Yaava Oora Lyrics

in Parapancha

LYRIC

ಯಾವ ಊರ ಪೋರ ನೀನು
ಕಾರಣವಿಲ್ಲದೆ ಒಮ್ಮೆ ಕಚ್ಚಲೇನು
ಹದ್ದು ಮೀರಿ ಪೆದ್ದಿ ನಾನು
ಕದ್ದು ಒಮ್ಮೆ ನಿನ್ನ ಮೀಸೆ ಮುಟ್ಟಲೇನು
ಇರಲಾರೆ ಇನ್ನು ಇರಲಾರೆ
ನನ್ನ ಮೇಲೆ ನಂಗೇನೆ ಸಿಟ್ಟು ಬಂದಿದೆ
ಹೇಳು ನೀ ಯಾತಕೆ ಅಡ್ಡ ಸಿಕ್ಕಿದೆ
ಯಾವ ಊರ ಪೋರ ನೀನು
ಕಾರಣವಿಲ್ಲದೆ ಒಮ್ಮೆ ಚಚ್ಚಲೇನು
 
ಕಣ್ಣಲ್ಲೆಷ್ಟೆ ಕಣ್ಣು ಸೇರಿದರು ಸಾಲಲ್ಲ
ನಾನಿಂತ ಕಿಡಿಗೇಡಿ ನನಗೆ ಗೊತ್ತಿರಲಿಲ್ಲ
ಪ್ರೀತಿ ಎಂದರೇನು ತಿಳಿಯಬೇಕಾಗಿಲ್ಲ
ಇಂತ ಮುದ್ದು ಮೋರೆ ಸಿಕ್ಕರೆ ಸಾಕಲ್ಲ
ನಿಂತಿರುವೆ ನಾನು ನಿಂತಿರುವೆ
ಮಳ್ಳ ಮನಸ್ಸು ಈಗಾಗಲೆ ಮುಂದೆಹೋಗಿದೆ
ಕಳ್ಳ ಕನ್ನಡಿಯೇನೊ ಅಂದ ಹಾಗಿದೆ
 
||ಯಾವ ಊರ ಪೋರ ನೀನು
ಕಾರಣವಿಲ್ಲದೆ ಒಮ್ಮೆ ಕಚ್ಚಲೇನು||
 
ನಾನೇನಾದರು ನಿನ್ನ ಬಿಗಿದಪ್ಪಿ ಕೊಂಡರೆ
ಬೈಬೇಡ ಮಹರಾಯ ನಂದೇನು ತಪ್ಪಿಲ್ಲ
ಹುಂಬು ಧೈರ್ಯವೊಂದು ಮೈದುಂಬಿಕೊಂಡಾಗ
ನಾಚಿಕೆ ಕಿಂಚಿತ್ತು ಕಾಪಾಡಲೆ ಇಲ್ಲ
ಒಟ್ಟಿನಲಿ ಕೊನೆಗೆ ಒಟ್ಟಿನಲಿ ನಂಗು ಹೇಳದೆ
ಹರೆಯವು ತುಂಬ ಸೊಕ್ಕಿದೆ
ಕಮ್ಮಿ ಹೇಳಿದೆ ನಾನು ತುಂಬ ಮಿಕ್ಕಿದೆ
 
||ಯಾವ ಊರ ಪೋರ ನೀನು
ಕಾರಣವಿಲ್ಲದೆ ಒಮ್ಮೆ ಕಚ್ಚಲೇನು
ಹದ್ದು ಮೀರಿ ಪೆದ್ದಿ ನಾನು
ಕದ್ದು ಒಮ್ಮೆ ನಿನ್ನ ಮೀಸೆ ಮುಟ್ಟಲೇನು||

Yaava Oora song lyrics from Kannada Movie Parapancha starring Diganth, Ragini Dwivedi, Raviraj, Lyrics penned by Yogaraj Bhat Sung by Vani Harikrishna, Music Composed by Veer Samarth, film is Directed by Krish Joshi and film is released on 2016