಲ್ಲ ನಿಂಗೆ ಅಂಕಿತ
ಕನಸ್ಸಲ್ಲು ಕರಗೋ ಮೋಹ ಆಸೆ ನಿನ್ನ ಕಾಣುತ

Neenaade Neenaade song lyrics from Kannada Movie Soundarya Nilaya starring Abhinayashree, Bullet Prakash,, Lyrics penned by Bharath Sung by Santhosh, Supritha, Music Composed by Danial Kiran, film is Directed by C Gurumurthy and film is released on 2017