ಜೋಡಿ ಹಕ್ಕಿಯ ಗೂಡನು
ಕೂಡಿ ಹಾಡಿದ ಹಾಡನು
ಜೋಡಿ ಹಕ್ಕಿಯ ಗೂಡನು
ಕೂಡಿ ಹಾಡಿದ ಹಾಡನು
ಮರೆತೆಯ ಆ ದಿನವನು
ಬಾಳಿನ ಸವಿದನಿಯನು
ಮನದಾಲದ ನೋವನು
ಜೀವದ ಗೆಳತಿಯೆ ತಾಳೆನು
ಬರುವೆಯ ಜೊತೆಗಿರುವೆಯ
ಬಾಳಿಗೆ ಸವಿ ತರುವೆಯ
ಯಾವ ಕಾರಣ ತಿಳಿಯೆನು
ಕದಡಿದೆ ನೀರಿನ ತಿಳಿಯನು
ಯಾವ ಕಾರಣ ತಿಳಿಯೆನು
ಕದಡಿದೆ ನೀರಿನ ತಿಳಿಯನು
ಮರೆತೆಯ ಆ ದಿನವನು
ಬಾಳಿನ ಸವಿದನಿಯನು
ಸಂಸಾರ ತೇಯುವ ಚಂದನ
ರಾಜಿ ಸುಖದ ಸಾಧನ
ಇರುಳಿದು ತಿಳಿಯಾಗದೆ
ಆಸೆಯ ಕುಡಿ ಮೂಡದೆ
ಬಾಳಯಾನಕ್ಕೆ ನಾನು ನೀನು
ಕೂಡಿ ಬೆರೆತರೆ ಹಾಲು ಜೇನು
ಬಾಳಯಾನಕ್ಕೆ ನಾನು ನೀನು
ಕೂಡಿ ಬೆರೆತರೆ ಹಾಲು ಜೇನು
ಎದೆಯ ಮಾತನು ಕೇಳಬಾರದೆ
ವಿರಹ ತಾಪಕ್ಕೆ ಬಾಳು ನಲುಗಿದೆ
ಎದೆಯ ಮಾತನು ಕೇಳಬಾರದೆ
ವಿರಹ ತಾಪಕ್ಕೆ ಬಾಳು ನಲುಗಿದೆ
ಆಸರೆ ಇಂದು ಬೇಸರದೂರು
ಬರುವೆಯ ಜೊತೆಗಿರುವೆಯ
ಬಾಳಿಗೆ ಸವಿ ತರುವೆಯ
ತವರ ತೊರೆದು ಸೇರಿದ ನಿನ್ನ
ಕಂಡು ಒಂದ ಸವಿಗನಸನ್ನ
ತವರ ತೊರೆದು ಸೇರಿದ ನಿನ್ನ
ಕಂಡು ಒಂದ ಸವಿಗನಸನ್ನ
ಬಾಳಿಗೆ ಭರವಸೆ ನೀಡಿದ ಕರವೆ
ಜೋಡಿಯ ಹೀಗೆ ತೊರೆವುದು ತರವೆ
ಬಾಳಿಗೆ ಭರವಸೆ ನೀಡಿದ ಕರವೆ
ಜೋಡಿಯ ಹೀಗೆ ತೊರೆವುದು ತರವೆ
ನೆರಳು ಬೆಳಕು ಬಿಡಿಸದ ಬಂಧ
ಎಂದು ಬಾಡದು ಈ ಅನುಬಂಧ
ಸೇರುವ ಜೊತೆಯಾಗುವ ಮಾಗುವ ಸಿಹಿಯಾಗುವ
ಬರುವೆಯ ಜೊತೆಗಿರುವೆಯ
ಬಾಳಿಗೆ ಸವಿ ತರುವೆಯ
ಜೋಡಿ ಹಕ್ಕಿಯ ಗೂಡನು
ಕೂಡಿ ಹಾಡಿದ ಹಾಡನು
ಜೋಡಿ ಹಕ್ಕಿಯ ಗೂಡನು
ಕೂಡಿ ಹಾಡಿದ ಹಾಡನು
ಮರೆತೆಯ ಆ ದಿನವನು
ಬಾಳಿನ ಸವಿದನಿಯನು
ಮನದಾಲದ ನೋವನು
ಜೀವದ ಗೆಳತಿಯೆ ತಾಳೆನು
ಬರುವೆಯ ಜೊತೆಗಿರುವೆಯ
ಬಾಳಿಗೆ ಸವಿ ತರುವೆಯ
ಯಾವ ಕಾರಣ ತಿಳಿಯೆನು
ಕದಡಿದೆ ನೀರಿನ ತಿಳಿಯನು
ಯಾವ ಕಾರಣ ತಿಳಿಯೆನು
ಕದಡಿದೆ ನೀರಿನ ತಿಳಿಯನು
ಮರೆತೆಯ ಆ ದಿನವನು
ಬಾಳಿನ ಸವಿದನಿಯನು
ಸಂಸಾರ ತೇಯುವ ಚಂದನ
ರಾಜಿ ಸುಖದ ಸಾಧನ
ಇರುಳಿದು ತಿಳಿಯಾಗದೆ
ಆಸೆಯ ಕುಡಿ ಮೂಡದೆ
ಬಾಳಯಾನಕ್ಕೆ ನಾನು ನೀನು
ಕೂಡಿ ಬೆರೆತರೆ ಹಾಲು ಜೇನು
ಬಾಳಯಾನಕ್ಕೆ ನಾನು ನೀನು
ಕೂಡಿ ಬೆರೆತರೆ ಹಾಲು ಜೇನು
ಎದೆಯ ಮಾತನು ಕೇಳಬಾರದೆ
ವಿರಹ ತಾಪಕ್ಕೆ ಬಾಳು ನಲುಗಿದೆ
ಎದೆಯ ಮಾತನು ಕೇಳಬಾರದೆ
ವಿರಹ ತಾಪಕ್ಕೆ ಬಾಳು ನಲುಗಿದೆ
ಆಸರೆ ಇಂದು ಬೇಸರದೂರು
ಬರುವೆಯ ಜೊತೆಗಿರುವೆಯ
ಬಾಳಿಗೆ ಸವಿ ತರುವೆಯ
ತವರ ತೊರೆದು ಸೇರಿದ ನಿನ್ನ
ಕಂಡು ಒಂದ ಸವಿಗನಸನ್ನ
ತವರ ತೊರೆದು ಸೇರಿದ ನಿನ್ನ
ಕಂಡು ಒಂದ ಸವಿಗನಸನ್ನ
ಬಾಳಿಗೆ ಭರವಸೆ ನೀಡಿದ ಕರವೆ
ಜೋಡಿಯ ಹೀಗೆ ತೊರೆವುದು ತರವೆ
ಬಾಳಿಗೆ ಭರವಸೆ ನೀಡಿದ ಕರವೆ
ಜೋಡಿಯ ಹೀಗೆ ತೊರೆವುದು ತರವೆ
ನೆರಳು ಬೆಳಕು ಬಿಡಿಸದ ಬಂಧ
ಎಂದು ಬಾಡದು ಈ ಅನುಬಂಧ
ಸೇರುವ ಜೊತೆಯಾಗುವ ಮಾಗುವ ಸಿಹಿಯಾಗುವ
ಬರುವೆಯ ಜೊತೆಗಿರುವೆಯ
ಬಾಳಿಗೆ ಸವಿ ತರುವೆಯ
Jodi Hakkiya song lyrics from Kannada Movie Raaji starring Raghavendra Rajkumar (State Award winner), Love S Babu, Pratap Lion, Lyrics penned by H S Venkatesh Murthy Sung by Upasana Mohan, Chinmayi, Music Composed by Upasana Mohan, film is Directed by Preity S Babu and film is released on 2022