ಇರುಳ ಚಂದಿರನ ಬೆಳಕ ಬೆರಳುಗಳು
ಸರಳ ಸುಂದರೆಯ ಕೊರಳ ಮೇಲೆ ಬಿತ್ತೆ
ಅರಳು ಮಲ್ಲಿಗೆಯ ಮುಖದಿ ಕುರುಳುಗಳು
ನೆರಳ ಸುರಿದಾಗ ಮರಳು ಮೂಗು ನತ್ತೆ
ಬಲು ಭಾರ ಪ್ರಾಯದೊಡವೆ ಅದಕೇಕೆ ಚಿನ್ನದೊಡವೆ
ನನ್ನ ವಿರಹನೀಗು ಚೆಲುವೆ ಹುಸಿನಗುವ ನಿಂಗೆ ತರವೆ
ಮಧುರ ಮಧುರ ಸುಖವ ಸೆಳೆವ ಭ್ರಮರ
ನಿನ್ನ ಪಾದದ ಕಿರುಗೆಜ್ಜೆಯು ಘಲಿರೆಂದು ನುಡಿವ ಸಮಯ
ಹೊಸಮಿಂಚಿನ ಸಂಚಾರದೆ ಉಲ್ಲಾಸವಾಯ್ತು ಹೃದಯ
ನಡೆವಾಗ ನೀ ನದಿಯಾಗುತ ಬಳುಕಾಡೊ ಅಲೆಯ ನಡುವು
ಎದೆಕಡಲಿದು ಮರುಳಾಗಿದೆ ಒಳಗೊಳಗೆ ಏನೊ ಗೆಲುವು
ಹೊಸ ಬಾಳಿನ ನಡೆಗೆ ಜೊತೆಯಾದೆನೆ ನನಗೆ
ಚೆಲುವೆ ಚೆಲುವೆ ಲಲನಾಮಣಿಯೆ ಗಿಣಿಯೆ
ಅನುಗಾಲವು ಅನುರಾಗದ ಅನುಬಂಧ ಬೆಸುಗೆ ನಮ್ಮದು
ಸಹನಾಮಣಿ ಸಹಧರ್ಮಿಣಿ ಅಪರೂಪ ಸುಗುಣ ನಿನ್ನದು
ಇಹದಲ್ಲಿಯು ಪರದಲ್ಲಿಯು ಬಿಡದಂತೆ ಬೆರಳು ಹಿಡಿವೆ
ಪತಿಧರ್ಮದ ಪಥದಲ್ಲಿ ನೆರಳನ್ನು ನಾನು ಕೊಡುವೆ
ಬೆಳಗಾಗುವ ತನಕ ಮಾರ್ಮೊಳಗಲಿ ಪುಳಕ
ಚೆಲುವೆ ಚೆಲುವೆ ಸುಖದ ಅಮಲು ಕೊಳವೆ
ಇರುಳ ಚಂದಿರನ ಬೆಳಕ ಬೆರಳುಗಳು
ಸರಳ ಸುಂದರೆಯ ಕೊರಳ ಮೇಲೆ ಬಿತ್ತೆ
ಅರಳು ಮಲ್ಲಿಗೆಯ ಮುಖದಿ ಕುರುಳುಗಳು
ನೆರಳ ಸುರಿದಾಗ ಮರಳು ಮೂಗು ನತ್ತೆ
ಬಲು ಭಾರ ಪ್ರಾಯದೊಡವೆ ಅದಕೇಕೆ ಚಿನ್ನದೊಡವೆ
ನನ್ನ ವಿರಹನೀಗು ಚೆಲುವೆ ಹುಸಿನಗುವ ನಿಂಗೆ ತರವೆ
ಮಧುರ ಮಧುರ ಸುಖವ ಸೆಳೆವ ಭ್ರಮರ
ನಿನ್ನ ಪಾದದ ಕಿರುಗೆಜ್ಜೆಯು ಘಲಿರೆಂದು ನುಡಿವ ಸಮಯ
ಹೊಸಮಿಂಚಿನ ಸಂಚಾರದೆ ಉಲ್ಲಾಸವಾಯ್ತು ಹೃದಯ
ನಡೆವಾಗ ನೀ ನದಿಯಾಗುತ ಬಳುಕಾಡೊ ಅಲೆಯ ನಡುವು
ಎದೆಕಡಲಿದು ಮರುಳಾಗಿದೆ ಒಳಗೊಳಗೆ ಏನೊ ಗೆಲುವು
ಹೊಸ ಬಾಳಿನ ನಡೆಗೆ ಜೊತೆಯಾದೆನೆ ನನಗೆ
ಚೆಲುವೆ ಚೆಲುವೆ ಲಲನಾಮಣಿಯೆ ಗಿಣಿಯೆ
ಅನುಗಾಲವು ಅನುರಾಗದ ಅನುಬಂಧ ಬೆಸುಗೆ ನಮ್ಮದು
ಸಹನಾಮಣಿ ಸಹಧರ್ಮಿಣಿ ಅಪರೂಪ ಸುಗುಣ ನಿನ್ನದು
ಇಹದಲ್ಲಿಯು ಪರದಲ್ಲಿಯು ಬಿಡದಂತೆ ಬೆರಳು ಹಿಡಿವೆ
ಪತಿಧರ್ಮದ ಪಥದಲ್ಲಿ ನೆರಳನ್ನು ನಾನು ಕೊಡುವೆ
ಬೆಳಗಾಗುವ ತನಕ ಮಾರ್ಮೊಳಗಲಿ ಪುಳಕ
ಚೆಲುವೆ ಚೆಲುವೆ ಸುಖದ ಅಮಲು ಕೊಳವೆ
Irula Chandirana song lyrics from Kannada Movie Ramadhanya starring Yashas Surya, Nimika Rathnakar,, Lyrics penned by V Nagendra Prasad Sung by Siddharth Belmannu, Music Composed by Desi Mohan, film is Directed by T N Nagesh and film is released on 2018