Kanda Kanasu-female Lyrics

in Kelavu Dinagala Nanthara

LYRIC

ಕಂಡ ಕನಸು ನೂರಾದಂದು ಧರೆಗೆ ಉರುಳಿತೆ
ಜೀವ ದೇಹ ಚೂರಾದಂದು ಏನು ಉಳಿಯಿತೆ
ಬಿಡದ ಪ್ರೇಮದಾಹದ ಬಯಸಿ ಬಂದ ಆತ್ಮದ
ತಾಳಲಾರದ ವೇದನೆಯ ಎದೆಭಾರ
ಕಂಡ ಕನಸು ನೂರಾದಂದು ಧರೆಗೆ ಉರುಳಿತೆ
ಜೀವ ದೇಹ ಚೂರಾದಂದು ಏನು ಉಳಿಯಿತೆ
 
ಇವನು ಅವಳೊಳಗಿನ ಇವಳು ಅವನೊಳಗಿನ
ಭಾವ ಭ್ರಮೆಯೆ ಬದುಕು ಭವವಿಶ್ರಾಂತ
ಹೃದಯದ ನೋವಿನ ಬಡವನೆ ಓ ಚೇತನ
ಜಗವೆ ಬೇಡ ಪಯಣಿಸು ಭವವಿಶ್ರಾಂತ
ಹಗಲಲಿ ಹುಡುಗಾಟದ ಮನ ಇರುಳಲಿ ಹುಡುಕಾಡಿದೆ
ಬರಿದೆ ಬರಡು ಬಾಳ ಆಟ ಕುರುಡು
ಕರುಳ ಕುಡಿಯು ಕಾಯುತಲಿಹುದು ಹಾಲು ಉಣಿಸಲು
ಕಾಂತ ಮನದ ಬಂಧ ಬಿಸುಡು ನಿಶೆಯ ಜಗದೊಳು