Cheluve Kaviyade Lyrics

in Pyarge Aagbitaithe

LYRIC

ಚೆಲುವೇ ಕವಿಯಾದೆ ನಿನ್ನ ಬಣ್ಣಿಸಿ
ಚೆಲುವೇ ಪದದಲ್ಲೆ ನಿನ್ನ ಬಂಧಿಸಿ
ಚೆಲುವೇ ಏಏಏಏ ಮುದ್ದಾದ ನಿನ್ನ ಮಾಧುರ್ಯವನ್ನು
ಈ ಮಾತಿನಲ್ಲಿ ಪೋಣಿಸಿ
ಸವಿಯಾದ ನಿನ್ನ ಸೌಂದರ್ಯವನ್ನು
ನಾ ಹೇಳಬೇಕೆ ಹೋಲಿಸಿ
ಚೆಲುವೇ ಕವಿಯಾದೆ ನಿನ್ನ ಬಣ್ಣಿಸೆ
ಚೆಲುವೇ ಪದದಲ್ಲೆ ನಿನ್ನ ಬಂಧಿಸೆ
 
ಚೆಲುವೇ ಮಿಂಚಿನಂತ ನಿನ್ನಯ ನಡೆಗೆ
ಕುಸುಮಕ್ಕಿಂತ ಕೋಮಲ ನುಡಿಗೆ
ಸೋಲುತಾವೆ ಎಲ್ಲ ರೂಪಕ
ಚೆಲುವೇ ನಿನ್ನ ಕಡೆಯ ಚಂದ್ರನ ಗಮನ
ಕೆನ್ನೆಯಲೆ ಜಾರಿದೆ ಕಿರಣ
ಕನ್ನಡಿಯಲ್ಲು ನಿನ್ನ ಕೌತುಕ
ಚೆಲುವೇ ಕೊಡಲೇನು ಚಿತ್ರ ಛಾಪಿಸಿ
ಚೆಲುವೇ ಕವಿಯಾದೆ ನಿನ್ನ ಬಣ್ಣಿಸಿ
 
ಚೆಲುವೇ ಏ ನಿನ್ನ ಕೋಪ ಸುಂಟರಗಾಳಿ
ನಕ್ಕರಂತು ಸುಂದರ ದಾಳಿ
ನಿಮಿಷಕ್ಕೊಂದು ನಾನಾ ವೈಖರಿ
ಚೆಲುವೇ ನಿನ್ನ ಸ್ವಪ್ನ ಹೇಗಿರಬಹುದು
ಯಾರು ಲಾಲಿ ಮೂಡಿರಬಹುದು
ಅಂದುಕೊಂಡು ಚೂರು ಅಚ್ಚರಿ……..
ಚೆಲುವೇ ನಿನಗಿಂತ ಇಲ್ಲ ರೂಪಸಿ
 
||ಚೆಲುವೇ ಕವಿಯಾದೆ ನಿನ್ನ ಬಣ್ಣಿಸಿ
ಚೆಲುವೇ ಪದದಲ್ಲೆ ನಿನ್ನ ಬಂಧಿಸಿ
ಚೆಲುವೇ ಏಏಏಏ ಮುದ್ದಾದ ನಿನ್ನ ಮಾಧುರ್ಯವನ್ನು
ಈ ಮಾತಿನಲ್ಲಿ ಪೋಣಿಸಿ
ಸವಿಯಾದ ನಿನ್ನ ಸೌಂದರ್ಯವನ್ನು
ನಾ ಹೇಳಬೇಕೆ ಹೋಲಿಸಿ||
 
||ಚೆಲುವೇ ಕವಿಯಾದೆ ನಿನ್ನ ಬಣ್ಣಿಸಿ
ಚೆಲುವೇ ಪದದಲ್ಲೆ ನಿನ್ನ ಬಂಧಿಸಿ||
 
||ಚೆಲುವೇ ಕವಿಯಾದೆ ನಿನ್ನ ಬಣ್ಣಿಸಿ||

Cheluve Kaviyade song lyrics from Kannada Movie Pyarge Aagbitaithe starring Komal Kumar, Prarthana, Akul Balaji, Lyrics penned by Jayanth Kaikini Sung by Santhosh, Music Composed by Dharma Theja, film is Directed by Kavin Bala and film is released on 2013