Male Moda Lyrics

in Railway Children

LYRIC

-
ಮೇಲೆ ಮಳೆಮೋಡ ಅದರಾಚೆ ಆಕಾಶ
ಹಾರೋಣ ರೆಕ್ಕೆ ಬಿಚ್ಚಿ ನೀಲಿ ಬಾನಾಚೆ
ಮೋಡದ ಮಳೆಯಿಂದ ಬೆಳಕಿನ ಸೆಳೆಯೊಂದು
ಬಾ ಎಂದು ಕರೆದಿದೆ ನಮ್ಮ ಕನಸ್ಸಿನ ಲೋಕಕ್ಕೆ
 
ಕಷ್ಟನೊ ಇಷ್ಟನೊ ನಡೆಯೋನೆ ಎಡವೋನು
ಸೋಲೇನು ಗೆಲುವೇನು ನುಗ್ಗು ನೀನದರಾಚೆ
ಹೋರಾಡೊ ಛಲವಿದ್ರೆ ಮುನ್ನಡೆಯೊ ಆಸೆ ನಿನಗಿದ್ರೆ
ಬಿಡು ಹಿಂಜರಿಕೆ ಬಿಡು ಹಿಂಜರಿಕೆ ನೀ ಗೆದ್ದೆ ಗೆಲುವೆ
ಹಾವು ಏಣಿ ಆಟದಿ ನೀ ಅಂಜಿಕೆ ಇಲ್ಲದೆ ಮುನ್ನಡೆ
ನೀ ಗೆದ್ದಾಗ ಸಿಡಿದೆದ್ದಾಗ ಜಗ ನಿನ್ನೆಡೆಗೆ
ಬಾರೊಇ ಬಾರೊ ಓ ಗೆಳೆಯ ಕನಸ್ಸಿನ ಪುಟಕ್ಕೆ ಬಣ್ಣ ಹಚ್ಚೋಣ
 
||ಮೇಲೆ ಮಳೆಮೋಡ ಅದರಾಚೆ ಆಕಾಶ
ಹಾರೋಣ ರೆಕ್ಕೆ ಬಿಚ್ಚಿ ನೀಲಿ ಬಾನಾಚೆ
ಮೋಡದ ಮಳೆಯಿಂದ ಬೆಳಕಿನ ಸೆಳೆಯೊಂದು
ಬಾ ಎಂದು ಕರೆದಿದೆ ನಮ್ಮ ಕನಸ್ಸಿನ ಲೋಕಕ್ಕೆ||
 
ಹೂ ಒಂದು ಅರಳಿದೆ ಹೊಂಗನಸೊಂದು ಮೂಡಿದೆ
ಈ ಬದುಕಲ್ಲಿ ಹೊಸಬೆಳಕಿನೊಂದು ಕಿರಣವ ಚೆಲ್ಲಿ
ಒಂದಾಗಿ ನಡೆದರೆ ನಾವೆಮದು ತಲೆಯ ಬಾಗೆವು
ನೀ ನಡೆ ಮುಂದೆ ನಡೆ ನಡೆ ಮುಂದೆ ಜಗವ ನಿಂದೆ
ಏರು ಮೇಲೇರಿ ಚುಕ್ಕಿಯಂತೆ ಬೆಳೆದು ನೀರವ ರಾತ್ರಿಯಲಿ ಮಿನುಗು
 
||ಮೇಲೆ ಮಳೆಮೋಡ ಅದರಾಚೆ ಆಕಾಶ
ಹಾರೋಣ ರೆಕ್ಕೆ ಬಿಚ್ಚಿ ನೀಲಿ ಬಾನಾಚೆ||

Male Moda song lyrics from Kannada Movie Railway Children starring Manohara K, Yash Shetty,, Lyrics penned by Vishnumoorthy Prabhu Sung by Chandan Shetty, Music Composed by Chandan Shetty, film is Directed by Pruthvi Konanuru and film is released on 2017
Singers:

Chandan Shetty

Director:

Pruthvi Konanuru

Music Director:

Chandan Shetty